ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆ, ಬಡವರಿಗೆ ನುಂಗಲಾರದ ನಷ್ಟ

 | 
S

ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್‌ಗಳ ಬೆಲೆ ಮತ್ತೆ ಏರಿಕೆ ಕಂಡಿದೆ. 19 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್‌ಗೆ 21 ರೂ. ಹೆಚ್ಚಳ ಮಾಡಲಾಗಿದೆ. ಆದರೆ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ಏರಿಕೆ ಮಾಡಿಲ್ಲ. ಅಷ್ಟರಮಟ್ಟಿಗೆ ಜನಸಾಮಾನ್ಯರು ನಿರಾಳರಾಗಿದ್ದಾರೆ.

ಇಂದಿನಿಂದ ಅಂದರೆ ಡಿಸೆಂಬರ್ 1, 2023ರಿಂದ ಅನ್ವಯವಾಗುವಂತೆ ರಾಜಧಾನಿ ದಿಲ್ಲಿಯಲ್ಲಿ ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್‌ ದರ 1796.50 ರೂ.ಗೆ ಹೆಚ್ಚಳ ಮಾಡಲಾಗಿದೆ. ಇಲ್ಲಿ ಕಳೆದ ತಿಂಗಳು ಇದೇ ಗ್ಯಾಸ್ ಸಿಲಿಂಡರ್‌ಗೆ 1775.50 ರೂ. ದರ ಇತ್ತು.ಆದರೆ, 14.2 ಕೆಜಿ ತೂಕದ ಸದ್ಯ ಸಬ್ಸಿಡಿ ಹೊಂದಿರುವ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ.

ದೆಹಲಿಯಲ್ಲಿ 1,796.50 ರೂಪಾಯಿ.ಕೋಲ್ಕತ್ತಾ1,908.00 ರೂಪಾಯಿ.ಮುಂಬೈ1,749.00 ರೂಪಾಯಿ.ಬೆಂಗಳೂರು 1,883.00 ರೂಪಾಯಿ.ಚೆನ್ನೈ1,968.50 ರೂಪಾಯಿ  ಈಗ
ಬೆಂಗಳೂರಿನಲ್ಲಿ ಇದೇ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ 26 ರೂ. ಹೆಚ್ಚಳವಾಗಿದ್ದು, 1883 ರೂ.ಗೆ ತಲುಪಿದೆ.

ಇದಕ್ಕೂ ಮೊದಲು ಕಳೆದ ತಿಂಗಳು ಅಂದರೆ ನವೆಂಬರ್ 1ರಂದು ಸಹ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 100 ರೂ.ಗಿಂತ ಹೆಚ್ಚು ಏರಿಕೆ ಮಾಡಲಾಗಿತ್ತು. ಅಕ್ಟೋಬರ್‌ನಲ್ಲಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 1,731.50 ರೂ.ನಷ್ಟಿದ್ದ ಎಲ್‌ಪಿಜಿ ಸಿಲಿಂಡರ್‌ ದರ ನವೆಂಬರ್ 1ರಂದು 101.50 ರೂ.ನಷ್ಟು ರಷ್ಟು ದುಬಾರಿಯಾಗಿ ಪ್ರತಿ ಸಿಲಿಂಡರ್‌ಗೆ 1,833 ರೂ.ಗೆ ತಲುಪಿತ್ತು.

 ಇದಾದ ಬಳಿಕ ನವೆಂಬರ್ 16ರಂದು ವಾಣಿಜ್ಯ ಬಳಕೆ ಅಡುಗೆ ಅನಿಲದ ಬೆಲೆ 57.05 ರೂ.ಗಳಷ್ಟು ಅಗ್ಗವಾಗಿ 1775.50 ರೂ.ಗೆ ಬಂದಿತ್ತು.ವಾಣಿಜ್ಯ ಬಳಕೆ ಅಡುಗೆ ಅನಿಲದ ಬೆಲೆ ಏರಿಕೆಯ ಪರಿಣಾಮ ಆಹಾರ ಉದ್ಯಮ ಮತ್ತು ರೆಸ್ಟೋರೆಂಟ್ ವ್ಯವಹಾರದ ಮೇಲೆ ಬೀಳಲಿದೆ. ಸಾಮಾನ್ಯ ಜನರಿಗೆ ಹೋಟೆಲ್‌ ಆಹಾರ ದುಬಾರಿಯಾಗಲಿದೆ.

ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ 200 ರೂ. ಸಬ್ಸಿಡಿ ಬಳಿಕ 14.2 ಕೆಜಿ ತೂಕದ ಗೃಹ ಬಳಕೆಯ ಅಡುಗೆ ಅನಿಲ ದರ 905.50 ರೂ. ಇದೆ. ಉಜ್ವಲ ಯೋಜನೆ ಫಲಾನುಭವಿಗಳಿಗೆ ಇದೇ ಸಿಲಿಂಡರ್‌ ಮೇಲೆ 300 ರೂ. ಸಬ್ಸಿಡಿ ಇದ್ದು, ಇದೇ ಸಿಲಿಂಡರ್‌ 605.50 ರೂ.ಗೆ ಸಿಗಲಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.