ಆತ ಬಂದು ನನ್ನ ಮೈಮೇಲೆ ಮಲಗಿದ; ಆ ಕ್ಷಣ ಏನೂ ಮಾಡಲಾಗದೆ ನಾನು ಸುಮ್ಮನಿದ್ದೆ ಎಂದ ನ ಟಿ

 | 
Hh

ಕಳೆದ ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾದ ಮಂಗಳವಾರ ಚಿತ್ರದಲ್ಲಿ ಊರ ಜಮೀನ್ದಾರನ ಹೆಂಡತಿ ಪಾತ್ರವನ್ನು ಸಿನಿಮಾ ನೋಡಿದವರ್ಯಾರು ಮರೆತಿರಲಿಕ್ಕಿಲ್ಲ ಅಷ್ಟು ಅಮೋಘವಾಗಿ ಅಭಿನಯಿಸಿ ಎಲ್ಲರ ಮನ ಗೆದ್ದ ಚಲುವೆ ದಿವ್ಯಾ ಪಿಳ್ಳೈ.ದಿವ್ಯಾ ಪಿಳ್ಳೈ ಮಲಯಾಳಂ ಚಿತ್ರನಟಿ. ಮಲಯಾಳಂ ಹೊರತುಪಡಿಸಿ ತೆಲಗು  ಚಿತ್ರಗಳಲ್ಲಿಯೂ ನಟಿ ಕಾಣಿಸಿಕೊಂಡಿದ್ದಾರೆ. 

ಜೊತೆಗೆ  ಟಿವಿ ಕಾರ್ಯಕ್ರಮಗಳಲ್ಲಿಯೂ ಇವರು ಕಾಣಿಸಿಕೊಳ್ಳುತ್ತಾರೆ.  1985 ರಂದು  ಕೇರಳದಲ್ಲಿ ಜನಿಸಿದ ನಟಿ  ಅಯಾಲ್ ನಜನಲ್, ಊಝಂ  ಮಾಸ್ಟರ್ ಪೀಸ್ , ಮೈಗ್ರೇಟ್ ಗ್ರ್ಯಾಂಡ್ ಫಾದರ್ , ಮಂಗಳವಾರಂ, ಕಾಲಾ ಮತ್ತು ಸೈಮನ್ ಡೇನಿಯಲ್ ಸೇರಿದಂತೆ 26 ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮಾತ್ರವಲ್ಲದೇ ಅವರು ದಿ ವಿಲೇಜ್ ಮತ್ತು ಮಾಸ್ಟರ್‌ಪೀಸ್ ಎಂಬ ಟಿವಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 

ಮಂಗಳವಾರಂ ಚಿತ್ರದಿಂದ ಇವರು  ತೆಲುಗು ವೀಕ್ಷಕರಿಗೆ ಬಹಳ ಹತ್ತಿರವಾಗಿದ್ದಾರೆ. ಈ ಕುರಿತು ಮಾತನಾಡಿದ್ದ ನಟಿ,  ಚಿತ್ರದ ಭಾಗವಾಗಿರುವುದಕ್ಕೆ ನನಗೆ ಖುಷಿಯಾಗಿದೆ. ಪ್ರೇಕ್ಷಕರು ನನ್ನ ಅಭಿನಯವನ್ನು ಮೆಚ್ಚಿ ನನ್ನನ್ನು ಸ್ವಾಗತಿಸಿದರು ಎಂದಿದ್ದರು.ಅಂದಹಾಗೆ ದಿವ್ಯಾ ಪಿಳ್ಳೈ ಅವರು ಮಾಜಿ ಗಗನಸಖಿ ಕೂಡ. ಅವರು ಬಹಳ ಗಮನ ಸೆಳೆದದ್ದು ತೆಲಗುವಿನ  ಮಂಗಳವಾರಂ ಚಿತ್ರಕ್ಕಾಗಿ.

 ಅಲ್ಲಿ ಅವರ ಬಲವಾದ ಪಾತ್ರಕ್ಕಾಗಿ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದರು. ಇದೀಗ ನಟಿ ಚಲನಚಿತ್ರಗಳಲ್ಲಿನ ಲಿಪ್​ಲಾಕ್​ ಸೇರಿದಂತೆ ಕೆಲವು ಇಂಟಿಮೇಟ್​ ದೃಶ್ಯಗಳ ಕುರಿತು ಮಾತನಾಡಿದ್ದಾರೆ. ಯೂಟ್ಯೂಬ್​ ವಾಹಿನಿಯೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ನಟಿ ಲಿಪ್​ಲಾಕ್​ ಸೀನ್​ ಮತ್ತು ಇಂಥ ದೃಶ್ಯಗಳನ್ನು ಎಂಜಾಯ್​ ಮಾಡುವುದರ ಕುರಿತು ಮಾತನಾಡಿ ಹಲ್​ಚಲ್​ ಸೃಷ್ಟಿಸಿದ್ದಾರೆ. 

ಶೂಟಿಂಗ್​ ಸೆಟ್​ನಲ್ಲಿ ರೊಮ್ಯಾನ್ಸ್​, ಲಿಪ್​ಲಾಕ್​ ದೃಶ್ಯಗಳು ಮಾಡುವುದು ತುಂಬಾ ಸುಲಭವಲ್ಲ. ಏಕೆಂದರೆ ಅಲ್ಲಿ ಹಲವರು ನಮ್ಮ ಸುತ್ತಮುತ್ತ ಇರುತ್ತಾರೆ. ಅದಕ್ಕಾಗಿ ಹಲವು ಸಂದರ್ಭಗಳಲ್ಲಿ ಮುಜುಗರವೂ ಆಗುತ್ತದೆ. ಅಷ್ಟೇ ಅಲ್ಲದೇ, ಸುಮಾರು  75-80 ಕೆ.ಜಿ ತೂಕದ ವ್ಯಕ್ತಿ ನಮ್ಮ ಮೇಲೆ ಮಲಗಿದ ಸಂದರ್ಭದಲ್ಲಿ ಕ್ಯಾಮೆರಾ ಎದುರು ರೊಮ್ಯಾಂಟಿಕ್​ ಸೀನ್​ ಮಾಡು ಎಂದರೆ ಅದನ್ನು ಊಹಿಸಿಕೊಳ್ಳುವುದೇ ಕಷ್ಟ. ಇಂಥ ದೃಶ್ಯಗಳೆಲ್ಲಾ ಕ್ಯಾಮೆರಾ ಮುಂದೆ ತುಂಬಾ ಕಷ್ಟ ಎಂದಿದ್ದಾರೆ.  ಇಂಥ ಸಂದರ್ಭಗಳಲ್ಲಿ ಲಿಪ್​ಲಾಕ್​ ಮಾಡುತ್ತಿದ್ದರೂ ಖುಷಿಯಾಗಲ್ಲ, ಅದು ಎಂಜಾಯ್​ಮೆಂಟ್​ ಕೊಡಲ್ಲ ಎಂದಿದ್ದಾರೆ.