ಮೊಟ್ಟಮೊದಲ ಬಾರಿಗೆ ಬೊಂಬೆಯಂತ ಮಗುವಿನ ಮುಖ ತೋರಿಸಿದ ಹರಿಪ್ರಿಯಾ ಹಾಗೂ ವಸಿಷ್ಠ

 | 
Jk
ಸ್ಯಾಂಡಲ್‌ವುಡ್‌ನ ತಾರಾ ಜೋಡಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಖುಷಿಯಲ್ಲಿ ಮಗುವಿನೊಂದಿಗೆ ಆಟವಾಡುತ್ತಾ ಸಮಯ ಕಳೆಯುತ್ತಿದ್ದಾರೆ. ಇವರ ಖುಷಿಗೆ ಕಾರಣವೂ ಇದೆ. ಹೌದು, ಮದುವೆ ಆದ ದಿನವೇ ಈ ಜೋಡಿಯ ಫ್ಯಾಮಿಲಿಗೆ ಹೊಸ ಸದಸ್ಯನ ಆಗಮನ ಆಗಿದೆ. ಈ ಒಂದು ಖುಷಿಯನ್ನ ವಸಿಷ್ಠ ಸಿಂಹ ಹಂಚಿಕೊಂಡಿದ್ದಾರೆ. ಶೂಟಿಂಗ್ ಇಲ್ಲದ ಸಮಯದಲ್ಲಿ ಇವರಿಬ್ಬರೂ ಮಗುವಿನೊಂದಿಗೆ ಕಾಲ ಕಳೆಯುತ್ತಾರೆ.
ಕನ್ನಡದ ನಟಿ ಹರಿಪ್ರಿಯಾ ಗಂಡು ಮಗುವಿಗೆ ಜನ್ಮ ನೀಡಿ ಮೂರು ವಾರಗಳೇ ಕಳೆದಿವೆ. ಮಗು ಮತ್ತು ತಾಯಿ ಆರೋಗ್ಯವಾಗಿಯೇ ಇದ್ದಾರೆ. ಅದೇ ಖುಷಿಯಲ್ಲಿಯೇ ವಸಿಷ್ಠ ಸಿಂಹ ಈ ಸಂತೋಷವನ್ನ ಹಂಚಿಕೊಂಡಿದ್ದರು. ಈಗಲೂ ಸಹ ಮಗುವಿನ ಮುಖ ರಿವೇಲ್ ಮಾಡಿ ಸಂತೋಷ ಪಟ್ಟಿದ್ದಾರೆ. ಕೈಕಾಲು ಬಡಿಯುತ್ತಾ ಮಗು ಆಡೋದನ್ನು ನೋಡೋದೆ ಚಂದ ಎಂದು ನಟಿ ಹರಿಪ್ರಿಯಾ ಹೇಳಿಕೊಂಡಿದ್ದಾರೆ.
ಇವರ ಬದುಕೇ ವಿಶೇಷ ಹೌದು, ತುಂಬಾನೆ ವಿಶೇಷ ವಿಚಾರವೇ ನೋಡಿ. ಎರಡು ವರ್ಷದ ಹಿಂದೆ ವಸಿಷ್ಠ ಮತ್ತು ಹರಿಪ್ರಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಜನವರಿ 26, 2023 ರಂದು ಮದುವೆ ಆಗಿದ್ದರು. ಮೈಸೂರಿನಲ್ಲಿಯೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು.ಇವರ ಈ ಒಂದು ಮದುವೆ ಆಗಿ ಈಗ ಎರಡು ವರ್ಷಗಳೇ ಕಳೆದಿವೆ. ಈ ಎರಡು ವರ್ಷದ ಬಳಿಕ ಮದುವೆ ಆದ ದಿನವೇ ಈ ಜೋಡಿಗೆ ಮಗ ಹುಟ್ಟಿದ್ದಾನೆ. 
ಆ ಒಂದು ಖುಷಿಯನ್ನ ವಸಿಷ್ಠ ಸಿಂಹ ವಿಷೇಶ ರೀತಿಯಲ್ಲಿ ಹಂಚಿಕೊಂಡಿದ್ದಾರೆ ಅಂತಲೇ ಹೇಳಬಹುದು.ವಸಿಷ್ಠ ಸಿಂಹ ತಮ್ಮ ಫ್ಯಾಮಿಲಿಯನ್ನ ಲಯನ್ ಕಿಂಗ್ ಫ್ಯಾಮಿಲಿಗೆ ಹೋಲಿಸಿದ್ದಾರೆ. ಕಾರಣ ಇವರ ಹೆಸರಿನೊಂದಿಗೆ ಸಿಂಹ ಅನ್ನೋದು ಇದ್ದೇ ಇದೆ. ಹಾಗೆ ಮಗ ಹುಟ್ಟಿದ ಈ ಒಂದು ಖುಷಿಯನ್ನ ಒಂದು ಲಯನ್ ಫ್ಯಾಮಿಲಿಯ ಫೋಟೋ ಜೊತೆಗೆ ಹಂಚಿಕೊಂಡಿದ್ದಾರೆ. 
ತಮ್ಮ ಸೋಷಿಯಲ್ ಮೀಡಿಯಾ ಪೇಜ್ ಅಲ್ಲೂ ಈ ಒಂದು ಖುಷಿಯ ವಿಚಾರವನ್ನ ಹೀಗೆ ವಿಶೇಷವಾಗಿಯೇ ಬರೆದುಕೊಂಡಿದ್ದಾರೆ ಅಂತಲೇ ಹೇಳಬಹುದಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.