ಮುದ್ದಾದ ಮಗುವಿಗೆ ತಾಯಿಯಾದ ಹರ್ಷಿಕಾ ಪೂಣಚ್ಚ
Sep 10, 2024, 17:03 IST
|

ಕನ್ನಡ ಚಿತ್ರರಂಗದ ಕ್ಯೂಟ್ ಜೋಡಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆಯಾಗಿ ವರ್ಷದೊಳಗೆ ಗುಡ್ ನ್ಯೂಸ್ ನೀಡಿರುವ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ದಂಪತಿ ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟು ಕುಟುಂಬಸ್ಥರ ಜೊತೆ ಕೊಡಗಿನ ಶೈಲಿಯಲ್ಲಿ ವಿಡಿಯೋ ಮಾಡಿ ಈ ಖುಷಿಯ ವಿಚಾರವನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.
ಈ ಬಗ್ಗೆ ಸ್ವತಃ ನಟಿ ಹರ್ಷಿಕಾ ಪೂಣಚ್ಚ ಮಾತನಾಡಿದ್ದು, ಕೊಡವ ಸಂಪ್ರದಾಯದಲ್ಲಿ ರಿವೀಲ್ ಮಾಡಿದ ಬಗ್ಗೆ ನನ್ನ ಗಂಡನಿಗೆ ಕ್ರೆಡಿಟ್ ಕೊಡಬೇಕು. ನಾವು ಈ ರೀತಿ ರಿವೀಲ್ ಮಾಡಿದಾಗ ಡಿಫರೆಂಟ್ ಆಗಿ ಮಾಡಬೇಕು. ಸಾಮಾನ್ಯವಾಗಿ ಬೇಡ ಎಂದು ಭುವನ್ ಅವರಿಗೆ ಸ್ಪಷ್ಟವಾಗಿತ್ತು. ಹೀಗಾಗಿ ಅವರು ಹಾಗೂ ನಾವು ನಮ್ಮ ಕೊಡವ ಸಮುದಾಯದ ಹಿರಿಯರು ಹೇಗಿದ್ದರು ಎನ್ನುವುದನ್ನು ರಿಸರ್ಚ್ ಮಾಡಿದೆವು.
ಅವಾಗ ನಮಗೆ ಕೋವಿ ಹಿಡಿದುಕೊಂಡು, ದೊಡ್ಡ ಮೀಸೆ ಇರುವಂತವರ ಫೋಟೋಗಳು ಒಂದಿಷ್ಟು ಸಿಕ್ಕವು. ಆಮೇಲೆ ಭುವನ್ ಅವರು ನಮ್ಮ ಸಂಪ್ರದಾಯವು ಎಷ್ಟು ಚೆನ್ನಾಗಿದೆ. ಕೊಡವ ಸಂಸ್ಕೃತಿಯಲ್ಲೇ ಎಷ್ಟು ಚೆನ್ನಾಗಿ ಹಿಂದಿನಿಂದ ಬಂದಿದ್ದಾರೆ. ಈಗ ನಾವೆಲ್ಲಾ ಸೀರೆಗೆ ಬ್ರೋಚ್ ಹಾಕುತ್ತೇವೆ. ಅವಾಗೆಲ್ಲಾ ಗಂಟು ಕಟ್ಟುತ್ತಿದ್ದರು.
ಇದೆನೆಲ್ಲಾ ನೋಡಿದ ಮೇಲೆ ಇದನ್ನೇ ರಿಕ್ರೀಯೆಟ್ ಮಾಡೋಣ ಚೆನ್ನಾಗಿರುತ್ತದೆ ಅಂತಾ ಹೀಗೆ ರಿವೀಲ್ ಮಾಡಿದೆವು.ಆದರೆ ನಾವು ಈ ಮಟ್ಟದ ಪ್ರೀತಿ ಸಿಗುತ್ತದೆ ಎಂದುಕೊಂಡಿರಲಿಲ್ಲ. ಎಲ್ಲರೂ ಕರೆ ಮಾಡಿ ವಿಶ್ ಮಾಡಿದ್ದಾರೆ. ಮೆಸೇಜ್ ಮಾಡಿ ವಿಶ್ ಮಾಡಿದ್ದಾರೆ. ತುಂಬಾ ಖುಷಿಯಾಗಿದೆ ಎಂದರು. ಇತ್ತೀಚಿಗಷ್ಟೇ ರಾಜಮಾತೆಯಂತೆ ಕೂಡ ಫೋಟೊ ಶೂಟ್ ನಡೆಸಿದ್ದರು. ಇವರ ಮುಖದ ಕಾಂತಿ ನೋಡಿ ಅಭಿಮಾನಿಗಳು ಹೆಣ್ಣು ಮಗುವಾಗೋದು ಗ್ಯಾರಂಟಿ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.