ಗೋಲ್ಡ್ ಸುರೇಶ್ ಮನೆ ನಾಯಿಗೂ ಬಂಗಾರದ ಚೈನ್; ಈತನ ಕೈಯಲ್ಲಿದೆ ಬೆಂಗಳೂರು

 | 
Gh
 ಮನರಂಜನೆಯ ರಸದೌತಣ ನೀಡುವ ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್ ಸೀಸನ್ 11 ಅದ್ಧೂರಿಯಾಗಿ ಆರಂಭವಾಗಿದೆ. ಹೊಸ ಮನೆಗೆ 17 ಹೊಸ ಕಂಟೆಸ್ಟೆಂಟ್‌ಗಳು ಎಂಟ್ರಿ ಕೊಟ್ಟಿದ್ದಾರೆ. 17 ಸ್ಪರ್ಧಿಗಳಲ್ಲಿ ಒಬ್ಬೊಬ್ಬರದ್ದು ಒಂದೊಂದು ಇಂಟ್ರೆಸ್ಟಿಂಗ್ ಹಿನ್ನೆಲೆಯಿದೆ. ಒಬ್ಬೊಬ್ಬರಿಗೆ ಸೀಸನ್ 11ರ ವಿನ್ನರ್ ನಾನೇ ಆಗಬೇಕು ಅನ್ನೋ ಕಿಚ್ಚು ಇದೆ.
ಬಿಗ್ ಬಾಸ್ ಸೀಸನ್ 11ಕ್ಕೆ ಗೋಲ್ಡ್ ಸುರೇಶ್ ಎಂಟ್ರಿ ಕೊಟ್ಟ ಮೇಲೂ ಬೇಜಾನ್ ಟ್ರೋಲ್ ಆಗುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಂಗಾರದ ಮನುಷ್ಯನ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ತಮ್ಮ ಮೈ ಮೇಲಿನ ಬಂಗಾರದಿಂದಲೇ ಸುರೇಶ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಬಿಗ್ ಬಾಸ್ ವೀಕ್ಷಕರು, ಅಭಿಮಾನಿಗಳು ಒಂದೇ ಒಂದು ಪ್ರಶ್ನೆ ಕೇಳುತ್ತಿದ್ದಾರೆ. ಕೋಟಿ, ಕೋಟಿ ಚಿನ್ನವನ್ನು ಮೈಮೇಲೆ ಹಾಕ್ಕೊಂಡಿರುವ ನಿನಗೆ ಅದ್ಯಾಕತಪ್ಪ ಕೇವಲ 50 ಲಕ್ಷ ರೂಪಾಯಿ ಗೆಲ್ಲೋಕೆ ದೊಡ್ಮನೆಗೆ ಬಂದೆ ಎನ್ನುತ್ತಿದ್ದಾರೆ.
ಸುರೇಶ್ ಅಥವಾ ಗೋಲ್ಡ್ ಸುರೇಶ್ ಲೈಫ್ ಜರ್ನಿಯೇ ರೋಚಕವಾಗಿದೆ. ಉತ್ತರ ಕರ್ನಾಟಕ ಮೂಲದವರಾದ ಸುರೇಶ್, ಮೂಲತಃ ರೈತನ ಮಗ. 10ನೇ ತರಗತಿವರೆಗೂ ಓದಿರುವ ಸುರೇಶ್ ಆಮೇಲೆ ತಮ್ಮ ಹುಟ್ಟೂರು ಬಿಟ್ಟು ಓಡಿ ಬಂದಿದ್ದಾರೆ. ಏನಾದರೂ ಸಾಧಿಸಬೇಕು ಎನ್ನುವ ಛಲದಿಂದ ಹುಟ್ಟಿದ ಊರು ಬಿಟ್ಟು ಓಡಿ ಬಂದ ಸುರೇಶ್ ಮುಂದೆ ತಮ್ಮದೇ ಸಂಸ್ಥೆ ಸ್ಥಾಪಿಸಿ ಸಾಕಷ್ಟು ಜನರಿಗೆ ಕೆಲಸ ಕೊಟ್ಟಿದ್ದಾರೆ.
ಇನ್ನು ಇವರು ಬಿಗ್ಬಾಸ್ ಸಂಗೀತಾಳ ಫ್ಯಾನ್ ಆಗಿದ್ದು ಅವರನ್ನು ಬಿಗ್ಬಾಸ್ ಮನೆಯಲ್ಲಿ ನೋಡಿದಮೇಲೆ ನಾನು ಒಮ್ಮೆ ಹೋಗಿ ಬರಬೇಕು ಎಂಬ ಆಸೆ ಮೂಡಿದೆ.ಸದಾ ಮೈ ಮೇಲೆ ಚಿನ್ನ ಹಾಕಿಕೊಂಡು ಸುರೇಶ್ ಓಡಾಡುತ್ತಾರೆ. ಇದೇ ಕಾರಣಕ್ಕೆ ಗೋಲ್ಡ್ ಸುರೇಶ್ ಅಂತಲೇ ಇವ್ರು ಫೇಮಸ್​ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಖ್ಯಾತಿಗಳಿಸಿರೋ ಸುರೇಶ್​ ಅವರು ಇನ್​ಸ್ಟಾದಲ್ಲಿ ಸಾಕಷ್ಟು ರೀಲ್ಸ್ ಮಾಡಿ ಹಂಚಿಕೊಂಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.