ದುನಿಯಾ ವಿಜಿ ಕುಟುಂಬದಲ್ಲಿ ಸಂತಸ, ಚಿಕ್ಕ ಮಗಳು ಕೊಟ್ಲು ಶುಭ ಸುದ್ದಿ
Sep 11, 2024, 16:20 IST
|
ಇತ್ತೀಚಿಗಷ್ಟೇ ಭೀಮ ಚಿತ್ರದ ಹಿಟ್ ಖುಷಿಯಲ್ಲಿರುವ ದುನಿಯಾ ವಿಜಯ್ ತಮ್ಮ ಮಗಳನ್ನು ಕೂಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.ಸ್ಯಾಂಡಲ್‌ವುಡ್‌ನಲ್ಲಿ ಬರೋ ಹೊಸಬರು ಹೆಸರು ಬದಲಿಸುತ್ತಾರೆ. ಸ್ಟಾರ್ ನಟ-ನಟಿಯರ ಮಕ್ಕಳು ಈ ವಿಚಾರದಲ್ಲಿ ಹೊರತಾಗಿಲ್ಲ. ದುನಿಯಾ ವಿಜಯ್ ಮಗಳು ಮೋನಿಕಾ ಇದೀಗ ತಮ್ಮ ಹೆಸರು ಬದಲಿಸಿಕೊಂಡು ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ.
ಹೆಸರು ಬದಲಿಸಿಕೊಂಡಿರೋ ಹಿಂದಿನ ಸೀಕ್ರೆಟ್ ಕೂಡ ಹೇಳಿಕೊಂಡಿದ್ದಾರೆ. ಅಪ್ಪನ ಜೊತೆಗೆ ಮೊದಲ ಸಿನಿಮಾದಲ್ಲಿ ನಟಿಸ್ತಿರೋ ಖುಷಿಯ ಜೊತೆಗೆ ಹೊಸ ಹೆಸರಿನ ಸಂತೋಷದಲ್ಲೂ ಇದ್ದಾರೆ. ಮುಂಬೈನ ಅನುಪಮ್ ಖೇರ್ ಅಭಿನಯ ಶಾಲೆಯಲ್ಲಿ ಅಭಿನಯ ಕಲೆಯನ್ನ ತಿಳಿದುಕೊಂಡು ಬಂದಿದ್ದಾರೆ. ಅಲ್ಲಿ ಕಲಿತಿರೋದನ್ನ ಇದೀಗ ಅಭ್ಯಾಸ ಮಾಡಲು ಅಪ್ಪನ ಸಿನಿಮಾ ವೇದಿಕೆ ಆಗಿದೆ.
ಕಾಟೇರ ಚಿತ್ರದ ಕಥೆಗಾರ ಜಡೇಶ್ ಕುಮಾರ್ ಹಂಪಿ ಇವರಿಗೆಂದೇ ಹೊಸ ಚಿತ್ರವನ್ನು ಡೈರೆಕ್ಟ್ ಮಾಡುತ್ತಿದ್ದಾರೆ.ಅಪ್ಪನ ಜೊತೆಗೆ ಇಂಡಸ್ಟ್ರಿಗೆ ಬಂದಿರೋದು ದೊಡ್ಮಗಳು ಮೋನಿಕಾನೇ ನೋಡಿ. ಆದರೆ ಕೆಲವ್ರಿಗೆ ಇದು ಕನ್ಫೂಸನ್ ಕ್ರಿಯೇಟ್ ಮಾಡಲೇ ಬಾರದು ಅಂತಲೇ ಮೋನಿಕಾ ಒಂದು ಐಡಿಯಾ ಮಾಡಿದ್ದಾರೆ. ಬಣ್ಣದ ಲೋಕಕ್ಕೆ ಬರೋ ಮೊದಲೇ ತಮ್ಮ ಹೆಸರನ್ನ ಬದಲಿಸಿಕೊಂಡಿದ್ದಾರೆ.ರಿತನ್ಯ ವಿಜಯ ಕುಮಾರ್ ಅಂತಲೇ ಬದಲಿಸಿಕೊಂಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.