ಕೇರಳಕ್ಕೆ ಮಹಾಹಬ್ಬ; ಅರ್ಜುನ್ ಲಾರಿ ಪತ್ತೆ ಜೊತೆ ಡ್ರೈವರ್ ಕೂಡ ಜೀವಂತ
Aug 16, 2024, 13:06 IST
|
ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿರುವ ಕೇರಳದ ಲಾರಿ ಡ್ರೈವರ್ ಅರ್ಜುನ್‌ಗಾಗಿ ತೀವ್ರ ಶೋಧ ಮುಂದುವರಿದಿದೆ. ಭಾರತೀಯ ಸೇನೆ ಕೂಡ ಈ ಕಾರ್ಯಾಚರಣೆಗೆ ಇಳಿದಿದೆಯಾದ್ರೂ ರಾಡರ್ ಮೂಲಕ ಲಾರಿ ಇರುವ ಜಾಗವನ್ನು ಮಾತ್ರ ಗುರುತಿಸಲು ಸಾಧ್ಯವಾಗಿದೆ. ಗಂಗಾವಳಿ ನದಿಯ ನೀರಿನ ಒಳಹರಿವಿನ ವೇಗಕ್ಕೆ ನದಿಗೆ ಇಳಿಯುವ ಸಾಹಸಕ್ಕೆ ಸೇನಾ ಸಿಬ್ಬಂದಿ ಕೂಡ ಕೈ ಹಾಕಿಲ್ಲ.
ಹೀಗಾಗಿ ಅಕ್ವಾ ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ಉಡುಪಿಯ ಈಶ್ವರ್ ಮಲ್ಪೆಯ ಸಹಾಯವನ್ನು ಉತ್ತರ ಕನ್ನಡ ಜಿಲ್ಲಾಡಳಿತ ಪಡೆದುಕೊಂಡಿದೆ. ಶನಿವಾರದಂದು ಶಿರೂರಿಗೆ ತೆರಳಿದ ಈಶ್ವರ ಮಲ್ಪೆ ಹಾಗೂ ಅವರ ಎಂಟು ಮಂದಿ ಸದಸ್ಯರು ಗಂಗಾವಳಿ ನದಿಯಲ್ಲಿ ಅರ್ಜುನ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಸೇನಾ ಸಿಬ್ಬಂದಿ ಜೊತೆ ಗಂಗಾವಳಿ ನದಿಯಲ್ಲಿ ಈಶ್ವರ ಮಲ್ಪೆ ಶೋಧ ಕಾರ್ಯ ಆರಂಭಿಸಿದ್ದಾರೆ. ಖುದ್ದು ಕಾರ್ಯಾಚರಣೆಗೆ ಇಳಿದ ಈಶ್ವರ ಮಲ್ಪೆ ಆರಂಭದಲ್ಲಿ ಎರಡು ಬಾರಿ ನದಿಯಲ್ಲಿ ಮುಳುಗಿ ತಕ್ಷಣ ಮೇಲೆ ಬಂದಿದ್ದು, ಮೂರನೇ ಬಾರಿ ಮುಳುಗಿದಾಗ ನದಿಯ ಒಳಹರಿವಿನಲ್ಲಿ ಸುಮಾರು 50 ಅಡಿ ಮುಂದೆ ಹೋಗಿದ್ದಾರೆ.
ಈಶ್ವರ ಮಲ್ಪೆ ಅವರ ಸಹಾಯಕ್ಕೆ ನೀಡಿದ್ದ ಲಂಗರು ಹಗ್ಗ ಕೈ ತಪ್ಪಿದ ಕಾರಣ ಈ ಘಟನೆ ನಡೆದಿತ್ತು. ಆದರೆ, ನಿರಂತರ ಮೂರು ಗಂಟೆಗಳ ಕಾಲ ಈಶ್ವರ ಮಲ್ಪೆ ವೇಗವಾಗಿ ಹರಿಯುವ ನದಿಯಲ್ಲಿ ಮುಳುಗಿ ಸೇನೆಯವರು ಗುರುತಿಸಿದ ಜಾಗವನ್ನು ತಲುಪುವ ಪ್ರಯತ್ನ ಮಾಡಿದ್ದಾರೆ. ಆದರೆ ಸಂಜೆಯ ತನಕವೂ ಹುಡುಕಾಟ ನಡೆಸಿದ್ದರೂ ಲಾರಿಯ ಯಾವುದೇ ಸುಳಿವು ಪತ್ತೆಯಾಗಿಲ್ಲ.
ಇನ್ನು ಮಡಿಕೇರಿಯಲ್ಲಿ ಕಾವೇರಿ ನದಿಯಲ್ಲಿ ನಾಪತ್ತೆಯಾಗಿದ್ದ ಯುವಕನನ್ನು ಮೂರು ದಿನಗಳ ನಿರಂತರ ಹುಡುಕಾಟದ ಬಳಿಕ ಈಶ್ವರ್ ಮಲ್ಪೆ ಪತ್ತೆ ಹಚ್ಚಿದ್ದರು. ಕಾವೇರಿ ನದಿಯಲ್ಲಿ ಮುಳುಗಿ ಮೃತ ಪಟ್ಟಿದ್ದ ಯುವಕನ ಮೃತದೇಹ ಮೇಲೆತ್ತಿ ಕುಟುಂಬಕ್ಕೆ ಹಸ್ತಾಂತರಿಸಿದ್ದರು. ಈ ಕಾರ್ಯಾಚರಣೆ ಮುಗಿಸಿ ಊರಿಗೆ ಮರಳುತ್ತಿರುವಾಗಲೇ ಶಿರೂರಿಗೆ ಬರುವಂತೆ ಕರೆ ಬಂದಿದೆ.
ಹೀಗಾಗಿ ನೇರ ಶಿರೂರಿಗೆ ತೆರಳಿದ ಈಶ್ವರ್ ಮಲ್ಪೆ ಅವರ ತಂಡ ಕಾರ್ಯಾಚರಣೆಗೆ ಇಳಿದಿದೆ. ಈ ವೇಳೆ ಈಶ್ವರ್ ಮಲ್ಪೆ ಅವರ ತಂಡದ ಮೂರು ದೋಣಿ ಹಾಗೂ ಸೇನೆಯ ಒಂದು ದೋಣಿ ಈಶ್ವರ್ ಮಲ್ಪೆಯವರ ರಕ್ಷಣೆಗೆ ನಿಂತಿದೆ. ಮುಳುಗುವ ಸಮಯದಲ್ಲಿ ಯಾವುದೇ ಅಪಾಯ ಬಾರದಂತೆ ಈಶ್ವರ್ ಮಲ್ಪೆ ಅವರ ಮೇಲೆ ಸೇನೆ ತೀವ್ರ ನಿಗಾ ವಹಿಸಿದೆ. ಈಶ್ವರ್ ಮಲ್ಪೆ ನೀರಿನಲ್ಲಿ ಮುಳುಗಿದ್ದರೂ ಅವರು ಅಪಾಯದಲ್ಲಿ ಇಲ್ಲ ಎಂದು ತಿಳಿಯುವ ರೀತಿಯಲ್ಲಿ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಹಾಗಾಗಿ ಅರ್ಜುನನ ಕುಟುಂಬಕ್ಕೆ ಹೊಸ ಹುರುಪು ಬಂದಿದೆ.