ಕೈಯಲ್ಲಿ ಅವಕಾಶವಿಲ್ಲದೆ‌ ಸೀರಿಯಲ್ ನಟನೆಗೆ ಕಾಲಿಟ್ಟ ಹರಿಪ್ರಿಯಾ; ಗಂಡ ಅಸಮಾಧಾನ

 | 
Uuu

ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿ ಮನಗೆದ್ದ ಚಲುವೆ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ.ಈಗಾಗಲೇ ಕಿರುತೆರೆಯಲ್ಲಿ ಹೊಸ, ಹೊಸ ಬಗೆಯ ವಿಭಿನ್ನ ಕಥೆಗಳುಳ್ಳ ಧಾರಾವಾಹಿ ರೂಪ ಪಡೆದುಕೊಂಡಿವೆ. ವೀಕ್ಷಕರು ಕೂಡ ಇಷ್ಟಪಟ್ಟು ಸೀರಿಯಲ್​ಗಳನ್ನ ನೋಡುತ್ತಿದ್ದಾರೆ.

 ನಿಜ ಹೇಳುವುದಾದ್ರೆ ಸಿನಿಮಾಗಳಿಗಿಂತ ಹೆಚ್ಚು ಕಲಾವಿದರು ವೀಕ್ಷಕರಿಗೆ ಹತ್ತಿರ ಆಗೋದು ಸೀರಿಯಲ್​ ಮೂಲಕವೇ. ಬೇಗ ಜನಕ್ಕೆ ಕನೆಕ್ಟ್​ ಆಗೋ ಅದ್ಭುತವಾದ ಪ್ಲಾಟ್​ ಫಾರ್ಮ್​ ಧಾರಾವಾಹಿ. ಚಂದನವನದ ಬ್ಯೂಟಿ ಹರಿಪ್ರಿಯಾ ಸೀರಿಯಲ್​ಗೆ ಎಂಟ್ರಿ ಕೊಡುತ್ತಿದ್ದಾರೆ.

ಸಾಮಾನ್ಯವಾಗಿ ಕಲಾವಿದರು ಸೀರಿಯಲ್​​ನಿಂದ ಸಿನಿಮಾಗೆ ಎಂಟ್ರಿ ಕೊಟ್ಟಿದ್ದನ್ನು ಎಲ್ಲರೂ ನೋಡಿರುತ್ತಾರೆ. ಆದರೆ ಬೆಳ್ಳಿತೆರೆಯಿಂದ ಕಿರುತೆರೆ ಲೋಕಕ್ಕೆ ಬರುವುದು ಅಚ್ಚರಿಯ ವಿಚಾರ. ಅದರಲ್ಲೂ ಸ್ಟಾರ್​ ನಟ ನಟಿಯರೇ ಸೀರಿಯಲ್​ ಲೋಕಕ್ಕೆ ಎಂಟ್ರಿ ಕೊಟ್ಟರೆ ಹೇಗಿರುತ್ತೆ. 

ಇದೀಗ ಸ್ಯಾಂಡಲ್​ವುಡ್​​ ಖ್ಯಾತ ನಟಿ ಹರಿಪ್ರಿಯಾ ಸೀರಿಯಲ್​ಗೆ ಬರ್ತಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ. ಹೌದು, ಕಲಾವಿದರಿಗೆ ಯಾವ ಮಾಧ್ಯಮ ಆದ್ರೇ ಏನೂ ಉತ್ತಮ ಪಾತ್ರ ಸಿಕ್ಕಿದ್ದರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ ಅನ್ಸುತ್ತೆ. ಸದ್ಯ ಅಂತಹದ್ದೇ ಒಂದು ಪವರ್​ಫುಲ್​ ಪಾತ್ರವನ್ನ ನಿಭಾಯಿಸಲಿದ್ದಾರೆ ನಟಿ ಹರಿಪ್ರಿಯಾ.

ಅಷ್ಟಕ್ಕೂ ಅಹನಾ ಅಗ್ನಿಹೋತ್ರಿ ಎಂಬ ಹೊಸ ಸೀರಿಯಲ್​ಗೆ ನಾಯಕಿ ಆಗಿ ಬಣ್ಣ ಹಚ್ಚಿದ್ದಾರೆ. ಖಡಕ್​ ಡೈಲಾಗ್​, ಖದರ್​ ಆಗಿರೋ ಲಾಯರ್​ ಪಾತ್ರ ಅಹನಾ. ಡಿಫ್ರೆಂಟ್​ ಸ್ಟೋರಿ ಲೈನ್​ ಇದ್ದು, ಅಹನಾ ಪಾತ್ರದ ಮೂಲಕ ಹರಿಪ್ರಿಯಾ ಸೀರಿಯಲ್​ಗೆ ಪಾದಾರ್ಪಣೆ ಮಾಡಿದ್ದಾರೆ. 

ಇನ್ನು, ಈ ಧಾರಾವಾಹಿ ಸ್ಟಾರ್​ ಜಲ್ಸಾ ವಾಹಿನಿಯ ಬೆಂಗಾಲಿ ಭಾಷೆಯ ರಿಮೇಕ್​ ಕಥೆ ಆಗಿದ್ದು, ಗೀತಾ ಎಲ್​ಎಲ್​ಬಿ ಎಂಬ ಟೈಟಲ್​ನೊಂದಿಗೆ ಯಶಸ್ವಿಯಾಗಿ ಬೆಂಗಾಲಿ ಪ್ರೇಕ್ಷಕರನ್ನ ರಂಜಿಸುತ್ತಿದೆ. ಅದೇ ಕಥೆಯನ್ನ ಕನ್ನಡದಲ್ಲಿ ಅಹನಾ ಅಗ್ನಿಹೋತ್ರಿ ಎಂಬ ಹೆಸರಿನಲ್ಲಿ ಮೂಡಿ ಬರಲಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.