ಮದ್ವೆಯಾದ ಎರಡೇ ತಿಂಗಳಿಗೆ ಶುಭ ಸುದ್ದಿ, ಶ್ರೀಘ್ರದಲ್ಲೇ ಜ್ಯೂನಿಯರ್ ತರುಣ್ ಆಗಮನ?

 | 
ಪಗದ
 ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ಸದ್ಯ ಟ್ರೆಂಡಿಂಗ್‌ನಲ್ಲಿರುವ ಜೋಡಿ. ಈ ಜೋಡಿ 2024 ಆಗಸ್ಟ್ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಗುರು ಹಿರಿಯರು, ಸ್ನೇಹಿತರು, ಹಾಗೂ ಬಂಧು ಮಿತ್ರರ ಸಮ್ಮುಖದಲ್ಲಿ ಬೆಂಗಳೂರಿನ ಮೈಸೂರು ರೋಡ್‌ನಲ್ಲಿರುವ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ಈ ಜೋಡಿ ಮದುವೆಯಾಗಿದ್ದರು.
ಕೆಲವೇ ದಿನಗಳ ಹಿಂದೆ ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ನವದಂಪತಿ ಹನಿಮೂನ್‌ಗೆ ಮಾಲ್ಡೀವ್ಸ್‌ಗೆ ತೆರಳಿದ್ದರು. ಅಲ್ಲಿ ಕಳೆದ ಸುಂದರ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸದ್ಯ ಬೆಂಗಳೂರಿಗೆ ವಾಪಸ್ ಆಗಿರುವ ಈ ಜೋಡಿ ಮತ್ತೆ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯೂಸಿಯಾಗಿದ್ದಾರೆ. ಹಾಸನಾಂಬೆ ದರ್ಶನ ಮಾಡಿದ್ದಾರೆ.
ಆದರೆ ಮದುವೆಯಾದ ಮೇಲೆ ನಟಿ ಸೋನಾಲ್‌ ಸ್ವಲ್ಪ ಮಟ್ಟಿಗೆ ದಪ್ಪ ಅಂದರೆ ತೂಕ ಹೆಚ್ಚಿಸಿಕೊಂಡಂತೆ ಕಾಣುತ್ತಿದ್ದಾರೆ. ಈ ಬಗ್ಗೆ ಸ್ವತಃ ನಟಿ ಸೋನಲ್ ಮೊಂಥೆರೋ ಅವರೇ ಮಾತನಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 
ಮದುವೆ ಬಳಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದ ಸೋನಲ್ ಈ ಕಾರ್ಯಕ್ರಮ ಮುಗಿಸಿ ವಾಪಸ್‌ ತೆರಳುವ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ ತೂಕ ಹೆಚ್ಚಾಗಿರುವ ಕುರಿತು ಪ್ರಶ್ನೆಗೆ ಉತ್ತರಿಸಿದ್ದಾರೆ.
ಮದುವೆಯಾದ ಮೇಲೆ ಗಂಡ ಖುಷಿಯಿಂದ ನೋಡಿಕೊಂಡರೆ ಪತ್ನಿ ದಪ್ಪ ಆಗುತ್ತಾರೆ. ನಾನು ತುಂಬಾ ಖುಷಿಯಾಗಿ ಇದ್ದೇನೆ ಎಂದು ನಟಿ ಸೋನಾಲ್‌ ನೀಡಿರುವ ಉತ್ತರ ವೈರಲ್‌ ಆಗುತ್ತಿದೆ. ಇದೇ ವೇಳೆ ಮದುವೆಯಾದ ಮೇಲೆ ಜೀವನ ಚೆನ್ನಾಗಿದೆ ಎಂದಿರುವ ನಟಿ ಸೋನಾಲ್‌, ಸದ್ಯದಲ್ಲೇ ಸಿನಿಮಾ ಕೆಲಸಗಳಿಗೆ ವಾಪಸ್‌ ಆಗುವ ಬಗ್ಗೆ ಕೂಡ ತಿಳಿಸಿದ್ದರು. ಆದರೆ ಇದೀಗ ಸೋನಾಲ್ ಗರ್ಭಿಣಿ ಆಗಿದ್ದಾರೆ ಹಾಗಾಗಿ ದಪ್ಪ ಅಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.