ಹರ್ಷಿಕಾ ಪೂಣಚ್ಚ ತುಂಬು ಗರ್ಭಿಣಿ; ಕನ್ನಡಿಗರಿಗೆ ‌ಸಿಗುತ್ತಾ ಅವಳಿ ಜವಳಿ ಭಾಗ್ಯ

 | 
Yu

ಸ್ಯಾಂಡಲ್‌ವುಡ್‌ ನಟಿ ಹರ್ಷಿಕಾ ಪೂಣಚ್ಚ ಮತ್ತು 'ಬಿಗ್ ಬಾಸ್‌' ಖ್ಯಾತಿಯ ಭುವನ್ ಪೊನ್ನಣ್ಣ ಅವರು ಕಳೆದ ವರ್ಷ ಕೊಡಗಿನಲ್ಲಿ ಅದ್ದೂರಿಯಾಗಿ ಮದುವೆ ಆಗಿದ್ದರು. ಇದೀಗ ಈ ದಂಪತಿ ಒಂದು ಶುಭ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ಅದೇನೆಂದರೆ, ಹರ್ಷಿಕಾ ಶೀಘ್ರದಲ್ಲೇ ತಾಯಿ ಆಗಲಿದ್ದಾರೆ. ಈ ವಿಚಾರವನ್ನು ಹಂಚಿಕೊಳ್ಳಲಿಕ್ಕಾಗಿಯೇ ಒಂದು ವಿಶೇಷ ಫೋಟೋಶೂಟ್ ಮಾಡಿಸಿದ್ದಾರೆ ಈ ದಂಪತಿ.

ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಅವರು ಕಳೆದ ವರ್ಷ 'ಬಿಗ್ ಬಾಸ್' ಖ್ಯಾತಿಯ ಭುವನ್ ಪೊನ್ನಣ್ಣ ಅವರ ಜೊತೆಗೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದರು. ಇದೀಗ ಮದುವೆಯಾಗಿ ವರ್ಷ ತುಂಬುವುದರೊಳಗೆ ಒಂದು ಸಿಹಿ ಸುದ್ದಿಯನ್ನು ಈ ದಂಪತಿ ಹಂಚಿಕೊಂಡಿದ್ದಾರೆ. ಹೌದು, ಹರ್ಷಿಕಾ ಪೂಣಚ್ಚ ಶೀಘ್ರದಲ್ಲೇ ಪುಟಾಣಿ ಕಂದಮ್ಮನಿಗೆ ತಾಯಿ ಆಗಲಿದ್ದಾರೆ.

ಈವರೆಗೂ ನಮ್ಮಿಬ್ಬರಿಗೆ ಸದಾ ಆಶೀರ್ವಾದಿಸುತ್ತಾ ಬಂದಿದ್ದೀರಿ, ಇನ್ನು ಮುಂದೆ ನಿಮ್ಮ ಪ್ರೀತಿ ,ಆಶೀರ್ವಾದ ನಮ್ಮ ಈ ಇನ್ನೊಂದು ಪುಟ್ಟ ಜೀವದ ಮೇಲೂ ಇರಲಿ. ಅಕ್ಟೋಬರ್‌ಗೆ ಕಾತುರದಿಂದ ಕಾಯುತ್ತಿದ್ದೇವೆ ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹರ್ಷಿಕಾ ಮತ್ತು ಭುವನ್ ಪ್ರತಿಕ್ರಿಯೆ ನೀಡಿದ್ದಾರೆ.

ಕೊಡವ ಸಂಪ್ರದಾಯದಂತೆ ಮದುವೆ ಆಗಿದ್ದ ಹರ್ಷಿಕಾ ಮತ್ತು ಭುವನ್ ದಂಪತಿ, ಇದೀಗ ತಮ್ಮ ಕುಟುಂಬಕ್ಕೆ ಹೊಸ ಮೆಂಬರ್ ಎಂಟ್ರಿ ಆಗುತ್ತಿರುವ ವಿಷಯವನ್ನು ಕೂಡ ಕೊಡವ ಶೈಲಿಯಲ್ಲಿಯೇ ಹೇಳಿಕೊಂಡಿದೆ. ಕೊಡವ ಶೈಲಿಯ ಉಡುಪನ್ನು ಧರಿಸಿ, ವಿಶೇಷ ಫೋಟೋಶೂಟ್ ಮಾಡಲಾಗಿದೆ. 

ಕೊಡವ ಶೈಲಿ ಹಾಗೂ ಕೊಡವ ಸಂಪ್ರದಾಯವನ್ನ ಬಿಟ್ಟು ಕೊಡಬಾರದು ಎಂಬ ಕಾರಣಕ್ಕೆ ಅದೇ ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿ, ಈ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ ಹರ್ಷಿಕಾ ಪೂಣಚ್ಚ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.