ಗೋಲ್ಡ್ ಸುರೇಶ್ ಸುಳಿಗೆ ಮಾಡಿ ಇಷ್ಟು ದುಡ್ಡು ಮಾಡಿದ್ದ, ಅಸಲಿ ವಿಚಾರ ಹೇಳಿದ ಆಪ್ತ ಸ್ನೇಹಿತ
Dec 24, 2024, 18:42 IST
|

ಗೋಲ್ಡ್ ಸುರೇಶ್ ಅವರು ಇವತ್ತು ಕೋಟಿ ಕೋಟಿ ಒಡೆಯ ಎಂದರು ತಪ್ಪಾಗಲಾರದು. ಹೌದು, ಗೋಲ್ಡ್ ಸುರೇಶ್ ಅವರು ಕಷ್ಟದಿಂದ ಮೇಲೆ ಬಂದು ಇವತ್ತು ಇಷ್ಟು ಆಸ್ತಿ ಅಂತಸ್ತು ಸಂಪಾದಿಸಿದ ಹಿಂದೆ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಆದರೆ ಅವರ ಬಗ್ಗೆ ಅವರ ಊರಿನಲ್ಲಿ ಕೆಲವರ ಆರೋಪವೂ ಇದೆಯಂತೆ.
ಹೌದು, ಗೋಲ್ಡ್ ಸುರೇಶ್ ಅಡ್ಡ ದಾರಿಯಲ್ಲಿ ಬಹುಕೋಟಿ ಮಾಡಿದ್ದಾರೆ. ಅವರು ಇಷ್ಟು ಬೇಗ ಇಷ್ಟು ಕೋಟಿ ಹಣ ಹೇಗೆ ಮಾಡಿದ್ದಾರೆ. ಮನೆಯಲ್ಲಿ ಕೋಟಿ ಬೆಲೆಯ ಕಾರು, ಒಂದೊಂದು ಕಾರಿಗೂ ಒಂದೊಂದು ಕೋಟಿ ಇದೆ. ಆತನ ಮನೆ ಐಷಾರಾಮಿ ಮನೆ. ಮೈಮೇಲೆ 5 ಕೋಟಿ ಬೆಲೆಯ ಬಂಗಾರ, ಇದೆಲ್ಲಾ ಕಷ್ಟಪಟ್ಟು ಮಾಡೋಕೆ ಸಾಧ್ಯನಾ ಅಂತ ಕೆಲವರು ಮಾತಾನಾಡುತ್ತಾರೆ.
ಈ ಬಗ್ಗೆ ಗೋಲ್ಡ್ ಸುರೇಶ್ ಬಳಿ ಕೇಳಿದರೆ ಕಣ್ಣ ಹಾಕುತ್ತಾರೆ. ನನ್ನ ಕಷ್ಟದ ದಿನಗಳು ಹಾಗೂ ನಾನು ಒಂದೊಂದು ರೂಪಾಯಿಯೂ ಕೂಡಿಟ್ಟು ವ್ಯವಹಾರಕ್ಕೆ ಇಳಿದಿದ್ದು. ಬಂದ ಲಾಭವನ್ನು ಮತ್ತೆ ಕೂಡಿಟ್ಟು ದೊಡ್ಡ ಮಟ್ಟದಲ್ಲಿ ಮರು ಲಾಭಗಳಿಸಿ ಇವತ್ತು ಇಲ್ಲಿ ನಿಂತಿದ್ದೇನೆ ಎಂದಿದ್ದಾರೆ ಗೋಲ್ಡ್ ಸುರೇಶ್.