ಗೃಹಲಕ್ಷ್ಮಿ ಹಣ ಕೂಡಿಟ್ಟು ಮಗನಿಗೆ ಲಕ್ಷ ಬೆಲೆಯ ಬೈಲ್ ಗಿಫ್ಟ್ ಕೊಟ್ಟ ಮಹಾತಾಯಿ
Oct 13, 2024, 16:25 IST
|
ಹೆಣ್ಣು ಮಕ್ಕಳು ಹಣ ಖರ್ಚು ಮಾಡುವುದು ಮಾತ್ರವಲ್ಲ ಉಳಿಸಲು ಕೂಡ ನಿಪುಣರು.ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟು, ಬೆಳಗಾವಿ ಜಿಲ್ಲೆಯಲ್ಲಿ ತಾಯಿಯೊಬ್ಬಳು ತನ್ನ ಮಗನಿಗೆ ಬೈಕ್ ಕೊಡಿಸುವ ಮೂಲಕ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಅಷ್ಟಕ್ಕೂ ಸುಮ್ಮ ಸುಮ್ಮನೇ ಹೇಳುತ್ತಿಲ್ಲ ಬಿಡಿ.ಗೋಕಾಕ್ ತಾಲ್ಲೂಕಿನ ಕೌಜಲಗಿ ಗ್ರಾಮದ ಬಾಗವ್ವಾ ನೀಲಪ್ಪ ಸಣ್ಣಕ್ಕಿ ಎಂಬ ಮಹಿಳೆ, ತನ್ನ ಮಗ ರಮೇಶ ನೀಲಪ್ಪ ಸಣ್ಣಕ್ಕಿಗೆ ದ್ವಿಚಕ್ರ ವಾಹನ ಕೊಡಿಸಿದ್ದಾರೆ. ಶುಕ್ರವಾರ ಆಯುಧ ಪೂಜೆ ದಿನದಂದು ಶೋ ರೂಮಿನಿಂದ ಬೈಕ್ ಖರೀದಿಸಿ, ಪೂಜೆ ಮಾಡಿ ಸಂಭ್ರಮಿಸಿದ್ದಾರೆ.
ಗೃಹಲಕ್ಷ್ಮೀ ಯೋಜನೆಯ ಹಣ ಇಂದು ರಾಜ್ಯದ ಲಕ್ಷಾಂತರ ಮಹಿಳೆಯರ ಜೀವನದಲ್ಲಿ ಹೊಸ ಸಂಚಲನ ಮೂಡಿಸಿದ್ದು, ನಾನಾ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಅದರಂತೆ ಕೌಜಲಗಿಯ ಬಾಗವ್ವಾ ನೀಲಪ್ಪ ಸಣ್ಣಕ್ಕಿಅವರು ತನ್ನ ಮಗನಿಗೆ ಬೈಕ್ ಕೊಡಿಸುವ ದುಡಿಮೆಗೆ ಹೋಗಲು ನೆರವಾಗಿದ್ದಾರೆ.
ಗೃಹಲಕ್ಷ್ಮೀ ಹಣದಿಂದ ಬೈಕ್ ಕೊಡಿಸಿದ ತಮ್ಮ ತವರು ಜಿಲ್ಲೆ ಕೌಜಲಗಿಯ ತಾಯಿ -ಮಗನಿಗೆ ಸಚಿವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶುಭ ಹಾರೈಸಿದ್ದಾರೆ. ಕುಟುಂಬದ ಮನೆಯೊಡತಿಯರಿಗೆ ಪ್ರತಿ ತಿಂಗಳ 'ಗೃಹಲಕ್ಷಿ' ಯೋಜನೆಯ ಹಣ ಇಂದು ಲಕ್ಷಾಂತರ ಮಹಿಳೆಯರ ಜೀವನದಲ್ಲಿ ಹೊಸ ಸಂಚಲನ ಮೂಡಿಸಿದೆ. ಗೃಹಲಕ್ಷ್ಮೀ ಹಣವು ಮಹಿಳೆಯರಿಗೆ ವಿವಿಧ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಲು ನೆರವಾಗಿರುವುದು ಸಚಿವರಲ್ಲಿ ಹರ್ಷ ತರಿಸಿದೆ ಎಂದಿದ್ದಾರೆ.
ಇಷ್ಟೇ ಅಲ್ಲ ರಾಜ್ಯ ಸರಕಾರ ನೀಡುತ್ತಿರುವ ಗೃಹ ಲಕ್ಷ್ಮಿ ಹಣದಿಂದ ಬೆಳ್ಳಿ ಕಿರೀಟ ಮಾಡಿಸಿ ದೇವಿಗೆ ಅರ್ಪಿಸುವ ಮೂಲಕ ಮಹಿಳೆಯೊಬ್ಬರು ಭಕ್ತಿ ಮೆರೆದಿದ್ದಾರೆ. ವಿಜಯಪುರ ತಾಲೂಕಿನ ಹೂವಿನಹಳ್ಳಿ ಗ್ರಾಮದ ಭಾಗಮ್ಮ ಗುರುಶಾಂತಗೌಡ ಬಿರಾದಾರ ಕಿರೀಟ ಅರ್ಪಿಸಿದ ದೇವಿ ಭಕ್ತೆ. ಅವರ ಖಾತೆಗೆ ಜಮೆಯಾದ 12 ತಿಂಗಳ ಗೃಹ ಲಕ್ಷಿತ್ರ್ಮ ಹಣವನ್ನು ಕೂಡಿಟ್ಟು ನವರಾತ್ರಿ ನಿಮಿತ್ತ ಗ್ರಾಮದಲ್ಲಿಪ್ರತಿಷ್ಠಾಪಿಸಿರುವ ದೇವಿ ಮೂರ್ತಿಗೆ 250 ಗ್ರಾಂ ಬೆಳ್ಳಿ ಕಿರೀಟ ಮಾಡಿಸಿ ಮಾದರಿಯಾಗಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.