ಕೆಲವೇ ದಿನಗಳಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂ ಗೆ 4ಸಾವಿರ ಇಳಿಕೆ ಸಾಧ್ಯತೆ, ಬಡವರಿಗೆ ಬಂಪರ್ ಆಫರ್

 | 
ಸ್
ಚಿನ್ನದ ಬೆಲೆ ಗಗನಕ್ಕೇರಿದೆ ಎಂದು ಬೇಸರದಲ್ಲಿರುವ ಮಧ್ಯಮ ಹಾಗೂ ಬಡ ವರ್ಗದವರಿಗೆ ಗುಡ್‌ನ್ಯೂಸ್‌. ಮುಂದಿನ ಕೆಲ ವರ್ಷಗಳಲ್ಲಿಯೇ ಚಿನ್ನದ ಬೆಲೆಗೂ ತೀವ್ರವಾಗಿ ಕುಸಿತ ಕಾಣಲಿದ್ದು, ಸದ್ಯ 90 ಸಾವಿರ ರೂಪಾಯಿ ದಾಟಿರುವ 10 ಗ್ರಾಂ ಚಿನ್ನದ ದರ 55 ಸಾವಿರ ರೂಪಾಯಿಗೆ ಇಳಿಕೆಯಾಗಲಿದೆಯಂತೆ. ಈ ಬಗ್ಗೆ ಅಮೆರಿಕದ ಹೂಡಿಕೆ ಸಂಸ್ಥೆ ಮಾರ್ನಿಂಗ್‌ಸ್ಟಾರ್‌ನ ವಿಶ್ಲೇಷಕರು ತಿಳಿಸಿದ್ದಾರೆ.
ಸದ್ಯ ಚಿನ್ನದ ದರವು ಜೀವಮಾನದಲ್ಲಿಯೇ ಗರಿಷ್ಠ ದರವನ್ನು ತಲುಪಿದೆ. ಒಂದೇ ವರ್ಷದಲ್ಲಿ 18 ರಿಂದ 20 ಸಾವಿರ ರೂಪಾಯಿಗೂ ಅಧಿಕ ದರ ಹೆಚ್ಚಳವಾಗಿದೆ. ಇದು ಹೂಡಿಕೆದಾರರಿಗೆ ಲಾಭ ತಂದಿದ್ದರೇ, ಗ್ರಾಹಕರಿಗೆ, ಆಭರಣ ಪ್ರಿಯರಿಗೆ ಸಾಕಷ್ಟು ಹೊರೆಯಾಗಿದೆ. ಇದೇ ಸಂದರ್ಭದಲ್ಲಿ ಅಮೆರಿಕದ ಆರ್ಥಿಕ ವಿಶ್ಲೇಷಕರೊಬ್ಬರು ಬೆಲೆ ತೀವ್ರವಾಗಿ ಕುಸಿಯುತ್ತದೆ ಎಂದು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಪ್ರತಿಸುಂಕದ ಪ್ರಭಾವ ಷೇರು, ಮಾರುಕಟ್ಟೆ ಅಲ್ಲೋಲ ಕಲ್ಲೋಲವಾಗಿದೆ. ಇದರ ಮಧ್ಯೆ ಚಿನ್ನದ ದರ ಇಳಿಕೆ, ಚಿನ್ನದ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ.ಶರವೇಗದಲ್ಲಿ ಚಿನ್ನದ ದರ ಏರಿಕೆ ಕಂಡಿತ್ತು. ಜನ ಸಾಮಾನ್ಯರು ಚಿನ್ನ ಮುಟ್ಟಿದ್ರೆ ಶಾಕ್ ಎಂಬ ಪರಿಸ್ಥಿತಿ ಉದ್ಭವವಾಗಿತ್ತು. ಆದರೀಗ ಟ್ರಂಪ್ ಸುಂಕ ನೀತಿಯಿಂದ ಚಿನ್ನದ ದರ ಇಳಿಕೆ ಕಂಡಿದೆ. 
ರಾಜಧಾನಿಯ ಚಿನಿವಾರ ಪೇಟೆಯಲ್ಲಿ ಶುಕ್ರವಾರ 10 ಗ್ರಾಂ ಶುದ್ಧ ಚಿನ್ನದ ಧಾರಣೆಯಲ್ಲಿ 1,350 ರೂ. ಇಳಿಕೆಯಾಗಿ, 93,000 ರೂ.ಗೆ ಕುಸಿದಿದೆ. ಇಷ್ಟೇ ತೂಕದ ಆಭರಣ ಚಿನ್ನದ ಬೆಲೆ ಕೂಡ 1,350 ರೂ. ಕಡಿಮೆಯಾಗಿ 92,550 ರೂ. ಆಗಿದೆ. ಇನ್ನು ಕೆಲ ದಿನಗಳಲ್ಲಿ ಮತ್ತಷ್ಟು ಇಳಿಕೆ ಕಾಣಲಿದೆ ಎಂದು ಹೇಳಲಾಗುತ್ತಿದೆ. 
ಬೆಂಗಳೂರಿನಲ್ಲಿ ಸೋಮವಾರ ಅಪರಂಜಿ ಚಿನ್ನದ ದರ 10 ಗ್ರಾಂಗೆ 93,380 ರೂ. ಇತ್ತು. ಇದೀಗ ಸತತ ಎರಡು ದಿನಗಳ ಕುಸಿತದ ಬಳಿಕ ಶನಿವಾರ 90,660 ರೂ.ಗೆ ಇಳಿಕೆಯಾಗಿದೆ. ಈ ಮೂಲಕ ಎರಡೇ ದಿನಗಳಲ್ಲಿ 10 ಗ್ರಾಂಗೆ 2,720 ರೂ.ಗಳ ಕುಸಿತವಾಗಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.