ಮೊದಲ ಪತ್ನಿ ಡಿವೋಸ್೯ ಬೆನ್ನಲ್ಲೇ ಇಂಗ್ಲಿಷ್ ಬ್ಯೂಟಿ ಜೊತೆ ಸಿಕ್ಕಿಬಿದ್ದ ಹಾದಿ೯ಕ್ ಪಾಂಡ್ಯ

 | 
Vi
 ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಅವರು ನತಾಶಾ ಜೊತೆಗಿನ ಡಿವೋರ್ಸ್ ನಂತರ ಈಗ ಮತ್ತೆ ಫಾರಿನ್ ಬ್ಯೂಟಿಯ ಹಿಂದೆ ಬಿದ್ದಿದ್ದಾರಾ? ಫಾರಿನ್ ನಟಿಯ ಜೊತೆ ಡೇಟಿಂಗ್ ಮಾಡುತ್ತಿದ್ದಾರಾ? ನತಾಶಾ ಅವರು ಕೂಡಾ ಭಾರತದವರಲ್ಲ. ಈಗ ಈ ನಟಿಯೂ ಭಾರತದವರಲ್ಲ. ಅಂತೂ ಹಾರ್ದಿಕ್ ಪಾಂಡ್ಯಗೆ ದೇಸಿ ಆಗಲ್ಲ, ಫಾರೀನ್ನೇ ಬೇಕು ಎಂದು ತಮಾಷೆ ಮಾಡ್ತಿದ್ದಾರೆ ನೆಟ್ಟಿಗರು.ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಹಾಗೂ ನಟಿ ನತಾಶಾ ಅವರ ಡಿವೋರ್ಸ್ ಭಾರೀ ಸುದ್ದಿಯಾಗಿತ್ತು.
 ನಂತರ ಇಬ್ಬರೂ ಪರಸ್ಪರ ಸಮ್ಮತಿಯಿಂದ ದೂರ ಆಗಲು ನಿರ್ಧರಿಸಿದ್ದಾಗಿ ಅನೌನ್ಸ್ ಮಾಡಿದರು. ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಗೂ ಹಾರ್ದಿಕ್ ಪಾಂಡ್ಯ ಒಬ್ಬರೇ ಬಂದಿದ್ದರು.ಈಗ ಹಾರ್ದಿಕ್ ಪಾಂಡ್ಯ ವೆಕೇಷನ್​ನಲ್ಲಿ ಬ್ಯುಸಿಯಾಗಿರುವುದು ಕಂಡು ಬಂದಿದೆ. ಈ ನಡುವೆ ಅವರು ಬ್ರಿಟಿಷ್ ಸಿಂಗರ್ ಹಾಗೂ ನಟಿಯಾಗಿರುವ ಜಾಸ್ಮಿನ್ ವಾಲಿಯಾ ಜೊತೆ ಡೇಟಿಂಗ್ ಮಾಡುತ್ತಿರುವ ಸುದ್ದಿ ವೈರಲ್ ಆಗಿದೆ. ಅವರಿಬ್ಬರೂ ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ಹಾರ್ದಿಕ್ ಪಾಂಡ್ಯ ವಿಚ್ಛೇದನೆ ಅನೌನ್ಸ್ ಮಾಡಿದ ಜಸ್ಟ್ 1 ತಿಂಗಳ ಒಳಗಾಗಿ ಈ ಸುದ್ದಿ ಬಂದಿದೆ. ಹಾರ್ದಿಕ್ ಪಾಂಡ್ಯ ಹಾಗೂ ಜಾಸ್ಮಿನ್ ಒಂದೇ ಲೊಕೇಷನ್​ನಲ್ಲಿ ವೆಕೇಷನ್ ಎಂಜಾಯ್ ಮಾಡುವುದನ್ನು ಗಮನಿಸಿದ ನೆಟ್ಟಿಗರು ಈ ವಿಚಾರ ಚರ್ಚೆ ಮಾಡಲು ಶುರು ಮಾಡಿದ್ದಾರೆ. ಇವರು ಹೊಸ ಜೋಡಿ ಎನ್ನುತ್ತಿದ್ದಾರೆ.ಗ್ರೀಸ್​ನಲ್ಲಿ ಇಬ್ಬರೂ ಜೊತೆಯಾಗಿ ವೆಕೇಷನ್ ಮಾಡುತ್ತಿರುವಂತೆ ಕಂಡು ಬಂದಿದೆ. ಇದಕ್ಕೆ ಕಾರಣ ಅವರಿಬ್ಬರೂ ಸೇಮ್ ಲೊಕೇಷನ್​ನಲ್ಲಿರುವ ಫೊಟೋ ಹಾಗೂ ವಿಡಿಯೋ ಶೇರ್ ಮಾಡಿದ್ದಾರೆ. 
ಜಾಸ್ಮಿನ್ ಫೋಟೋಗೆ ಪೋಸ್ ಕೊಟ್ಟಿರೋ ಅದೇ ಜಾಗದಲ್ಲಿ ಹಾರ್ದಿಕ್ ಪಾಂಡ್ಯ ವಿಡಿಯೋ ಮಾಡಿದ್ದಾರೆ. ಅದನ್ನು ಶೇರ್ ಕೂಡಾ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ಜಾಸ್ಮಿನ್ ವಾಲಿಯಾ ಅವರು ಒಂದೇ ಸ್ವಿಮ್ಮಿಂಗ್ ಪೂಲ್ ಮುಂದೆ ನಿಂತು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು ಆ ಫೊಟೋ, ವಿಡಿಯೋ ಶೇರ್ ಮಾಡಿದ್ದು ಚರ್ಚೆಗೆ ಕಾರಣವಾಯಿತು. ಜಾಸ್ಮಿನ್ ನೀಲಿ ಬಿಕಿನಿ ಧರಿಸಿ ಪೋಸ್ ಕೊಟ್ಟಿದ್ದರು. ಫೊಟೋಸ್ ಪೋಸ್ಟ್ ಮಾಡಿದ್ದರು.ನಟಿ ನೀಲಿ ಬಣ್ಣದ ಬಿಕಿನಿ, ಬ್ಲೂ ಶರ್ಟ್ ಧರಿಸಿ ಓವರ್ ಸೈಜ್ ಗಾಗಲ್ಸ್, ಹ್ಯಾಟ್ ಧರಿಸಿದ್ದರು. ಅವರು ಈ ವೆಕೇಷನ್ ಫೊಟೋ ಶೇರ್ ಮಾಡಿದ ಸ್ವಲ್ಪ ಸಮಯದ ನಂತರ ಹಾರ್ದಿಕ್ ಪಾಂಡ್ಯ ಅವರು ಅದೇ ಪೂಲ್​ನ ಮುಂದೆ ನಡೆದಾಡುವ ಇನ್​ಸ್ಟಾಗ್ರಾಮ್ ರೀಲ್ಸ್ ಶೇರ್ ಮಾಡಿದ್ದಾರೆ. ಅವರು ಕ್ಯಾಶುವಲ್ ಫ್ಯಾಷನೆಬಲ್ ಪ್ಯಾಂಟ್ ಶರ್ಟ್ ಧರಿಸಿದ್ದರು. 
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.