ದೇವರು ದೊಡ್ಡ ಮಟ್ಟದಲ್ಲೆ ಕೊಟ್ಟ ಮತ್ತೆ ಕಿತ್ತುಕೊಂಡ; ನಿವೇದಿತಾ ಬಗ್ಗೆ ಚಂದನ್ ಮಾ ತು
ನಾವು ಅಂದುಕೊಂಡಂತೆ ಏನೂ ನಡೆಯುವುದಿಲ್ಲ.ಕನ್ನಡದ ರ್‍ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನ ಪಡೆದ ಬೆನ್ನಲ್ಲೇ ಚಂದನ್ ಶೆಟ್ಟಿ ಹಲವು ಸಂದರ್ಶನಗಳಲ್ಲಿ ಹಾಗೇ ಸಿನಿಮಾ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಚಂದನ್ ಸಂದರ್ಶನವೊಂದರಲ್ಲಿ ಈ ಮುಂಚೆ ಹಲವು ವಿಚಾರಗಳನ್ನು ಹೇಳಿಕೊಂಡಿದ್ದರು. ಇದೀಗ ಮತ್ತೊಂದು ಮಾಧ್ಯಮದ ಸಂದರ್ಶನವೊಂದರಲ್ಲಿ ಒಳ್ಳೆ, ಚೆನ್ನಾಗಿರುವ ಹುಡುಗಿ ಜತೆ ಮದುವೆಯಾಗುವ ಕನಸು ನನಗೂ ಇತ್ತು. ಅದೇ ರೀತಿ ಹುಡುಗಿ ಸಿಕ್ಕಿದ್ದರು.
ಆದರೆ ಕಾರಣಾಂತರದಿಂದ ಹೀಗಾಯ್ತು ಎಂದು ಹೇಳಿಕೊಂಡಿದ್ದಾರೆ. ಚಂದನ್ ಶೆಟ್ಟಿ ಮಾತನಾಡಿ ʻನನಗೂ ಒಳ್ಳೆಯ ಹುಡುಗಿ ಜತೆ ಮದುವೆಯಾಗುವ ಕನಸು ಇತ್ತು. ಆದರೆ ಹೀಗಾಯ್ತು. ಜೀವನ ಅಂದರೆ ಹಾಗೇ ಸಮುದ್ರ ತರಹ. ಕೆಲವು ಸಲ ಚಿಕ್ಕ ಅಲೆ ಬರುತ್ತದೆ, ಕೆಲವು ಸಹ ದೊಡ್ಡ ಅಲೆ ಬರುತ್ತದೆ, ಕೆಲವು ಸಲ ಸುನಾಮಿ ಬರುತ್ತದೆ. ಯಾವಾಗ, ಹೇಗೆ ಆಗುತ್ತದೆ ಗೊತ್ತಾಗಲ್ಲ. ಎಲ್ಲರ ಜೀವನದಲ್ಲಿ ನೋವು ಸರ್ವೇ ಸಾಮಾನ್ಯ. . ನನ್ನ ಜೀವನದಲ್ಲಿ ಇದು ಕೆಟ್ಟ ನೆನಪಾಗಿದೆ ಅಷ್ಟೇ.
ಲವ್ ಮಾಡುವ ಸಂದರ್ಭದಲ್ಲಿ ಇಬ್ಬರೂ ಕೂಡ ಬೇರೆ ಬೇರೆಯಾಗಿಯೇ ಇರುತ್ತಾರೆ. ಆಗ ಪ್ರೀತಿಯಲ್ಲಿ ಬಿದ್ದಿರುತ್ತಾರೆ ಹೊರತು ಮದುವೆಯಾಗಿರುವುದಿಲ್ಲ. ಆದರೆ ಲವ್ ಅನ್ನೋದೆ ಬೇರೆ. ಮದುವೆಯೇ ಬೇರೆ. ಮದುವೆಯಾಗಿ ಒಂದೇ ರೂಂನಲ್ಲಿ ಸಂಸಾರ ಮಾಡುತ್ತಾರಲ್ವಾ ಅದೇ ಬೇರೆ. ಅದು ಮದುವೆಯಾದವರಿಗೆ ಮಾತ್ರ ಗೊತ್ತಿರುತ್ತೆ ಎಂದರು.
ಇನ್ನು ಮತ್ತೆ ಇಬ್ಬರೂ ಒಂದಾಗ್ತಾರ ಎಂಬ ಪ್ರಶ್ನೆಗೆ ಚಂದನ್ ಉತ್ತರಿಸಿ ನಮ್ಮ ಮನಸ್ಸಿನಲ್ಲಿ ಆದ ಗೊಂದಲಗಳು ಬೇರೆಯವರಿಗೆ ಅರ್ಥವಾಗುವುದಿಲ್ಲ. ಆದರೆ ಎಲ್ಲರೂ ಒಳ್ಳೆಯ ಮನಸ್ಸಿನಿಂದಲೇ ಹೇಳುತ್ತಾರೆ. ಬಿಡಿ ಈವಾಗೆಲ್ಲ ಮುಗೀತು. ಮತ್ತೆ ಈ ಬಗ್ಗೆ ಮಾತು ಬೇಡ. ನಾನು ಹೊಸ ಜೀವನ ಕಟ್ಟಿಕೊಳ್ಳಬೇಕು ಎಂದು ಕಾಯ್ತಾ ಇದ್ದೇನೆ. ಮತ್ತೆ ಹಳೇ ಚಂದನ್ ಶೆಟ್ಟಿ ಬೇಕು ಎಂದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ