ಉಚಿತ ಬಸ್ ಪ್ರಯಾಣಿಸುವ ಮಹಿಳೆಯರಿಗೆ ಹೊಸ ರೂಲ್ಸ್ ಹಾಕಿದ ಸರ್ಕಾರ, ಈ ಕೂಡಲೇ ಪರಿಶೀಲಿಸಿ

 | 
Jd
ಕರ್ನಾಟಕ ರಾಜ್ಯ ಸರ್ಕಾರ ಬಂದ ನಂತರ ಜಾರಿಯಾದ ಐದು ಗ್ಯಾರಂಟಿಗಳ ಪೈಕಿ ಮೊದಲನೆಯದ್ದು ಶಕ್ತಿ ಯೋಜನೆ. ಈ ಯೋಜನೆಯಡಿ ಕೋಟ್ಯಂತರ ಮಹಿಳೆಯರು ಸಾರ್ವಜನಿಕ ಸಾರಿಗೆಯಲ್ಲಿ ಉಚಿತವಾಗಿ ಸಂಚರಿಸುವ ಅವಕಾಶ ಪಡೆದಿದ್ದಾರೆ. ಇವರೆಲ್ಲರು ಆಧಾರ್ ಕಾರ್ಡ್ ತೋರಿಸಿ ಉಚಿತ ಪ್ರಯಾಣ ಮಾಡುತ್ತಿದ್ದು, ಇವರೆಲ್ಲರಿಗೂ ಸಾರಿಗೆ ಇಲಾಖೆಯಿಂದ ಶೀಘ್ರವೇ 'ಸ್ಮಾರ್ಟ್ ಕಾರ್ಡ್' ವಿತರಿಸಲಾಗುತ್ತದೆ.
ಹೌದು, ಈ ಬಗ್ಗೆ ರಾಜ್ಯ ಸರ್ಕಾರವೇ ಅಧಿಕೃತ ಮಾಹಿತಿ ನೀಡಿದೆ. ಸ್ಮಾರ್ಟ್ ಕಾರ್ಡ್ ನೀಡುವ ಮೂಲಕ ಶಕ್ತಿ ಯೋಜನೆಯನ್ನು ಮತ್ತಷ್ಟು ಸರಳೀಕರಣಗೊಳಿಸಲಾಗುತ್ತದೆ. ಯಾರೆಲ್ಲ ಶಕ್ತಿ ಯೋಜನೆಯ ಫಲಾನುಭವಿಗಳಿದ್ದಾರೋ ಅವರಿಗೆಲ್ಲ 'ಶಕ್ತಿ ಸ್ಮಾರ್ಟ್ ಕಾರ್ಡ್' ನೀಡಲಾಗುತ್ತದೆ ಎಂದು TNIE ವರದಿ ಮಾಡಿದೆ.
ಶಕ್ತಿ ಯೋಜನೆ ಕರ್ನಾಟಕದ ಮಹಿಳಾ ಫಲಾನುಭವಿಗಳಿಗೆ ಮಾತ್ರವೇ ಅನ್ವಯವಾಗುತ್ತದೆ. ಅವರೆಲ್ಲರು ಆಧಾರ್ ಕಾರ್ಡ್ ತೋರಿಸಿದರೆ ಅವೆಲ್ಲ ಪರಿಶೀಲಿಸಬೇಕಾಗುತ್ತದೆ. ಇದೇ ರಾಜ್ಯದವರಾ? ಹೌದಾ, ಅಲ್ಲವಾ? ಎಂದು ನೋಡಬೇಕಾಗುತ್ತದೆ. ಇದಕ್ಕಾಗಿ ನಿರ್ವಾಹಕರಿಗೆ ಕೊಂಚ ಸಮಸ್ಯೆಯು ಆಗುತ್ತಿದೆ. ಆಗಾಗ ಕೆಲವೆಡೆ ಬಸ್ ನಿರ್ವಾಹಕರ ಜೊತೆಗೆ ಮಹಿಳೆಯರು ಜಗಳ ಆಡಿದ್ದು ಇದೆ. ಹಾಗಾಗಿ ಫೆಬ್ರವರಿ ತಿಂಗಳಿಂದ ಬಸ್ ನಲ್ಲಿ ತಿರುಗಲು ಸ್ಮಾರ್ಟ್ ಕಾರ್ಡ್ ಅಗತ್ಯ. ಇನ್ನು ಪಿಂಚಣಿ ಯೋಜನೆ ಅಡಿಯಲ್ಲಿ ವೃದ್ಧರಿಗೆ ಹಣ ದೊರೆಯಲಿದೆ.
ಪಿಂಚಣಿಯನ್ನು ಪಡೆಯುವ ನಿವೃತ್ತ ಸರ್ಕಾರಿ ನೌಕರರು ನವೆಂಬರ್ ತಿಂಗಳಿನಲ್ಲಿ 'ಜೀವನ್ ಪ್ರಮಾಣ ಪತ್ರ' ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ. ಇದಕ್ಕಾಗಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್, ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರ ಸಮನ್ವಯದೊಂದಿಗೆ ಎಲ್ಲಾ ಕೇಂದ್ರ, ರಾಜ್ಯ ಮತ್ತು ಉದ್ಯೋಗಿಗಳ ಭವಿಷ್ಯನಿಧಿಯ ಸಂಸ್ಥೆ ಪಿಂಚಣಿದಾರರಿಗೆ 'ಜೀವನ್ ಪ್ರಮಾಣ ಪತ್ರ'ವನ್ನು ನೀಡಲು ಸುಲಭವಾಗುವಂತೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸೇವೆ ಪರಿಚಯಿಸಿದೆ. ಇದನ್ನು ರಾಜ್ಯ ಸರ್ಕಾರಕ್ಕೇ ನೀಡಿದರೆ ನೀವು 800 ರೂಪಾಯಿ ಮಾಸಿಕ ವೇತನ ಪಡೆಯಬಹುದಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.