ಡ್ರೋನ್ ಪ್ರತಾಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ, ಶ್ರೀಘ್ರದಲ್ಲೇ ಹೊಸ ಸಿನಿಮಾ ಬಿಡುಗಡೆ

 | 
ಕಕದ

ಡ್ರೋನ್ ಸಂಶೋಧನೆಯಲ್ಲಿ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ ಪ್ರತಾಪ್ ಜೀವನ ಚೆರಿತ್ರೆಯನ್ನು ತೆರೆ ಮೇಲೆ ತೋರಿಸಲು ಒಳ್ಳೆ ಹುಡುಗ ಪ್ರಥಮ್ ಮುಂದಾಗಿದ್ದಾರೆ. ಅಚಾನಕ್ ಜನಪ್ರಿಯತೆ ಪಡೆದ ಪ್ರತಾಪ್ ಬಗ್ಗೆ ತಿಳಿದುಕೊಳ್ಳಳು ಜನರಿಗೂ ಕುತೂಹಲವಿದ್ದು, ಪ್ರಥಮ್ ಅವರು ಪ್ರತಾಪ್ ಅವರನ್ನು ತೆರೆ ಮೇಲೆ ತೋರಿಸುವ ಶೈಲಿಯನ್ನು ವೀಕ್ಷಿಸಲು ಜನರು ಕುತೂಹಲದಿಂದ ಕಾಯುತ್ತಿದ್ದಾರೆ. 

ವಿಶೇಷ ಏನೆಂದು ಪ್ರಥಮ್ ನಟನೆ ಮಾತ್ರವಲ್ಲ. ಈ ಚಿತ್ರಕ್ಕೆ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಪ್ರತಾಪ್‌ ಬಗ್ಗೆ ಅರಿತುಕೊಳ್ಳಲು ಸುಮಾರು 4 ತಿಂಗಳು ತೆಗೆದುಕೊಂಡಿದ್ದಾರಂತೆ ಪ್ರಥಮ್. ಅವರ ಸಾಕಷ್ಟು ಭಾಷಣಗಳನ್ನು ಕೇಳಿ ಅವರ ಹಾವ-ಭಾವವನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದ ಗೌರಿ ಗಣೇಶ್, ಸುಬ್ಬಾ ಶಾಸ್ತ್ರಿ, ಉಂಡು ಹೋದ ಕೊಂಡು ಹೋದ ಶೈಲಿಯಲ್ಲಿ ಈ ಸಿನಿಮಾವನ್ನು ಮಾಡಲು ನಿರ್ಧರಿಸಿದ್ದಾರೆ. ಇದೊಂದು ಹಾಸ್ಯಮಯ ಚಿತ್ರಕತೆ ಎಂದು ಪ್ರಥಮ್ ಹೇಳಿದ್ದಾರೆ.

ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ತಬಲಾ ನಾಣಿ ಇರಲಿದ್ದಾರೆ. ಜೊತೆಗೆ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಆದರಲ್ಲಿ ಒಬ್ಬ ನಾಯಕಿ ಮುಂಬೈ ಮೂಲದವರಾಗಿರುತ್ತಾರೆ. ಮಾಮೂಲಿ ಮಾಸ್ ಹೀರೋಗಳಿಗಿಂತಲೂ ಭಿನ್ನವಾದ ಸಾಮರ್ಥ್ಯ ನಿನಗಿದೆ ಎಂದರು, ಗಂಭೀರ ವಿಷಯಗಳನ್ನು ಹಾಸ್ಯವಾಗಿ ಪ್ರೆಸೆಂಟ್ ಮಾಡುವದನ್ನು ಮುಂದುವರೆಸು, ಎಂದು ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಲಹೆ ನೀಡಿದ್ದಾರೆ. ಈ ಚಿತ್ರಕ್ಕಾಗಿ 15 ಕೆಜಿ ತೂಕ ಇಳಿಸಿಕೊಳ್ಳುತ್ತಿದ್ದೇನೆ, ಎಂದು ಪ್ರಥಮ್ ಹೇಳಿದ್ದಾರೆ.

ದೇವರಂಥ ಮನುಷ್ಯ', 'ಎಂಎಲ್‌ಎ' ಸಿನಿಮಾಗಳಲ್ಲಿ ನಟಿಸಿರುವ ಪ್ರಥಮ್. 'ನಟಭಯಂಕರ' ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಕೇಲವೇ ದಿನಗಳಲ್ಲಿ ಅವರ ಮುಂದಿನ ಸಿನಿಮಾ ಸೆಟ್ಟೇರಲಿದೆ ಎಂದಿದ್ದಾರೆ ಪ್ರಥಮ್. ಕೆಲ ದಿನಗಳ ಹಿಂದಷ್ಟೇ ಮದುವೆಯಾದ ಇವರು ಇನ್ನು ಕೆಲವು ದಿನಗಳ ನಂತರ ಸಿನೆಮಾದಲ್ಲಿ ತೊಡಗಿಸಿ ಕೊಳ್ಳುತ್ತಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.