ನಿಮ್ಮ ಮನೆಗೆ ಬಂದಿದೆಯಾ ರಾಮ ಮಂತ್ರಾಕ್ಷತೆ, ಇದರ ಶಕ್ತಿ ತಿಳಿದರೆ ಮೈ ರೋಮಾಂಚನವಾಗುತ್ತದೆ

 | 
N

ಮದುವೆ, ಮನೆ ಗೃಹಪ್ರವಶ ಮುಂತಾದ ಕಾರ್ಯಕ್ರಮಗಳಿಗೆ ಮಂತ್ರಾಕ್ಷತೆ ನೀಡುವುದು ವಾಡಿಕೆ.ರಾಮಮಂದಿರ ಉದ್ಘಾಟನೆಗೆ ಕೆಲವೇ ಕೆಲವು ದಿನಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಅಯೋಧ್ಯೆಯಿಂದ ಮಂತ್ರಾಕ್ಷತೆ ಪ್ರತಿ ಊರಿಗೂ ತಲುಪುತ್ತಿದೆ. ಈ ಮಂತ್ರಾಕ್ಷತೆಯು ಪ್ರತೀ ಮನೆಗೂ ತಲುಪಿಸುವ ಜವಾಬ್ದಾರಿಯನ್ನು ಸ್ವಯಂ ಸೇವಕರು ವಹಿಸಿಕೊಂಡಿದ್ದಾರೆ. ಅಂತೆಯೇ ಹಲವೆಡೆ ಮಂತ್ರಾಕ್ಷತೆಯನ್ನು ತಲುಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ. 

ಹಾಗಿದ್ರೆ ಮಂತ್ರಾಕ್ಷತೆ ಅಂದ್ರೆ ಏನು? ಅದರ ಮಹತ್ವ ಏನು? ಮಂತ್ರಾಕ್ಷತೆ ಸ್ವೀಕರಿಸಿದ ಬಳಿಕ ಏನು ಮಾಡಬೇಕು ಎಂಬುದರ ಬಗ್ಗೆ ತಿಳಿಯೋಣ. ಹಿಂದೂ ಧರ್ಮದಲ್ಲಿ ಅಕ್ಕಿ ಅಥವಾ ಅಕ್ಷತೆಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ನಾವು ಯಾವುದೇ ದೇವರ ಸನ್ನಿಧಾನಕ್ಕೆ ಭೇಟಿ ನೀಡಿದರೂ ಅಲ್ಲಿ ಮಂತ್ರಾಕ್ಷತೆಯನ್ನು ಪ್ರಸಾದದ ರೂಪದಲ್ಲಿ ಹಾಗೂ ದೇವರ ಆಶೀರ್ವಾದದ ರೂಪದಲ್ಲಿ ನೀಡಲಾಗುತ್ತದೆ. ಎಲ್ಲಾ ಶುಭಕಾರ್ಯಗಳಿಗೂ ಅಕ್ಷತೆಯನ್ನು ಬಳಕೆ ಮಾಡುತ್ತಾರೆ. 

ಈ ಸಂದರ್ಭದಲ್ಲಿ ಬಳಸುವ ಅಕ್ಷತೆಯಲ್ಲಿ ಲಕ್ಷಾಂತರ ಜನರ ಆಶೀರ್ವಾದ, ಪ್ರಾರ್ಥನೆ ಇರುತ್ತದೆ. ವೇದಗಳಲ್ಲಿ ಉಲ್ಲೇಖವಾಗುವ ಅಕ್ಷತೆಯನ್ನೇ ಇಲ್ಲೂ ಬಳಸಲಾಗಿದೆ. ಆದರೆ ರಾಮನ ಹೆಸರಿನೊಂದಿಗೆ ಅಕ್ಕಿಯನ್ನು ಪ್ರತಿ ಮನೆ ಮನೆಗೂ ತಲುಪಿಸುತ್ತಿರುವುದಕ್ಕೆ ರಾಮಮಂತ್ರಾಕ್ಷತೆ ಎಂದು ಕರೆಯಲಾಗುತ್ತದೆ. ಅಯೋಧ್ಯೆ ರಾಮ ಮಂದಿರದಿಂದ ಆಗಮಿಸಿರುವ ರಾಮ ಮಂತ್ರಾಕ್ಷತೆ ಪ್ರತೀ ಹಿಂದೂಗಳ ಮನೆಗೆ ತಲುಪಿ, ರಾಮನಲ್ಲಿದ್ದಂತಹ 16 ಸಾತ್ವಿಕ ಗುಣಗಳು ಪ್ರತೀ ಹಿಂದೂವಿನಲ್ಲಿ ಬರುವಂತಾಗಲಿ ಅನ್ನೋ ಆಶಯವೂ ಇದೆ. 

ಜೊತೆಗೆ ರಾಮ ಮಂತ್ರಾಕ್ಷತೆಯು ಸುಖ, ನೆಮ್ಮದಿ ಹಾಗೂ ಅಭಿವೃದ್ಧಿಯ ಸಂಕೇತವೂ ಆಗಿದೆ. ಇದಕ್ಕೂ ಶುಭ ಕಾರ್ಯಕ್ರಮದಲ್ಲಿ ಬಳಸುವ ಅಕ್ಷತೆಗೂ ವ್ಯತ್ಯಾಸವಿದೆ. ಕಾರ್ಯಕರ್ತರು ಮನೆಮನೆಗೆ ತೆರಳಿ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ವಿತರಿಸುವ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಯ ಜೊತೆಗೆ ರಾಮ ಮಂದಿರದ ಭಾವಚಿತ್ರ ಇರಬೇಕು. ಶುಭ್ರ ವಸ್ತ್ರ ಧರಿಸಬೇಕು. ಮನೆಯ ಹೊರಗಡೆ ನಿಂತು ಮಂತ್ರಾಕ್ಷತೆ ನೀಡಬಾರದು. 

ರಾಮನ ಜಪ ಮಾಡುತ್ತಾ ಮನೆ ಒಳಗಡೆ ಹೋಗಿ ಮಂತ್ರಾಕ್ಷತೆಯ ಮಹತ್ವದ ಬಗ್ಗೆ ಮನೆ ಮಂದಿಗೆ ತಿಳಿಸಿಕೊಡಬೇಕು. ಜೊತೆಗೆ ಮಂತ್ರಾಕ್ಷತೆ ಸ್ವೀಕರಿಸುವ ಮನೆಯವರು ಕೂಡ ಸ್ನಾನ ಮಾಡಿ, ಶುಭ್ರವಾದ ಬಟ್ಟೆ ಧರಿಸಿ ಭಕ್ತಿಯಿಂದ ತೆಗೆದುಕೊಳ್ಳಬೇಕು. ಅಯೋಧ್ಯೆಯ ಮಂತ್ರಾಕ್ಷತೆ ಈಗಾಗಲೇ ಹಲವು ಮನೆಗಳಿಗೆ ತಲುಪಿದ್ದು, ಇನ್ನೂ ಕೆಲವೆಡೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಮಂತ್ರಾಕ್ಷತೆ ಸಿಕ್ಕಿದ ಕೂಡಲೇ ಅದನ್ನು ಉಪಯೋಗಿಸುವಂತಿಲ್ಲ. ಬದಲಾಗಿ ಜನವರಿ 22 ರವರೆಗೆ ತಮ್ಮ ತಮ್ಮ ಮನೆಯ ದೇವರ ಕೋಣೆಯಲ್ಲಿ ಇಡಬೇಕು. 

ನಾವು ಪ್ರತಿನಿತ್ಯ ದೇವರಿಗೆ ಪೂಜೆ ಮಾಡುವಾಗ ಮಂತ್ರಾಕ್ಷತೆಗೂ ಪೂಜೆ ಸಲ್ಲಿಸಬೇಕು. ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮನ ಪ್ರಾಣ ಪ್ರತಿಷ್ಠಾಪನೆಯ ಬಳಿಕ ಮಂತ್ರಾಕ್ಷತೆಗೆ ದಿವ್ಯ ಶಕ್ತಿ ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಇದೆ. ಆ ನಂತರ ಮಂತ್ರಾಕ್ಷತೆಯನ್ನು ಬಳಸಬೇಕು. ಹೇಗೆಲ್ಲಾ ಮಂತ್ರಾಕ್ಷತೆಯನ್ನು ಬಳಸಬಹುದು ಅಂದರೆ ಊಟದ ಅಕ್ಕಿ ಜೊತೆ ಸೇರಿಸಿ, ಬೇಯಿಸಿ ಅನ್ನ ಮಾಡಿ ಸೇವಿಸಬಹುದು. ಮನೆಯಲ್ಲಿ ಪಾಯಸ ಮಾಡಿ ಅದರ ಜೊತೆಯೂ ಸೇವಿಸಬಹುದು. ದೇವರ ಕೋಣೆಯಲ್ಲಿಯೂ ಇಟ್ಟುಕೊಳ್ಳಬಹುದು. ಮನೆಯ ಮುಂದಿನ ಬಾಗಿಲಿನ ಮೇಲೆ ಬಿಳಿ ಬಟ್ಟೆಯಲ್ಲಿ ಕಟ್ಟಿ ಇಟ್ಟುಕೊಳ್ಳಬಹುದು. 

ಮಂತ್ರಾಕ್ಷತೆಯನ್ನು ಬಿಳಿ ಬಟ್ಟೆಯಲ್ಲಿ ಕಟ್ಟಿ ಹಣ, ಚಿನ್ನ ಇಡುವ ಕಪಾಟು ಅಥವಾ ಗೋಡ್ರೇಜ್‍ನಲ್ಲಿಯೂ ಇಟ್ಟುಕೊಳ್ಳಬಹುದು. ಮನೆಯವರೆಲ್ಲಾ ಹಂಚಿಕೊಂಡು ಶ್ರದ್ಧೆಯಿಂದ ತಲೆಗೆ ಹಾಕಿಕೊಳ್ಳಬಹುದು. ಇನ್ನು ಮಂತ್ರಾಕ್ಷತೆಯ ಜೊತೆಗೆ ರಾಮಮಂದಿರದ ಒಂದು ಫೋಟೋ ಹಾಗೂ ಅದರ ಹಿನ್ನೆಲೆ ಇರುವ ಕರಪತ್ರವೊಂದು ಸಿಗುತ್ತದೆ. ಇದನ್ನು ಕೂಡ ಶ್ರದ್ಧೆಯಿಂದ ಇಟ್ಟುಕೊಳ್ಳಬೇಕೆಂದು ಮನವಿ ಮಾಡಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.