ಮಾವನ ಮಗನ ಜೊತೆ ಗುಡ್ ನ್ಯೂಸ್ ಕೊಟ್ಟ ಗೌರಿ ಶೃತಿ, ಕನ್ನಡಿಗರಿಗೆ ಹಬ್ಬದೂಟ
Oct 15, 2024, 16:14 IST
|
ಚಿತ್ರರಂಗದಲ್ಲಿ ಹೀರೋ ಹಿರೊಯಿನ್ ಸುದ್ಧಿಯಾದಷ್ಟೇ ಅವರ ಮಕ್ಕಳು ಕೂಡ ಸುದ್ದಿ ಆಗ್ತಾರೆ. ಹೌದು ಸ್ಯಾಂಡಲ್’ವುಡ್ ಜನಪ್ರಿಯ ನಟಿ ಶ್ರುತಿ ಮಗಳು ಗೌರಿ ಈಗಾಗಲೇ ಸೋಶಿಯಲ್ ಮೀಡಿಯಾ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರು ಹೋದಲ್ಲಿ ಬಂದಲ್ಲಿ ಎಲ್ಲಾ ಕಡೆ ಸುದ್ದಿಯಾಗುತ್ತಲೇ ಇರುತ್ತಾರೆ. ಜೊತೆಗೆ ತಮ್ಮ ಹಾಡಿನ ಮೂಲಕವೂ ಗೌರಿ ಜನಮನ ಗೆದ್ದಿದ್ದಾರೆ. ಜೊತೆಗೆ ತಮ್ಮ ಸಿಂಪ್ಲಿಸಿಟಿ, ಹೆಚ್ಚಾಗಿ ಸೀರೆಯಲ್ಲೇ ಕಾಣಿಸಿಕೊಳ್ಳುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.
ಇದೀಗ ಗೌರಿ ಶ್ರುತಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದು, ಹುಡುಗನ ಜೊತೆ ಕೈಕೈಹಿಡಿದು, ಹೆಗಲ ಮೇಲೆ ಕೈ ಹಾಕಿ ಫೋಟೊ ತೆಗೆಸಿಕೊಂಡಿದ್ದಾರೆ. ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಜೋಡಿ ಚೆನ್ನಾಗಿದೆ ಎಂದು ಹೇಳ್ತಿದ್ದಾರೆ ನೆಟ್ಟಿಗರು.
ಅರೆರೆ ಮದುವೆ ಫಿಕ್ಸ್ ಆಯ್ತಾ ಅಂತ ಅಭಿಮಾನಿಗಳು ಕೇಳಿದ್ರೆ ಅಷ್ಟಕ್ಕೂ ಗೌರಿ ಶ್ರುತಿ ಜೊತೆ ಕಾಣಿಸಿಕೊಂಡ ಈ ಹುಡುಗ ಬೇರೆ ಯಾರೂ ಅಲ್ಲ ನಟ ಶರಣ್ ಪುತ್ರ ಅಂದ್ರೆ ಶ್ರುತಿ ಅವರ ಅಣ್ಣನ ಮಗ ಅಂದ್ರೆ ಗೌರಿಯವರ ಮಾವನ ಮಗ ಹೃದಯ್ ಶರಣ್ ಗೌರಿ ತಮ್ಮ ಮುದ್ದಿನ ಮಾವನ ಮಗನ ಜೊತೆ ಫೋಟೊ ತೆಗೆಸಿಕೊಂಡು ಪೋಸ್ಟ್ ಮಾಡಿದ್ದು, ಇದಕ್ಕೆ ತರಹೇವಾರಿ ಕಾಮೆಂಟ್ ಗಳು ಬರುತ್ತಿವೆ.
ಕೆಲವರು ಯಾರಿವರು ಎಂದು ಕೇಳಿದ್ರೆ, ಇನ್ನೂ ಕೆಲವರು ನಿಮ್ಮಿಬ್ಬರ ಜೋಡಿ ಚೆನ್ನಾಗಿದೆ. ಯಾವಾಗ ಮದ್ವೆ ಅಂತಾನೂ ಕೇಳ್ತಿದ್ದಾರೆ. ಇನ್ನೂ ಕೆಲವರು ಹುಡುಗ ಚೆನ್ನಾಗಿದ್ದಾರೆ ಎಂದಿದ್ದಾರೆ. ಇನ್ನೂ ಕೆಲವರು ಅತ್ತೆ ಮಗಳ ಜೊತೆ ಮಾವನ ಮಗ ಅಂತಾನೂ ಕಾಮೆಂಟ್ ಮಾಡಿದ್ದಾರೆ.
ಶರಣ್, ಶ್ರುತಿ ಎಲ್ಲರದ್ದೂ ಕೂಡು ಕುಟುಂಬ ಅಂತಾನೆ ಹೇಳಬಹುದು, ಬೇರೆ ಬೇರೆಯಾಗಿದ್ರೂ ಎಲ್ಲರೂ ಹೆಚ್ಚಾಗಿ ಜೊತೆಯಾಗಿಯೇ ಕಂಡು ಬರ್ತಾರೆ. ಎಲ್ಲಾ ಕಡೆ ಜೊತೆಯಾಗಿಯೇ ಟ್ರಾವೆಲ್ ಮಾಡ್ತಾರೆ. ಗೌರಿ ಮತ್ತು ಹೃದಯ್ ಕೂಡ ಅಷ್ಟೇ. ಇಬ್ಬರದ್ದು ಅಕ್ಕ- ತಮ್ಮನ ಸಂಬಂಧ ಅಂತ ಹೇಳಬಹುದು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.