ದೀಪಿಕಾ ದಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್, ಮದುವೆ ಆದ 6ತಿಂಗಳಿಗೆ ಸಿಹಿಸುದ್ದಿ

 | 
ಕಾ
 ಕನ್ನಡ ಕಿರುತೆರೆಯಲ್ಲಿ ನಾಗಿಣಿ ಎಂದೇ ಫೇಮಸ್ ಆಗಿರುವ ನಟಿ ದೀಪಿಕಾ ದಾಸ್‌ಗೆ ಹೆಚ್ಚು ಜನಪ್ರಿಯತೆ ಸಿಕ್ಕಿದ್ದು ಬಿಗ್ ಬಾಸ್‌ ರಿಯಾಲಿಟಿ ಶೋನಿಂದ. ಎರಡು ಬಾರಿ ಬಿಗ್ ಬಾಸ್‌ ಮನೆಗೆ ಕಾಲಿಟ್ಟಿರುವುದು ದೀಪಿಕಾ ಹೆಚ್ಚುಗಾರಿಕೆ. ಈಚೆಗೆ ಉದ್ಯಮಿ ದೀಪಕ್ ಎಂಬುವವರ ಜೊತೆಗೆ ದೀಪಿಕಾ ಅವರ ಮದುವೆ ಕೂಡ ಆಗಿದೆ. ಈ ಮಧ್ಯೆ ದೀಪಿಕಾ ಬಣ್ಣದ ಲೋಕದಿಂದ ದೂರ ಉಳಿದುಬಿಟ್ರಾ ಎಂಬ ಮಾತುಗಳು ಸಹ ಕೇಳಿಬಂದವು. 
ಆದ್ರೆ ಇದೀಗ ಮದುವೆ ಬಳಿಕ ಒಂದು ಗುಡ್ ನ್ಯೂಸ್ ನೀಡಿದ್ದಾರೆ ದೀಪಿಕಾ.ಹೌದು, ಬಹಳ ದಿನಗಳ ನಂತರ ಬೆಳ್ಳಿಪರದೆ ಮೇಲೆ ಕಾಣಿಸಿಕೊಳ್ಳುವುದಕ್ಕೆ ರೆಡಿ ಆಗಿದ್ದಾರೆ. ಪಾರು ಪಾರ್ವತಿ ಎಂಬ ಸಿನಿಮಾದಲ್ಲಿ ಅವರು ನಾಯಕಿಯಾಗಿದ್ದಾರೆ. ನನ್ನ ಪ್ರಕಾರ, ಇದೊಂದು ಅಡ್ವೆಂಚರಸ್ ಸಿನಿಮಾ. ಪಾರು ಪಾರ್ವತಿ ಸಿನಿಮಾ ನನಗೆ ವೈಯಕ್ತಿಕವಾಗಿ ಚಾಲೆಂಜಿಂಗ್ ಆಗಿತ್ತು. ಈ ಸಿನಿಮಾದಲ್ಲಿ ನಾನು ಪಾಯಲ್ ಅನ್ನೋ ಪಾತ್ರವನ್ನು ಮಾಡುತ್ತಿದ್ದೇನೆ.
 ನಿಜ ಜೀವನದಲ್ಲಿ ನಾನು ಯಾವ ರೀತಿಯ ಪಾತ್ರವನ್ನು ಇಷ್ಟಪಡುತ್ತೇನೋ, ಅಂಥದ್ದೊಂದು ಪಾತ್ರ ಈ ಪಾಯಲ್. ನನ್ನ ರಿಯಲ್ ಲೈಫ್ ಅಲ್ಲಿ ನಾನು ಜೀವಿಸುತ್ತಿರುವ ಪಾತ್ರ ಇದು. ಈ ಸಿನಿಮಾದಲ್ಲಿ ನಟಿಸುವುದಕ್ಕೆ ಇದು ನನಗೆ ತುಂಬಾನೇ ಪ್ಲಸ್ ಪಾಯಿಂಟ್ ಎನ್ನುತ್ತಾರೆ ದೀಪಿಕಾ.ಈ ಪಾಯಲ್ ಅನ್ನೋ ಪಾತ್ರವು ಸಿನಿಮಾದಲ್ಲಿ ಭೂತಕಾಲ ಮತ್ತು ವರ್ತಮಾನ ಕಾಲದಲ್ಲಿ ಸಾಗುತ್ತದೆ. ಎರಡು ರೀತಿಯ ಕಾಲಘಟ್ಟಗಳನ್ನು ಇದು ಪ್ರೆಸೆಂಟ್ ಮಾಡುತ್ತದೆ.
 ಹೀಗೆ ಎರಡು ರೀತಿಯ ವ್ಯಕ್ತಿತ್ವ ಯಾಕೆ? ಹೇಗೆ ಎಂಬುದೇ ನಮ್ಮ ಸಿನಿಮಾದ ಹೈಲೈಟ್ ವಿಷಯ. ಪ್ರತಿಯೊಬ್ಬರಿಗೂ ಬದುಕಿನಲ್ಲಿ ಒಳ್ಳೆಯ ಅಥವಾ ನೋವಿನ ನೆನಪುಗಳು ಇದ್ದೇ ಇರುತ್ತವೆ. ಅದೇ ರೀತಿ ನಮ್ಮ ಸಿನಿಮಾದ ಪ್ರತಿಯೊಂದು ಪಾತ್ರಕ್ಕೂ ಅಂತಹ ಫ್ಲಾಶ್‌ಬ್ಯಾಕ್ ಇದೆ ಎಂದಿದ್ದಾರೆ ದೀಪಿಕಾ.
ಮದುವೆ ಆದಮೇಲೆ ಅದಕ್ಕೆ ಆದಂತಹ ಒಂದು ಟೈಮ್ ನೀಡಬೇಕಾಗುತ್ತದೆ. ಖಾಸಗಿ ಬದುಕಿನ ಕಡೆಗೆ ತುಂಬ ಟೈಮ್ ಕೊಡಬೇಕಿತ್ತು, ಕೊಡುತ್ತಿದ್ದೇನೆ. ಇದರ ಜೊತೆಗೆ ಒಳ್ಳೊಳ್ಳೆಯ ಸಿನಿಮಾಗಳ ಆಫರ್ ಬರುತ್ತಿವೆ ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.