ಬೆಂಗಳೂರಿನ ನೆಲಮಂಗಲದಲ್ಲಿ ರಾತ್ರಿ 2 ಗಂಟೆಗೆ ಬೈಕ್ ಸವಾರಿ ಮಾಡಿದ ದೆವ್ವ, ಇದು ನಿಜ ಎಂದ ವಿಜ್ಞಾನಿಗಳು
Updated: Nov 6, 2024, 13:36 IST
|
ಭೂತ, ಪ್ರೇತ, ಆತ್ಮಗಳು ನಿಜವಾಗಿಯೂ ಇವೆಯೆ? ಹೌದು ಎನ್ನುವವರು ಎಷ್ಟು ಮಂದಿ ಇದ್ದಾರೋ, ಇವೆಲ್ಲಾ ಭ್ರಮೆ ಎನ್ನುವವರೂ ಅಷ್ಟೇ ಜನರಿದ್ದಾರೆ. ತಮ್ಮ ಅನುಭವಕ್ಕೆ ಬಂದಿರುವ ಹಲವಾರು ಭಯಾನಕ ಘಟನೆಗಳನ್ನು ವಿವರಿಸಿ, ಭೂತದ ಇರುವಿಕೆಯನ್ನು ಸಾರುವವರೂ ಇದ್ದರೆ, ಅವೆಲ್ಲವೂ ನಿಮ್ಮ ಮನಸ್ಸಿನ ಭ್ರಮೆ ಎಂದು ಹೇಳುವವರೂ ಸಿಗುತ್ತಾರೆ. ದೇವರು, ದೆವ್ವ ಎಲ್ಲವೂ ಅವರವರ ನಂಬಿಕೆ, ವಿಶ್ವಾಸದ ಮೇಲೆ ಇದೆ.
ಆದರೆ ಸಾಮಾನ್ಯ ಜನರಿಗೆ ನಿಲುಕದ ಅದೆಷ್ಟೋ ಅಲೌಕಿಕ ಘಟನೆಗಳು ನಮ್ಮ ಸುತ್ತಲೂ ನಡೆಯುತ್ತಲೇ ಇರುತ್ತವೆ ಎನ್ನುವುದು ಮಾತ್ರ ದಿಟ. ವಿಜ್ಞಾನಕ್ಕೂ ನಿಲುಕದ, ಯಾವುದೇ ಪ್ರಯೋಗಕ್ಕೂ ಮೀರಿದ ಹಲವಾರು ಘಟನೆಗಳು, ಚಿತ್ರ-ವಿಚಿತ್ರ ಎನಿಸುವ ವಿಷಯಗಳು ಆಗಾಗ್ಗೆ ನಡೆಯುವುದು ಹಲವರಿಗೆ ಅನುಭವಕ್ಕೆ ಬಂದಿದೆ. ಅವರವರ ನಂಬಿಕೆ ಅವರವರದ್ದು.
ಇದೀಗ ಬೆಂಗಳೂರಿನ ನೆಲಮಂಗಲದ ಬೈಕ್ನ ಹಿಂದುಗಡೆ ಭೂತ ಒಂದು ಸವಾರಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಕಾರಿನಲ್ಲಿ ಹೋಗುತ್ತಿರುವ ವ್ಯಕ್ತಿಯೊಬ್ಬರು ಇದರ ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ. ಇದರ ವಿಡಿಯೋ ಅನ್ನು ಅಲೆಮಾರಿ ಪ್ರಸನ್ನ ಎನ್ನುವವರು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಬಿಳಿಯ ಬಣ್ಣದ ಬಟ್ಟೆ ಗಾಳಿಯಲ್ಲಿ ಹಾರಾಡುತ್ತಿದೆ.
ಇದಕ್ಕೆ ಅವರು ನಿನ್ನೆ ರಾತ್ರಿ ನೆಲಮಂಗಲ ಬೆಂಗಳೂರು ರಸ್ತೆಯಲ್ಲಿ ಸವಾರನಿಗೆ ಅರಿವಿಲ್ಲದಂತೆ ದ್ವಿಚಕ್ರ ವಾಹನದ ಹಿಂದಿನ ಸೀಟಲ್ಲಿ ಕುಳಿತು ಸವಾರಿ ಮಾಡಿದ ಬಿಳಿ ದೆವ್ವ ಎಂದು ಕ್ಯಾಪ್ಷನ್ ಕೊಟ್ಟು ಶೇರ್ ಮಾಡಿದ್ದಾರೆ.
ಇದನ್ನು ನೋಡಿ ನೆಟ್ಟಿಗರು ಬಿದ್ದೂ ಬಿದ್ದೂ ನಗುತ್ತಿದ್ದಾರೆ. ಭೂತಕ್ಕೆ ಕಾಲು ಮತ್ತು ಪ್ಯಾಂಟ್ ಯಾಕೆ ಇದೆ ಎಂದು ಪ್ರಶ್ನಿಸುತ್ತಿದ್ದಾರೆ. ಅಸಲಿಗೆ ತುಂಬಾ ಚಳಿಯ ಹಿನ್ನೆಲೆಯಲ್ಲಿ ಯಾರೋ ಬಿಳಿ ಬಣ್ಣದ ಶಾಲ್ ಅನ್ನು ಹೊದ್ದುಕೊಂಡು ಹೋಗುತ್ತಿದ್ದಾರೆ. ಇದು ಗಾಳಿಯಲ್ಲಿ ಹಾರಾಡುತ್ತಿದೆ. ಆದರೆ ಒಬ್ಬರೇ ಹಿಂದುಗಡೆಯಿಂದ ಬರುತ್ತಿದ್ದರೆ ಅರೆಕ್ಷಣ ಬೆಚ್ಚಿ ಬೀಳೋದಂತೂ ಗ್ಯಾರೆಂಟಿ. ಹೇಳಿ ಕೇಳಿ ಕತ್ತಲು ಜೊತೆಗೆ ಜಿಡಿಜಿಡಿ ಮಳೆ. ಇಂಥ ಸಮಯದಲ್ಲಿ ಹೀಗೆ ಕಾಣಿಸಿಕೊಂಡರೆ ಯಾರಾದರೂ ಹೆದರಿಕೊಂಡು ಬಿಟ್ಟಾರು ಎಂದು ಕಾಲೆಳೆಯುತ್ತಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.