ಅಗಸ್ಟ್ ನಲ್ಲಿ ಮೊಟ್ಟಮೊದಲ ಬಾರಿಗೆ ಚಿನ್ನದ ಬೆಲೆ ಕುಸಿತ; ಬಂಗಾರದ ಅಂಗಡಿಯಲ್ಲಿ ನೂಕುನುಗ್ಗಲು
Aug 8, 2024, 10:16 IST
|
ಚಿನ್ನ & ಬೆಳ್ಳಿ ಬೆಲೆ ದಿನದಿಂದ ದಿನಕ್ಕೆ ಕುಸಿತ ಕಾಣುತ್ತಿದ್ದು, ನಿನ್ನೆಯು ಕೂಡ ಭಾರಿ ಇಳಿಕೆ ಕಂಡಿದೆ. ಆಷಾಢ ಮಾಸ ಮುಗಿದು ಶ್ರಾವಣ ಶುರುವಾಗಿರುವ ಸಮಯದಲ್ಲೇ ಮದುವೆ ಸೇರಿ ಹಲವು ಶುಭ ಕಾರ್ಯಕ್ರಮಗಳು ಶುರುವಾಗಿವೆ. ಇದೇ ಸಮಯದಲ್ಲಿ ಚಿನ್ನದ ಬೆಲೆಯಲ್ಲೂ ಭಾರಿ ಕುಸಿತ ಕಂಡುಬರುತ್ತಿದೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನ & ಬೆಳ್ಳಿ ಬೆಲೆ? ಇಂದು ಕೂಡ ಚಿನ್ನ & ಬೆಳ್ಳಿಯ ಬೆಲೆಯಲ್ಲಿ ಕುಸಿತ ಕಾಣುತ್ತದೆ.
ಚಿನ್ನದ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ದಿನದಿಂದ ದಿನಕ್ಕೆ ಕುಸಿತ ಕಾಣುತ್ತಿದೆ. ಹಲವು ದಿನಗಳಿಂದ ನಿರಂತರವಾಗಿ ಚಿನ್ನದ ಬೆಲೆಯಲ್ಲಿ ಕುಸಿತ ದಾಖಲಾಗುತ್ತಿದೆ. ಹೀಗಾಗಿ ಬಂಗಾರ ಭಾರಿ ಕುಸಿತ ಕಂಡಿದ್ದು, ಇನ್ನೇನು ಶೀಘ್ರದಲ್ಲೇ 50 ಸಾವಿರ ರೂಪಾಯಿಗೆ ಕುಸಿತ ಕಾಣುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದಾರೆ ಚಿನ್ನಾಭರಣ ಪ್ರಿಯರು. ಹಾಗಾದ್ರೆ ಚಿನ್ನದ ಬೆಲೆ ಮತ್ತಷ್ಟು ಇಳಿಕೆ ಆಗುವುದು ಗ್ಯಾರಂಟಿನಾ ಎಂಬ ಪ್ರಶ್ನೆ ಮೂಡಿದೆ.
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ನಿನ್ನೆ 100 ಗ್ರಾಂಗೆ 8000 ರೂಪಾಯಿ ಕುಸಿತ ಕಂಡಿದೆ. ಹಾಗೇ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆಯು ನಿನ್ನೆ 800 ರೂ ಕಡಿತವಾಗಿದೆ. ಆಭರಣ ಚಿನ್ನದ ಬೆಲೆ ಕುಸಿತದ ಬಳಿಕ ಪ್ರತಿ 10 ಗ್ರಾಂಗೆ 63,900 ರೂಪಾಯಿ ಇದ್ದು. 24 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿದು ಬಿದ್ದಿದೆ. ಕುಸಿತ ಕಂಡ ಬಳಿಕ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 8,700 ರೂಪಾಯಿ ಇಳಿಕೆ ಕಂಡಿದೆ.
10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 8,700 ರೂಪಾಯಿ ಇಳಿಕೆ ಕಂಡು, ಇಳಿಕೆ ನಂತರ ಪ್ರತಿ 10 ಗ್ರಾಂಗೆ 69,710 ರೂಪಾಯಿಗೆ ಮಾರಾಟ ಆಗುತ್ತಿದೆ. ಬೆಳ್ಳಿ ಬೆಲೆ ನಿನ್ನೆ ಪ್ರತಿ ಕೆಜಿಗೆ 1,500 ರೂ. ಕುಸಿತ ಕಂಡಿದೆ. ಈ ಮೂಲಕ ರಾಜಧಾನಿ ಬೆಂಗಳೂರಲ್ಲಿ ಬೆಳ್ಳಿ ಪ್ರತಿ ಕೆಜಿಗೆ 83,500 ರೂಪಾಯಿ ಲೆಕ್ಕದಲ್ಲಿ ಮಾರಾಟ ಆಗುತ್ತಿದೆ. ಹೀಗಾಗಿ, ಶೀಘ್ರದಲ್ಲೇ ಆಭರಣ ಚಿನ್ನ ಪ್ರತಿ 10 ಗ್ರಾಂಗೆ 50,000 ರೂಪಾಯಿಗೆ ಕುಸಿತ ಕಾಣಬಹುದು ಎಂಬ ಕುತೂಹಲದಲ್ಲಿ ಚಿನ್ನ ಪ್ರಿಯರು ಕಾಯುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkaarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.