ಕನ್ನಡ ಚಿತ್ರರಂಗವನ್ನು ಆಳಲು ಶುರು ಮಾಡಿದ ಗೋಲ್ಡನ್ ಸ್ಟಾರ್ ಪತ್ನಿ ಶಿಲ್ಪಾ, ರಚಿತಾ ರಮ್ಯಾ ಶಾ ಕ್

 | 
ಪಗ
 ತುಳುನಾಡಿನ ಜತೆಗೆ ಒಡನಾಟವಿರುವ, ಕರಾವಳಿಯ ಅಳಿಯ 'ಗೋಲ್ಡನ್‌ ಸ್ಟಾರ್‌' ಗಣೇಶ್‌ ಮತ್ತು ಅವರ ಪತ್ನಿ, ಮಂಗಳೂರು ಮೂಲದ ಶಿಲ್ಪಾ ಗಣೇಶ್‌ ತುಳುವಿನಲ್ಲಿ ಸಿನಿಮಾ ನಿರ್ಮಾಣ ಮಾಡಲು ಹೊರಟಿದ್ದಾರೆ. ಡಿಸೆಂಬರ್‌ ತಿಂಗಳಿನಿಂದ ಈ ಸಿನಿಮಾದ ಶೂಟಿಂಗ್‌ ಆರಂಭ ಆಗಲಿದೆ. ಈ ಸಿನಿಮಾಗೆ ಸಂದೀಪ್‌ ಬೆದ್ರ ನಿರ್ದೇಶಕರಾಗಿದ್ದು, ಮೋಹನ್‌ ಭಟ್ಕಳ್‌ ಚಿತ್ರಕಥೆ ಬರೆದಿದ್ದು, ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣ ಮಾಡಲಿದ್ದಾರೆ.
ಹರಿಕೃಷ್ಣ ಬಂಟ್ವಾಳ್‌ ಪುತ್ರ ನಿತ್ಯಪ್ರಕಾಶ್‌ ಬಂಟ್ವಾಳ್‌ ಅವರು ಶಿಲ್ಪಾ ಗಣೇಶ್ ನಿರ್ಮಾಣದ ಈ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸಲಿದ್ದಾರೆ. ನಾಯಕಿಯ ಪಾತ್ರಕ್ಕೆ ಹೊಸಬರನ್ನು ಪರಿಚಯಿಸುವ ಸಾಧ್ಯತೆ ಇದೆ. ಅಂದಹಾಗೆ, ಗಣೇಶ್ ನಾಯಕತ್ವದಲ್ಲಿ ಅನೇಕ ಸಿನಿಮಾಗಳನ್ನು ಶಿಲ್ಪಾ ಗಣೇಶ್ ನಿರ್ಮಾಣ ಮಾಡಿದ್ದಾರೆ. ಇದೀಗ ಅವರಿಗೆ ತವರಿನಲ್ಲಿ ಒಂದು ಸಿನಿಮಾವನ್ನು ನಿರ್ಮಾಣ ಮಾಡಬೇಕು ಎಂಬ ಆಸೆ ಹುಟ್ಟಿಕೊಂಡಿದೆ. ಅದರ ಫಲವಾಗಿ ಈ ತುಳು ಸಿನಿಮಾ ಸೆಟ್ಟೇರುತ್ತಿದೆ.
ಅಷ್ಟಕ್ಕೂ ನಿರ್ಮಾಪಕಿ ಶಿಲ್ಪಾ ಗಣೇಶ್‌ ಕರಾವಳಿಯವರು. ಅವರ ತಾಯಿ ಮಂಗಳೂರಿನವರಾಗಿದ್ದು, ಶಿಲ್ಪಾ ಬೆಳೆದದ್ದು ಉಡುಪಿಯ ಬಾರ್ಕೂರಿನಲ್ಲಿ. ಈಗಾಗಲೇ ಅನೇಕ ಸಿನಿಮಾಗಳನ್ನು ನಿರ್ಮಿಸಿರುವ ಅವರಿಗೆ ತಮ್ಮ ಮಾತೃಭಾಷೆಯಲ್ಲೊಂದು ಸಿನಿಮಾ ಮಾಡಬೇಕೆಂಬ ಬಯಕೆಯಿತ್ತು. ಆ ಕನಸು ಈಡೇರಿಸಲು ಅವರೀಗ ಮುಂದಾಗಿದ್ದು, ಕೋಸ್ಟಲ್‌ವುಡ್‌ನಲ್ಲಿ ಒಂದು ರೀತಿಯ ಸಂಚಲನ ಮೂಡಿದೆ.
ಮಂಗಳೂರಿನ ಕದ್ರಿಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಟ ಗಣೇಶ್‌ ಅವರು ತುಳುವಿನಲ್ಲಿ ಸಿನಿಮಾ ಮಾಡಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದರು. ಈಗ ತಮ್ಮ ಕನಸು ಈಡೇರಿಕೆಯತ್ತ ಸಾಗುತ್ತಿದೆ ಎಂದಿದ್ದಾರೆ ಶಿಲ್ಪಾ ಗಣೇಶ್‌.ಈ ಸಿನಿಮಾದ ಚಿತ್ರಕಥೆ ತಯಾರಾಗಿದ್ದು, ಇಡೀ ಚಿತ್ರ ಕೌಟುಂಬಿಕ ಸಂಬಂಧ, ಮೌಲ್ಯಗಳೊಂದಿಗೆ ಹಾಸ್ಯಭರಿತವಾಗಿ ಸಾಗುತ್ತದೆ.
 ಮಂಗಳೂರು, ಉಡುಪಿ, ಮೂಡುಬಿದಿರೆ, ಬಂಟ್ವಾಳ ಸೇರಿದಂತೆ ಕರಾವಳಿ ಭಾಗದಲ್ಲಿ ಇದರ ಶೂಟಿಂಗ್‌ ನಡೆಯಲಿದೆ. ಚಿತ್ರದ ಹಾಡಿಗೆ ಹೊರಗಿನ ಕೆಲವು ಲೊಕೇಶನ್‌ ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ಶಿಲ್ಪಾ ಗಣೇಶ್ ತಿಳಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.