ಚಿತ್ರದುರ್ಗದಲ್ಲಿ ಬಂಗಾರದ ಮಳೆ, ಎದ್ದು ಬಿದ್ದು ಚಿನ್ನ ಹುಡುಕಿದ ಗ್ರಾಮಸ್ಥರು

 | 
ಬಹರ

ಬಂಗಾರದ ಆಸೆ ಯಾರಿಗಿಲ್ಲ ಹೇಳಿ. ಅದರಲ್ಲೂ ಮುಖ್ಯವಾಗಿ ಬಂಗಾರದ ದರ ಗಗಕ್ಕೇರಿದೆ ಹಾಗಾಗಿ ಬಂಗಾರದ ಮಳೆ ಬಂದಿದೆ ಎನ್ನುವ ರೀತಿಯಲ್ಲಿ ಚಿತ್ರದುರ್ಗದ ಜನ ನೆಲದ ಮೇಲೆ ಬಿದ್ದ ಬಂಗಾರದ ಬಿಲ್ಲೆಗಳನ್ನು ಹೆಕ್ಕುತ್ತಿದ್ದಾರೆ. ಬಂಗಾರ ಸಿಗುತ್ತದೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ಹೆದ್ದಾರಿ ಪಕ್ಕದಲ್ಲಿ ನೂರಾರು ಜನರು ಚಿನ್ನದ ನಾಣ್ಯಗಳಿಗಾಗಿ ಹುಡುಕಾಟ ನಡೆಸುತ್ತಿರುವ ಘಟನೆ ಮೊಳಕಾಲ್ಮೂರು ಸಮೀಪದ ಕೆಳಗಳಹಟ್ಟಿ ಬಳಿ ಕಂಡುಬಂದಿದೆ.

ಯಾರೋ ಬಂಗಾರದ ನಾಣ್ಯ ಎಸೆದು ಹೋಗಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಇದನ್ನು ನಂಬಿದ ಜನರು ಚಿನ್ನದ ನಾಣ್ಯಗಳಿಗಾಗಿ ಗುಂಪು ಗುಂಪಾಗಿ ಹೋಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಬೆಳಗ್ಗೆಯಿಂದ ಊಟ, ನೀರು ಬಿಟ್ಟು ಬಂಗಾರಕ್ಕಾಗಿ ಹುಡುಕುತ್ತಿದ್ದಾರೆ.

ಬಂಗಾರದ ಚಿಕ್ಕ ಚಿಕ್ಕ ನಾಣ್ಯಗಳು ದೊರೆತಿರುವುದಾಗಿ ಕೆಲವರು ಫೋಟೊ, ವಿಡಿಯೊ ವೈರಲ್‌ ಮಾಡಿದ್ದಾರೆ. ಯಾರೋ ಆ ಸ್ಥಳದಲ್ಲಿ ಚಿನ್ನದ ನಾಣ್ಯ ಎಸೆದು ಹೋಗಿದ್ದಾರೆ ಎಂದು ಹೇಳಿರುವುದರಿಂದ ಜನರು ಹುಡುಕಾಟ ನಡೆಸುತ್ತಿದ್ದಾರೆ. ಮತ್ತೊಂದೆಡೆ ಅವು ನಕಲಿ ಬಂಗಾರದ ನಾಣ್ಯಗಳು ಎಂದು ಕೂಡ ಹೇಳಲಾಗುತ್ತಿದೆ.

ಆಂಧ್ರ ಪ್ರದೇಶ ಗಡಿ ಮತ್ತು ತಮಿಳುನಾಡು ಗಡಿಯಲ್ಲಿ ನಕಲಿ ಚಿನ್ನ ಮಾರಾಟ ದಂಧೆಕೋರರು ಸಕ್ರಿಯವಾಗಿದ್ದಾರೆ. ಅವರು ಜನಸಾಮಾನ್ಯರನ್ನು ವಂಚಿಸಲು ಇಂತಹ ಚಿನ್ನ ಲೇಪಿತ ನಾಣ್ಯಗಳನ್ನು ತೋರಿಸಿ ವಂಚಿಸುತ್ತಾರೆ. ತಮಗೆ ನಿಧಿ ರೂಪದಲ್ಲಿ ಚಿನ್ನದ ನಾಣ್ಯಗಳು ದೊರೆತಿವೆ ಎಂದು ವಂಚಿಸಿರುವ ಪ್ರಕರಣಗಳು ಸಹ ವಿವಿಧೆಡೆ ಸಾಕಷ್ಟು ನಡೆದಿವೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.