ಇನ್ನುಮುಂದೆ ಎಲ್ಲಾ ಹೋಟೆಲ್ ನಲ್ಲೂ ಫ್ರೀ ಕಾಂ.ಡೋಮ್, ಫಿದಾ ಆದ ಯುವಕ ಯುವತಿಯರು
ಇದು ನಿಜಕ್ಕೂ ಆಶ್ಚರ್ಯ ಮೂಡುವಂತಹ ಸುದ್ದಿ ಹೌದು ಇಂದು ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಲ್ಲದೆ ಅಸುರಕ್ಷಿತ ಲೈಂಗಿಕತೆಯ ಕಾರಣದಿಂದ ಏಡ್ಸ್ ರೋಗದ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಈ ರೋಗವನ್ನು ತಡೆಗಟ್ಟಲು ಹಾಗೂ ಜನಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ ಕಾಂಡೋಮ್ ಬಳಕೆಗೆ ಸಂಬಂಧಿಸಿದಂತೆ ಪ್ರಪಂಚದಾದ್ಯಂತ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಅದೇ ರೀತಿ ಉಗಾಂಡ ದೇಶದಲ್ಲಿಯೂ ಕೂಡಾ ಲೈಂಗಿಕವಾಗಿ ಹರಡುವಂತಹ ಸೋಂಕುಗಳನ್ನು ತಡೆಗಟ್ಟಲು ಹಾಗೂ ಜನಸಂಖ್ಯೆಯನ್ನು ನಿಯಂತ್ರಿಸಲು ಇಲ್ಲಿನ ಸರ್ಕಾರ ವಿಶೇಷ ಉಪಕ್ರಮವನ್ನು ತಗೆದುಕೊಂಡಿದೆ. ಅದೇನೆಂದರೆ, ಈ ದೇಶದ ಪ್ರತಿಯೊಂದು ಹೋಟೆಲ್ ರೂಮ್ಗಳಲ್ಲಿಯೂ ಕಡ್ಡಾಯವಾಗಿ ಫ್ರೀ ಕಾಂಡೋಮ್ಗಳನ್ನು ಇಟ್ಟಿರಲೇಬೇಕು ಎಂಬ ಕ್ರಮವನ್ನು ತೆಗೆದುಕೊಂಡಿದೆ.
ಹೋಟೇಲ್ಗಳಲ್ಲಿ ತಂಗುವಂತಹ ದಂಪತಿಗಳಿಗಾಗಿ ಈ ಒಂದು ವಿಶೇಷ ಕ್ರಮವನ್ನು ತೆಗೆದುಕೊಳ್ಳಲಾಗಿದೆ, ಈ ಮಾಹಿತಿಪೂರ್ಣ ವಿಡಿಯೋವನ್ನು ಟ್ರಾವೆಲ್ ವ್ಲಾಗರ್ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ಈ ವಿಡಿಯೋ ಭಾರೀ ವೈರಲ್ ಆಗಿದೆ. ಅಷ್ಟಕ್ಕೂ ವೈರಲ್ ವಿಡಿಯೋವನ್ನು ಶಬೀರ್ ಅಹಮದ್ (@thepaktrekker) ಎಂಬ ಟ್ರಾವೆಲ್ ವ್ಲಾಗರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ .
ಉಗಾಂಡ ದೇಶದ ಹೋಟೆಲ್ ರೂಮ್ಗಳಲ್ಲಿ ಏತಕ್ಕಾಗಿ ಫ್ರೀ ಕಾಂಡೋಮ್ಗಳನ್ನು ಇಟ್ಟಿದ್ದಾರೆ ಎಂಬುದಕ್ಕೆ ವಿವರಣೆಯನ್ನು ನೀಡುವುದನ್ನು ಕಾಣಬಹುದು. ಹೋಟೆಲ್ಗಳಲ್ಲಿ ತಂಗುವ ದಂಪತಿಗಳ ಸಲುವಾಗಿ ಇಲ್ಲಿನ ಪ್ರತಿಯೊಂದು ಹೋಟೆಲ್ಗಳಲ್ಲಿ ಫ್ರೀ ಕಾಂಡೋಮ್ಗಳನ್ನು ಇಡಲಾಗಿದೆ. ಇದು ಜನಸಂಖ್ಯೆಯನ್ನು ನಿಯಂತ್ರಿಸಲು ಇಲ್ಲಿನ ಸರ್ಕಾರ ತಗೆದುಕೊಂಡಂತಹ ವಿಶೇಷ ಕ್ರಮವಾಗಿದೆ ಎಂದು ಅವರು ವಿಡಿಯೋದಲ್ಲಿ ವಿವರಣೆಯನ್ನು ನೀಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.