ಹನುಮಂತ ನೀನು ಗಂಡಸಾದರೆ ಬಂದು ಮಾ... ನಿವೇದಿತಾ ಗೌಡ ಮಾತಿಗೆ ಕುರಿಗಾಯಿ ಕೌಂಟರ್
Feb 5, 2025, 17:47 IST
|

ಬಿಗ್ ಬಾಸ್ ಕನ್ನಡ ಸೀಸನ್ 11 ರ ವಿಜೇತ ಹನುಮಂತ ಅವರು ‘ಬಾಯ್ಸ್ vs ಗರ್ಲ್ಸ್’ ಶೋದಲ್ಲಿ ನಿವೇದಿತಾ ಗೌಡ ಅವರೊಂದಿಗೆ ನಡೆದ ಚರ್ಚೆಯಿಂದಾಗಿ ವೈರಲ್ ಆಗಿದ್ದಾರೆ. ನಿವೇದಿತಾ ಅವರ ಉಗುರಿನ ಬಗ್ಗೆ ನಡೆದ ಚರ್ಚೆಯಲ್ಲಿ ಹನುಮಂತ ಅವರ ತಮಾಷೆಯ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಅವರ ಸ್ಪಷ್ಟ ಹಾಗೂ ಸಮಂಜಸವಾದ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆದಿದೆ.
ಈಗೀಗ ಹನುಮಂತ ಅವರು ಫೇಮಸ್ ಆಗಿದ್ದಾರೆ. ಅವರಿಗೆ ಅಪಾರ ಜನಪ್ರಿಯತೆ ಸಿಕ್ಕಿದೆ. ಅವರು ಸೈಲೆಂಟ್ ಆಗಿರೋದು ಹೆಚ್ಚು. ಹಾಗಂತ ಅವರನ್ನು ಯಾರಾದರೂ ಕೆಣಕಲು ಬಂದರೆ ಅದಕ್ಕೆ ಉತ್ತರ ಕೊಡದೆ ಸುಮ್ಮನಾಗುವುದೇ ಇಲ್ಲ. ಈಗ ‘ಬಾಯ್ಸ್ vs ಗರ್ಲ್ಸ್’ ವೇದಿಕೆ ಮೇಲೆ ನಿವೇದಿತಾ ಗೌಡ ಅವರನ್ನು ಇಟ್ಟುಕೊಂಡು ತಮ್ಮ ಕೆಣಕಲು ಬಂದವರಿಗೆ ಹನುಮಂತ ಖಡಕ್ ಉತ್ತರ ನೀಡಿದ್ದಾರೆ. ಅಲ್ಲಿ ಆಗಿದ್ದೇನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ಈ ವೇದಿಕೆ ಮೇಲೆ ನಿವೇದಿತಾ ಗೌಡ ಅವರು ಹೆಚ್ಚು ಚರ್ಚೆ ಆದರು. ಅವರ ಎರಡರಿಂದ ಮೂರು ಇಂಚಿನ ಉಗುರು ಸಾಕಷ್ಟು ಗಮನ ಸೆಳೆಯಿತು. ಇದರ ಗುಣಗಾನ ಮಾಡಲಾಯಿತು.ನಿರೂಪಕಿ ಅನುಪಮಾ ಗೌಡ ಅವರು ನಿವೇದಿತಾ ಗೌಡ ಅವರ ಉಗುರನ್ನು ಹೊಗಳಿದರು. ಇದರಿಂದ ಖುಷಿ ಆದ ನಿವೇದಿತಾ, ‘ನಾನು ಇದೇ ಉಗುರಲ್ಲಿ ಹಣ್ಣನ್ನು ಕಟ್ ಮಾಡುತ್ತೇನೆ, ಮುದ್ದೆಯನ್ನು ಕಟ್ ಮಾಡಿ ತಿನ್ನುತ್ತೇನೆ’ ಎಂದೆಲ್ಲ ಹೇಳಿದರು. ಅಲ್ಲದೆ, ಇದು ಸಂಪೂರ್ಣ ನ್ಯಾಚುರಲ್ ಉಗುರು ಎಂದು ಹೇಳಿದರು. ಇದನ್ನು ಕೇಳಿ ಹನುಮಂತ ಶಾಕ್ ಆದರು.
ಅನುಪಮಾ ಉಗುರಿನ ವಿಚಾರ ಕೇಳಿ ಹನುಮಂತ ಶಾಕ್ ಆಗಿದ್ದಾರೆ. ಅವರನ್ನು ಮಾತನಾಡಿಸೋಣ’ ಎಂದು ಅನುಪಮಾ ಹೇಳಿದರು. ‘ಏನನ್ನಿಸುತ್ತಿದೆ ಹನುಮಂತು ಅವರೇ’ ಎಂದು ಅನುಪಮಾ ಕೇಳಿದರು. ‘ಅದು ಉಗುರಷ್ಟೇ. ನಾನು ಬಿಟ್ಟರೂ ಬರುತ್ತದೆ. ಕೆರೆದುಕೊಳ್ಳೋಕೆ ಒಂದೇ ಒಂದು ಉಗುರು ಬಿಟ್ಟುಕೊಂಡಿದ್ದೇನೆ’ ಎಂದರು.
ಈ ಮೂಲಕ ಎಲ್ಲರ ಬಾಯಿಯನ್ನು ಮುಚ್ಚಿಸಿದರು. ನೀನು ಗಂಡಸಾಗಿದ್ರೆ ಎಲ್ಲಾ ಬೆರಳಿಗೂ ಬಿಡು ಅಂತೆಲ್ಲಾ ಕೆಣ್ಕಿದ್ದಾರೆ ನಿವೇದಿತಾ ಗೌಡ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.