ಭೀಮಾ ಸಿನಿಮಾದಲ್ಲಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ಗಿರಿಜಾ ನಿಜ ಜೀವನದಲ್ಲಿ ಗೊಂಬೆ
Updated: Aug 23, 2024, 21:34 IST
|
ಸ್ಯಾಂಡಲ್‌ವುಡ್ ಸಲಗ ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿರುವ ಭೀಮಾ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ನಾಲ್ಕು ದಿನಗಳಲ್ಲಿ 12.85 ಕೋಟಿ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿದೆ. ಇದರಿಂದಾಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಹುರುಪು ಮೂಡಿದೆ. ಅಂದ್ಹಾಗೆ ಈ ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಗಿರಿಜಾ ಪಾತ್ರ ಎಲ್ಲರ ಗಮನ ಸೆಳೆಯುತ್ತಿದೆ.
ಭೀಮಾದಲ್ಲಿ ದುರುಳರಿಗೆ ಸಿಂಹಸ್ವಪ್ನವಾಗಿರುವ ಗಿರಿಜಾ ಪಾತ್ರಧಾರಿ ಯಾರು. ನೋಡಿದ್ರೆ ಎಲ್ಲೋ ನೋಡಿರುವೆ ಅನಿಸುತ್ತೆ ಅಂತಿದ್ದೀರಾ.ಭೀಮಾ ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಮಿಂಚಿರುವ ನಟಿಯ ಹೆಸರು ಪ್ರಿಯಾ ಶಠಮರ್ಷಣ. ಇವರು ಮೂಲತಃ ಸಾಂಸ್ಕೃತಿಕ ನಗರಿ ಮೈಸೂರಿನವರು. ಸಂಪ್ರದಾಯಸ್ತ ಕುಟುಂಬದಲ್ಲಿ ಹುಟ್ಟಿ ಬೆಳೆದ ಈ ನಟಿಗೆ ಚಿಕ್ಕಂದಿನಿಂದಲೂ ನಟನೆಯಲ್ಲಿ ಅಪಾರ ಆಸಕ್ತಿ. ಅದರಂತೆ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟರು.
ಪ್ರಿಯಾ ಶಠಮರ್ಷಣ ಅವರು ಕಳೆದ 16 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ರಂಗಭೂಮಿಯನ್ನೇ ನನ್ನ ತವರು ಎನ್ನುವ ಇವರು, ಮಂಡ್ಯ ರಮೇಶ್ ಅವರ 'ನಟನಾ' ತಂಡದ ಹಲವು ನಾಟಕಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಪೈಕಿ ಚಾಮ ಚೆಲುವೆ ಹಲವು ಪ್ರದರ್ಶನ ಕಂಡಿದೆ. ನಿನ್ನೆಯ ನಾಳೆ ಎಂಬ ಏಕವ್ಯಕ್ತಿ ನಾಟಕವನ್ನು ಪ್ರಿಯಾ ಪ್ರದರ್ಶಿಸಿದ್ದಾರೆ.
ಪ್ರಿಯಾ ಅವರು ಈ ಹಿಂದೆ ರಾಮಾ ರಾಮಾ ರೇ, ಚೇಸ್, ಮಂಸೂರೆ, 19-20-202, 1ಸೈಡ್ ವಿಂಗ್, ಜೀನಿಯಸ್ ಮುತ್ತ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ರಾಷ್ಟ್ರ ಪ್ರಶಸ್ತಿ ವಿಜೇತ 'ಒಂದಲ್ಲಾ ಎರಡಲ್ಲಾ' ಸಿನಿಮಾಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಹಿಂದೆ ಪ್ರಸಾರವಾಗಿದ್ದ 'ಲಕ್ಷಣ' ಧಾರಾವಾಹಿ ವಿಲನ್ ಡೆವಿಲ್ ಅಲಿಯಾಸ್ ಭಾರ್ಗವಿ ಪಾತ್ರಕ್ಕೆ ಪ್ರಿಯಾ ಬಣ್ಣಹಚ್ಚಿದ್ದರು. ಈ ಪಾತ್ರಕ್ಕೆ ಸಹ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿತ್ತು. ಇವರ ಪತಿ ಅವಿನಾಶ್ ಕೂಡ ನಟ ಹಾಗೂ ರಂಗಭೂಮಿ ಕಲಾವಿದರಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.