ಬಿಗ್ ಬಾಸ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ, ಅವಳಿ ಜವಳಿ ಎಂಟ್ರಿ
Sep 20, 2024, 12:08 IST
|

ಬಿಗ್ ಬಾಸ್ ಸೀಸನ್ 11ಕ್ಕೆ ದಿನಗಣನೆ ಅರಂಭವಾಗಿದೆ. ವಾಹಿನಿ ಸಕಲ ಸಿದ್ಧತೆ ಮಾಡುತ್ತಿದೆ. ಸ್ಪರ್ಧಿಗಳು ಉಳಿದುಕೊಳ್ಳುತ್ತಿರುವ ಮನೆಯಲ್ಲಿ ಸಣ್ಣ ಪುಟ್ಟ ಬದಲಾವಣೆಗಳಾಗುತ್ತಿವೆ. ಇದುವರೆಗೂ ಕನ್ನಡದಲ್ಲಿ 10 ಸೀಸನ್‌ಗಳು ಯಶಸ್ವಿಯಾಗಿದೆ. ಹಿಂದಿ ಬಿಟ್ಟರೆ ಭಾರತೀಯ ಕಿರುತೆರೆಯಲ್ಲಿ ಹೆಚ್ಚು ಸೀಸನ್‌ಗಳು ಹೋಸ್ಟ್ ಆಗಿರುವುದು ಕನ್ನಡದಲ್ಲೇ. ವೀಕ್ಷಕರು ಕೂಡಾ ಈ ಬಾರಿಯ ಶೋ ನೋಡಲು ಕಾಯುತ್ತಿದ್ದಾರೆ.
ಪ್ರತಿ ಬಾರಿಯಂತೆ ಈ ಬಾರಿಯ ಬಿಗ್ ಬಾಸ್ ಶೋ ಬಗ್ಗೆ ಚರ್ಚೆ ಆರಂಭವಾಗಿದೆ. ಕಳೆದ ಬಾರಿಗಿಂತ ತುಸು ಹೆಚ್ಚೇ ಎಂದರೂ ತಪ್ಪಾಗುವುದಿಲ್ಲ. ಇದಕ್ಕೆ ಕಾರಣ ಈ ಕಾರ್ಯಕ್ರಮ ನಿರೂಪಣೆ ಯಾರು ಅನ್ನೋದು. ಪ್ರತಿ ಬಾರಿ ಕಾರ್ಯಕ್ರಮ ಆರಂಭವಾದಾಗಲೆಲ್ಲಾ ಇಷ್ಟು ವರ್ಷಗಳ ಕಾಲ ನಿರೂಪಣೆ ಮಾಡುತ್ತಿದ್ದ ಸುದೀಪ್ ಬದಲಿಗೆ ಈ ಬಾರಿ ಬೇರೆಯವರು ಬರುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿತ್ತು. ಆದರೆ ಸುದೀಪ್ ಅವರೇ ಫೈನಲ್ ಎಂದು ಚಾನೆಲ್ ರಿವೇಲ್ ಮಾಡಿದೆ.
ಈ ಬಾರಿ ನಟಿ ಪ್ರೇಮ, ಮಜಾ ಭಾರತ ಖ್ಯಾತಿಯ ರಾಘವೇಂದ್ರ, ತುಕಾಲಿ ಸಂತು ಪತ್ನಿ ಮಾನಸ ಜೊತೆಗೆ ಸೋಷಿಯಲ್ ಮೀಡಿಯಾ ಇನ್‌ಫ್ಲುಯರ್‌ಗಳು, ಕಿರುತೆರೆ ಕಲಾವಿದರು ದೊಡ್ಮನೆ ಸೇರಲಿದ್ದಾರೆ. ಇವರ ಜೊತೆಗೆ ಇನ್ನೂ ಕೆಲವು ಹೆಸರುಗಳು ಹೊಸದಾಗಿ ಕೇಳಿ ಬಂದಿದೆ. ಸ್ಯಾಂಡಲ್‌ವುಡ್ ಅವಳಿ ಸಹೋದರಿಯರಾದ ಅದ್ವಿತಿ ಶೆಟ್ಟಿ-ಅಶ್ವಿತಿ ಶೆಟ್ಟಿ ಈ ಬಾರಿ ಸ್ಪರ್ಧಿಗಳಾಗಿ ಬರಬಹುದು ಎನ್ನಲಾಗುತ್ತಿದೆ. ಕಳೆದ ಸೀಸನ್‌ನಲ್ಲಿ ಕೂಡಾ ಇವರ ಹೆಸರು ಕೇಳಿಬಂದಿತ್ತು. ಒಂದು ವೇಳೆ ಈ ಬಾರಿ ಬಂದರೆ ಬಿಗ್ ಬಾಸ್ ಸೀಸನ್‌ಗಳಲ್ಲಿ ಇದು ಮೊದಲ ಪ್ರಯೋಗವಾಗಿದೆ.
ಕಳೆದ ಹಲವು ಸೀಸನ್‌ಗಳಿಂದ ಬಿಗ್ ಬಾಸ್‌ಗೆ ಹೋಗುವ ಕುರಿತು ಈ ಅವಳಿ ಸಹೋದರಿಯರ ಹೆಸರು ಕೇಳಿ ಬರುತ್ತಲೇ ಇದೆ. ಪ್ರತಿ ಸೀಸನ್ ಬಂದಾಗಲೂ ಇವರ ಸದ್ದು ಮಾಡುತ್ತದೆ. ಈ ಬಾರಿಯೂ ಹಾಗೇ ಆಗಿದೆ. ಅದಕ್ಕೆ ಇನ್ಸ್ಟ್ರಾಗ್ರಾಂ ಸ್ಟೋರಿ ಶೇರ್ ಮಾಡಿ, ಎಲ್ಲರಿಗೂ ನಮಸ್ಕಾರ, ನಾನು ಹಲವು ಪೋಸ್ಟ್‌ಗಳನ್ನು ನೋಡಿದೆ, ಬಿಗ್ ಬಾಸ್‌ಗೆ ಈ ಬಾರಿ ನಾನು ಮತ್ತು ಸಹೋದರಿ ಅಶ್ವಿತಿ ದೊಡ್ಮನೆಗೆ ಹೋಗುವ ಕುರಿತು. ನಾವು ಬಿಗ್ ಬಾಸ್‌ಗೆ ಹೋಗುತ್ತೇವೆ ಎಂದು ಎಲ್ಲೂ ಅಧಿಕೃತವಾಗಿ ಹೇಳಿಲ್ಲ ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.