ಕೊನೆಯ ವಾರದ‌ ಎಲಿಮಿನೇಷನ್ ಮುನ್ನ ಗೌತಮಿ ಗಂಡನ ಕೊನೆಯ ಮಾತು, ಮಂಜು ವರ್ತನೆ ಸರಿ ಇಲ್ಲ

 | 
Hi
ಕನ್ನಡದ ಬಿಗ್​ಬಾಸ್​ ಸೀಸನ್​ 109ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಅಚ್ಚರಿಯ ರೀತಿಯಲ್ಲಿ ಬಿಗ್​ಬಾಸ್​ ಮನೆಯಿಂದ ಯಾವ ಸ್ಪರ್ಧಿಯೂ ಆಚೆ ಬಂದಿಲ್ಲ. 108 ದಿನಗಳ ಕಾಲ ಬಿಗ್​ಬಾಸ್​ ಮನೆಯಲ್ಲಿ ನಿನ್ನೆಯ ಮಿಡ್ ವೀಕ್​ ಎಲಿಮಿನೇಷನ್​ನಲ್ಲಿ ಬಿಗ್​ಬಾಸ್​ ಬಿಗ್​ ಟ್ವಿಸ್ಟ್ ಕೊಟ್ಟಿದ್ದಾರೆ.​ ​
ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಮಂದಿ ಗೌತಮಿ ಆಚೆ ಬರುತ್ತಾರೆ ಅಂತ ಗುಸು ಗುಸು ಶುರುವಾಗಿತ್ತು. ಕೊನೆಯ ಕ್ಷಣದಲ್ಲಿ ಬಿಗ್​ಬಾಸ್​ ಮಿಡ್​ ವೀಕ್​ ಎಲಿಮಿನೇಷನ್​ ಮುಂದೂಡಿಕೆ ಮಾಡಿದ್ದಾರೆ. ಹೀಗಾಗಿ ಸಾಕಷ್ಟು ಊಹಾಪೋಹಗಳಿಗೆ ತೆರೆ ಬಿದ್ದಿದ್ದೆ. ಕನ್ನಡದ ಸತ್ಯ ಸೀರಿಯಲ್​ ನಟಿ ಗೌತಮಿ ಜಾಧವ್​ ಬಿಗ್​ಬಾಸ್​ ಮನೆಯಲ್ಲಿ ಒಂದು ರೇಂಜ್​ಗೆ ಸೌಂಡ್ ಮಾಡಿದ್ದಾರೆ. 
ಈ ಹಿಂದೆ ಗೌತಮಿ ಅವರ ಪರ್ಫಾಮನ್ಸ್​ ಖಡಕ್​ ಆಗಿ ಇರಬೇಕು ಅಂತ ವೀಕ್ಷಕರು ಕೂಡ ನಿರೀಕ್ಷಿಸುತ್ತಿದ್ದರು.  ಬೆನ್ನಲ್ಲೇ ವೀಕ್ಷಕರ ಕನಸ್ಸನ್ನು ಒಂದು ಮಟ್ಟಿಗೆ ನನಸು ಮಾಡಿದ್ರು. ವೀಕ್ಷಕರು ಸುಮಾರು 3 ವರ್ಷಗಳ ಕಾಲ ಗೌತಮಿ ಅವರನ್ನ ಸತ್ಯನ್ನೋ ಖಡಕ್​ ಪಾತ್ರದಲ್ಲಿಯೇ ನೋಡಿದ್ದಾರೆ. ಯಾವುದೇ ಶೋಗೆ ಬಂದ್ರೂ ಅದೇ ಪಾತ್ರದಲ್ಲಿಯೇ ಎಂಟ್ರಿಯಾಗ್ತಿದ್ರು. ಅಲ್ಲೊಂದು ಇಲ್ಲೊಂದು ಸಂದರ್ಶನವೊಂದರಲ್ಲಿ ಬಿಟ್ಟರೆ ಗೌತಮಿ ನಿಜ ಜೀವನಲ್ಲಿ ಹೇಗಿರ್ತಾರೆ ಅನ್ನೋದು ವೀಕ್ಷಕರಿಗೆ ಗೊತ್ತೇ ಇರಲಿಲ್ಲ.
ಇನ್ನು ಇಂದು ಗೌತಮಿ ಪತಿ ಅಭಿಷೇಕ್ ಅವರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಗೌತಮಿಗೆ ಓಟ್ ಮಾಡಿದ ಪ್ರತಿಯೊಬ್ಬರಿಗೂ ಅಭಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಓಟ್‌ ಮಾಡುವುದು ಎಷ್ಟು ಕಷ್ಟ ಅನ್ನೋದನ್ನೂ ಕೂಡ ಅಭಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.  ಅವಳನ್ನು ವೋಟ್ ಮಾಡಿ ಇಷ್ಟು ದಿನ ಆಡಲು ಅನುವು ಮಾಡಿ ಕೊಟ್ಟಿದ್ದೀರಿ ಎಂದು ಮುಂದೆಯೂ ಹೀಗೆ ಸಪೋರ್ಟ್ ಮಾಡುವಂತೆ ಕೇಳಿಕೊಂಡಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.