ರಾತ್ರೋರಾತ್ರಿ ಬಂಗಾರದ ಬೆಲೆ ಪಾತಳಕ್ಕೆ, ಚಿನ್ನದ ಮಳಿಗೆಯಲ್ಲಿ ಸಾಲುಗಟ್ಟಿ ನಿಂತ ಮಹಿಳೆಯರು

 | 
ರ್
ಮೇ ತಿಂಗಳು ಚಿನ್ನಾಭರಣ ಪ್ರಿಯರಿಗೆ ಭರ್ಜರಿ ಲಾಭದ ತಿಂಗಳಾಗಿದೆ. ಬುಧವಾರವೂ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ. 9 ಸಾವಿರದಿಂದ ಕೆಳಗೆ ಇರುವುದರಿಂದ ಖರೀದಿಗೂ ಇದು ಒಳ್ಳೆ ಸಮಯ ಎನ್ನಲಾಗ್ತಿದೆ. ವ್ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಇಂದು ಇಳಿಕೆ ಆಗಿದೆ. 1 ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 50 ರೂಪಾಯಿ ಕಡಿಮೆ ಆಗಿದ್ದು, ಇಂದಿನ ಚಿನ್ನದ ದರ 22 ಕ್ಯಾರೆಟ್ 1 ಗ್ರಾಂ ಗೆ 8,805 ರೂ ಆಗಿದೆ, 24 ಕ್ಯಾರೆಟ್ 1 ಗ್ರಾಂ ಬೆಲೆ ಕೂಡಾ 54 ರೂ ಕಡಿಮೆ ಆಗಿ, 9,606 ರೂ ಗೆ ಕಡಿಮೆ ಆಗಿದೆ.
ಅಂದರೆ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯಲ್ಲಿ ಇಂದು 500 ರೂ ಕಡಿಮೆ ಆಗಿದೆ. ಇಂದಿನ ಬೆಲೆ 88,050 ರೂ ಆಗಿದೆ. 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 540 ರೂ ಕಡಿಮೆ ಆಗಿ, ಇಂದಿನ ಬೆಲೆ 96,060 ರೂ ಆಗಿದೆ. ಇನ್ನು ಬೆಂಗಳೂರಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 8,805 ರೂ ಇದೆ. ಬೆಳ್ಳಿಯ ಬೆಲೆ ಕೂಡಾ ಇಳಿಕೆ ಆಗಿದೆ. ಬೆಳ್ಳಿಯ ಬೆಲೆ ತಟಸ್ಥವಾಗಿದ್ದು,, 97.90 ಕ್ಕೆ ಗ್ರಾಂ ಬೆಲೆ ಕುಸಿದಿದೆ. ಕೆಜಿ ಬೆಳ್ಳಿ ಬೆಲೆ 97,900 ರೂ ಗೆ ಇಳಿಕೆ ಆಗಿದೆ.
ಏಪ್ರಿಲ್ 1 ಕ್ಕೆ 8,510 ಗೆ ಇದ್ದ ಬೆಲೆ ಏಪ್ರಿಲ್ 30 ರ ವೇಳೆಗೆ 8,975 ಕ್ಕೆ ಏರಿಕೆ ಆಗಿತ್ತು, ಮೇ ತಿಂಗಳಲ್ಲಿ 8,775 ರಿಂದ ಆರಂಭವಾದ ಬೆಲೆ ಹೆಚ್ಚಿನ ಏರಿಕೆ ಆಗಿಲ್ಲ. ಭಾರತ-ಪಾಕ್ ಯುದ್ಧದ ಕಾರ್ಮೋಡ, ಅಮೆರಿಕ-ಚೀನಾ ವ್ಯಾಪಾರ ಮಾತುಕತೆ ಸಫಲವಾದ ಕಾರಣ ಸೇರಿದಂತೆ ವಿವಿಧ ಕಾರಣಗಳಿಗೆ ಚಿನ್ನದ ಡಿಮಾಂಡ್ ಕಡಿಮೆ ಆಗಿ, ಚಿನ್ನದ ದರ ಇಳಿಕೆ ಆಗ್ತಿದೆ.
ಅಲ್ಲದೆ ಅಂತರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಹಾಗೂ ಡಾಲರ್ ಎದುರು ಮೌಲ್ಯ ಆಧರಿಸಿ, ಆಯಾ ದಿನದ ಬಂಗಾರ ಹಾಗೂ ಬೆಳ್ಳಿಯ ಬೆಲೆಯು ನಿರ್ಧಾರ ಆಗುತ್ತದೆ. ಇಲ್ಲಿರುವ ಚಿನ್ನ-ಬೆಳ್ಳಿಯ ಬೆಲೆ ಜಿಎಸ್‌ಟಿ ಸೇರ್ಪಡೆ ಆಗಿಲ್ಲ. ಇಲ್ಲಿರುವ ಚಿನ್ನದ ದರ ಪಟ್ಟಿ ಜಿಎಸ್‌ಟಿ ಹೊರತುಪಡಿಸಿದ ಬೆಲೆಯಾಗಿದೆ. ಆಭರಣ ಪ್ರೀಯರಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆ ಆಗುವ ನಿರೀಕ್ಷೆಯಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.