ಪ್ರಜ್ವಲ್ ವಿಡಿಯೋ ನೋಡಿ ತುಂಬಾ ಆಯ್ತು ಎಂದ ಹರ್ಷಿಕಾ ಪೂಣಚ್ಚ; ಬೆಚ್ಚಿಬಿ ದ್ದ ಕರುನಾಡು

 | 
Ju

ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣ ಅವರ ಪೆನ್​ಡ್ರೈವ್ ಪ್ರಕರಣ ಸುದ್ದಿಯಾಗುತ್ತಿರುವಾಗ ಸ್ಯಾಂಡಲ್​ವುಡ್ ನಟಿ ಹರ್ಷಿಕಾ ಪೂಣಚ್ಚ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಮುರುಳಿ ಮೀಟ್ಸ್ ಮೀರಾ ದ ಚಲುವೆ ಈ ಕುರಿತಾಗಿ ಧ್ವನಿ ಎತ್ತಿದ್ದಾರೆ. ದುರದೃಷ್ಟವಶಾತ್ 2976 ವಿಡಿಯೋಗಳಲ್ಲಿ ಒಂದು ವಿಡಿಯೋವನ್ನು ನಾನಿಂದು ನೋಡಿದೆ. ಇದನ್ನು ನೋಡುವುದೇ ನೋವಿನ ಸಂಗತಿ.

ವಿಡಿಯೋ ನಿಜವಾಗಿದ್ದರೆ ಅದನ್ನು ಮಾಡಿದವರಿಗೆ ಕಾನೂನು ಕ್ರಮ ಜರುಗಿಸಬೇಕು ಎಂದು ನಟಿ ಮೇ 4ರಂದು ಟ್ವೀಟ್ ಮಾಡಿದ್ದಾರೆ.ನಟಿ ಟ್ವೀಟ್ ಮಾಡಿರುವ ಟ್ವಿಟರ್ ಖಾತೆ ವೇರುಫೈಡ್ ಅಲ್ಲ, ಆದರೆ ಹರ್ಷಿಕಾ ಪೂಣಚ್ಚ ಎಂದೇ ಈ ಟ್ವಿಟರ್ ಖಾತೆ ಇದೆ. ರಾತ್ರಿ ಸುಮಾರು 8:32ರ ಹೊತ್ತಿಗೆ ಈ ಟ್ವೀಟ್ ಮಾಡಲಾಗಿದೆ. ಅಂತೂ ಹರ್ಷಿಕಾ ಅವರೂ ಈ ಒಂದು ಘಟನೆ ಬಗ್ಗೆ ಧ್ವನಿ ಎತ್ತಿದ್ದಾರೆ.

ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿ ಈ ಒಂದು ಪೆನ್​ಡ್ರೈವ್ ಕುರಿತ ಚರ್ಚೆ ಜೋರಾಗಿದೆ. ಈ ಪ್ರಕರಣದ ತನಿಖೆಗೆ ಈಗಾಗಲೇ ಎಸ್​​ಐಟಿ ಟೀಮ್ ರಚಿಸಲಾಗಿದ್ದು ವಿಚಾರಣೆ ಕೂಡಾ ಶುರುವಾಗಿದೆ. ಲೋಕಸಮರದ ಬಿಸಿಯ ಮಧ್ಯೆ ಈ ರೀತಿ ಅಶ್ಲೀಲ ವಿಡಿಯೋಗಳು ಲೀಕ್ ಆಗಿದ್ದು ಮತ್ತಷ್ಟು ಮಹತ್ವ ಪಡೆದಿದೆ.

ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಅಭಿನಯಿಸಿರುವ ಪೂನಂ ಕೌರ್ ಪ್ರಜ್ವಲ್ ರೇವಣ್ಣ ವಿರುದ್ಧ ಸಿಡಿದೆದ್ದಿದ್ದಾರೆ. ಇಂತಹ ದುಷ್ಟರಿಗೆ ಮತ ಹಾಕಿದ್ರೆ ದೇಶದಲ್ಲಿ ಹೆಣ್ಣು ಮಗುವಿಗೆ ರಕ್ಷಣೆ ಎಲ್ಲಿರುತ್ತೆ? ನ್ಯಾಯ ಸಿಗುವುದಿಲ್ಲ ಎಂದು ನಟಿ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.