ಅಕ್ಷಯ ತೃತೀಯ ದಿನನೇ ಚಿನ್ನದ ಬೆಲೆ ಸಂಪೂರ್ಣ ಇಳಿಕೆ, ಈ ಕೂಡಲೇ ಖರೀದಿಗೆ ಮುಗಿಬಿದ್ದ ಜನ
Apr 30, 2025, 11:31 IST
|

ಚಿನ್ನ ಬಲು ದುಬಾರಿಯಾಗಿದೆ. ಪ್ರತಿ ದಿನ ಬಂಗಾರದ ಬೆಲೆ ಏರಿಕೆಯಾಗುತ್ತಿರುವ ನಡುವೆ ಅಕ್ಷಯ ತೃತೀಯವೂ ಬರುತ್ತಿದೆ. ಇದರ ನಡುವೆ ಸಮಾಧಾನಕರ ಸುದ್ದಿಯೊಂದು ಹೊರಬಿದ್ದಿದೆ. ಅಕ್ಷಯ ತೃತೀಯಕ್ಕೂ ಕೆಲವೇ ದಿನ ಮೊದಲು ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಇದು ಜನಸಾಮಾನ್ಯರ ಮುಖದಲ್ಲಿ ಸಮಾಧನ ಮೂಡಿಸಿದೆ.
ಈ ದಿನವು ಚಿನ್ನದ ಬೆಲೆ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನಕ್ಕೆ ಒಂದು ಗ್ರಾಂಗೆ 69 ರುಪಾಯಿ ಇಳಿಕೆಯಾಗಿದೆ. 24 ಕ್ಯಾರೆಟ್ ಚಿನ್ನ ಗ್ರಾಂಗೆ 68 ರುಪಾಯಿ ಇಳಿಕೆಯಾಗಿದ್ದು 18ಕ್ಯಾರೆಟ್ ಚಿನ್ನದ ಬೆಲೆ ರು. 51ರಷ್ಟು ಇಳಿಕೆ ಕಂಡಿದೆ.24 ಕ್ಯಾರೆಟ್ ಚಿನ್ನ ಗ್ರಾಂಗೆ ₹9,75322 ಕ್ಯಾರೆಟ್ ಚಿನ್ನ ಗ್ರಾಂಗೆ ₹8,94018 ಕ್ಯಾರೆಟ್ ಚಿನ್ನ ಗ್ರಾಂಗೆ d ₹7,315ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಭಾರಿ ವ್ಯತ್ಯಸಾವೇನು ತಂದಿಲ್ಲ. ಆದರೆ ಕಳೆದ ಕೆಲ ದಿನಗಳಿಂದ ಇಳಿಕೆಯಾಗುತ್ತಿರುವ ಕಾರಣ ಸಮಾಧಾನ ತಂದಿದೆ. ದುಬಾರಿಯಾಗಿರುವ ಚಿನ್ನದಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಜನಸಾಮಾನ್ಯರು ಭಾವಿಸಿದ್ದಾರೆ.
ಬಡವರಿಗೆ, ಮಧ್ಯಮವರ್ಗದರಿಗೆ ದುಬಾರಿಯಾದ ಚಿನ್ನಚಿನ್ನ ಮೊದಲಿನಿಂದಲೂ ದುಬಾರಿ ಆದರೆ ಈಗ ಏರುತ್ತಿರುವ ಚಿನ್ನದ ಬೆಲೆ ಬಡವರಿಗೆ ಮಧ್ಯಮಬರ್ಗದವರಿಗೆ ತುಂಬಾನೇ ದುಬಾರಿಯಾಗುತ್ತಿದೆ. 10 ಗ್ರಾಂ ಚಿನ್ನ ಖರೀದಿಗೆ ಲಕ್ಷ ಹಣ ಹೊಂದಿಸಬೇಕಾಗುತ್ತಿದೆ. ದಿನದಿಂದ ದಿನಕ್ಕೆ ಎರಿಕೆ ಕಂಡು ಬರುತ್ತಿದ್ದ ಚಿನ್ನದ ಬೆಲೆ ಕಳೆದ 6 ದಿನಗಳಿಂದ ಇಳಿಕೆಯಾಗುತ್ತಿದ್ದು, ಅಕ್ಷಯ ತೃತೀಯಾದ ಸಮಯಕ್ಕೆ ಮತ್ತಷ್ಟು ಇಳಿಕೆಯಾದರೆ ಒಳ್ಳೆಯದಿತ್ತು ಎಂಬ ನಿರೀಕ್ಷೆ ಜನರದ್ದು.
ಇನ್ನು ಅಂತರರಾಷ್ಟ್ರೀಯ ಮಾರುಕಟ್ಟೆ, ಚಿನ್ನದ ಮೇಲಿನ ಆಮದು ಸುಂಕ, ಡಾಲರ್ ಎದುದು ಮೌಲ್‌ಯ ಅಧರಿಸಿ ಹಳದಿ ಲೋಹದ ಬೆಲೆ ನಿಗದಿ ಮಾಡಲಾಗುವುದು. ಟ್ರಂಪ್ ತೆರಿಗೆ ನೀತಿಯಿಂದಾಗಿ ಮತ್ತಷ್ಟು ದುಬಾರಿಯಾಗಿದ್ದ ಚಿನ್ನದ ಬೆಲೆ ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಸ್ವಲ್ಪ ಇಳಿಕೆ ಕಂಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.