ಹನುನಂತ ನನ್ನ‌ ಕ್ಷಮಿಸು, ಜಾತಿ ನಿಂದನೆ ಮಾಡಿ ನಿನ್ನ ಮನಸ್ಸಿಗೆ ನೋವು ಕೊಟ್ಟೆ, ಹಂಸ

 | 
ಕ್
ಬಿಗ್‌ಬಾಸ್‌ ಮನೆಯಲ್ಲಿ ಈ ಹಿಂದೆ ಯಾರೂ ಕೂಡ ಮಾಡದ ಸಾಧನೆಯನ್ನು ಗಾಯಕ ಹನುಮಂತ ಲಮಾಣಿ ಮಾಡಿದ್ದಾರೆ. 5 ಕೋಟಿಗೂ ಹೆಚ್ಚು ಮತಗಳನ್ನು ಗಳಿಸಿದ ಕುರಿಗಾಯಿ ಹನುಮಂತ ಸಖತ್ ಹವಾ ಕ್ರಿಯೇಟ್ ಮಾಡಿದ್ದಾರೆ. ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಹನುಮಂತ ಟ್ರೋಫಿ ಪಡೆದು ಗೆದ್ದು ಬೀಗಿದ್ದಾರೆ. ಆದರೆ ಹನುಮಂತನ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ ಜನ ಈಗ ಸೈಲೆಂಟ್ ಆಗಿದ್ದಾರೆ. 
ಕ್ಷಮೆ ಕೇಳಿ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವನ್ನೂ ಹಂಚಿಕೊಂಡಿದ್ದಾರೆ.ಬಿಗ್‌ಬಾಸ್‌ ಮನೆಯಲ್ಲಿ ಹನುಮಂತ ಸಿಂಪತಿ ಕ್ರಿಯೇಟ್ ಮಾಡಿದ್ದಾರೆ, ಸರಳತೆ ನಾಟಕ ಆಡುತ್ತಿದ್ದಾರೆ, ದಲಿತಾ ಎನ್ನುವ ಜಾತಿ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ ಇಂತೆಲ್ಲಾ ಮಾತುಗಳು ಕೇಳಿ ಬಂದಿದ್ದವು. ಈಗ ಹನುಮಂತನ ಭರ್ಜರಿ ಗೆಲುವು ಅದಕ್ಕೆಲ್ಲ ಉತ್ತರ ಕೊಟ್ಟಿದೆ. ಹನುಮಂತನ ಬಗ್ಗೆ ನೆಗೆಟಿವ್‌ ಮಾತನಾಡಿದ ಮಂದಿ ಈಗ ಹನುಮಂತನಿಗೆ ಸಿಕ್ಕ ಮತಗಳನ್ನು ನೋಡಿ ಗಪ್‌ಚುಪ್ ಆಗಿದ್ದಾರೆ.
ಬಿಗ್‌ಬಾಸ್‌ ಸ್ಪರ್ಧಿ ಹಂಸ, ಜಾತಿ ಮೀಸಲಾತಿ ಕಾರಣಕ್ಕೆ ಹನುಮಂತನಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದರು. ಅಷ್ಟೇ ಅಲ್ಲ 'ನಾವು ಶಾಲೆ ಕಾಲೇಜುಗಳಲ್ಲಿ ಓದುತ್ತಿದ್ದಾಗ ಜನರಲ್ ಕೆಟಗರಿಯವರು ಎಂದು ಎಷ್ಟೇ ಓದಿ ದಬಾಕಿದ್ರುನು ಕಡೆಗಣಿಸುತ್ತಾರೆ. ಇಲ್ಲಿ ಬಡವರು, ಹಳ್ಳಿಯವರು ಎಂದ ತಕ್ಷಣ ಜನ ತಲೆಮೇಲೆ ಹೊತ್ತು ಮೆರೆಸುತ್ತಾರೆ' ಎಂದು ಹಂಸ ಹೇಳಿದ್ದರು. ಹನುಮಂತ ಒಬ್ಬ ದಲಿತ ಹೀಗಾಗಿ ಆತನಿಗೆ ಬೆಂಬಲ ಹೆಚ್ಚಾಗಿದೆ ಪರೋಕ್ಷವಾಗಿ ಹೇಳಿದ್ದರು. ಈ ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹಂಸ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಲಾಗಿತ್ತು.
ಪ್ರಸ್ತುತ ಹನುಮಂತ ಗೆಲುವಿನ ಬಳಿಕ ಹಂಸ ಅವರು ತಾವು ಮಾತನಾಡಿದ್ದಕ್ಕೆ ಕ್ಷಮೆಯನ್ನು ಕೇಳಿದ್ದಾರೆ. ಹಂಸ ಕ್ಷಮೆ ಕೇಳಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾನು ಒಂದು ಚಾನೆಲ್‌ನಲ್ಲಿ ಕೊಟ್ಟ ಸ್ಟೇಟ್‌ಮೆಂಟ್ ತುಂಬಾ ವಿವಾದ ಸೃಷ್ಟಿ ಮಾಡಿದೆ. ಕೆಲವರು ಅದನ್ನು ಬೇರೆ ರೀತಿ ಅರ್ಥೈಸಿಕೊಂಡು ಬೇರೆ ಬೇರೆ ತಿರುವುಗಳನ್ನು ಕೊಡುತ್ತಿದ್ದಾರೆ. ಖಂಡಿತವಾಗಿಯೂ ನನ್ನ ಮಾತಿನ ಅರ್ಥ ಅದಾಗಿರಲಿಲ್ಲ. 
ನನ್ನ ಮಾತಿನಿಂದ ಯಾರಿಗಾದರೂ ಬೇಸರ ಆಗಿದ್ದರೆ ಅವರಿಗೆಲ್ಲಾ ನಾನು ಕ್ಷಮೆ ಕೇಳುತ್ತೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ, ದೊಡ್ಡ ಮನಸ್ಸು ಮಾಡಿ ನನ್ನ ಮಾತುಗಳನ್ನು ಮರೆತುಬಿಡಿ. ಈ ವಿಷಯವನ್ನು ಇಲ್ಲಿಗೆ ಬಿಟ್ಟುಬಿಡಿ' ಎಂದು ಹಂಸ ಕ್ಷಮೆಯಾಚಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.