ಎಷ್ಟು ಆಗುತ್ತೋ ಅಷ್ಟು ಮ ಜಾ ಮಾಡಿ ಈಗ ನೀನು ದಪ್ಪ ಚೆನ್ನಾಗಿಲ್ಲ ಅಂತ ನಾಟಕ ಮಾಡ್ತಾನೆ; ಸಂತ್ರಸ್ತೆಯ ಮಾತು
Jun 10, 2025, 13:19 IST
|

ನಿಮಗೆಲ್ಲಾ ಗೊತ್ತಿರುವ ಹಾಗೆ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಶನಿವಾರ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಪರಪ್ಪನ ಅಗ್ರಹಾರ ಜೈಲು ಸೇರಿ ನ್ಯಾಯಾಂಗ ಬಂಧನದಲ್ಲಿದ್ದ ಮನು ಇಂದು ರಿಲೀಸ್ ಆದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ನಾನ್ಯಾವ ತಪ್ಪನ್ನೂ ಮಾಡಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಮಡೆನೂರು ಮನು ವಿರುದ್ಧ ಅತ್ಯಾಚಾರ ಮತ್ತು ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ದೂರುದಾರ ಮಹಿಳೆಯು, ಮನು ಅವರು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ. ನಂತರ ಮದುವೆಗೆ ನಿರಾಕರಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.ದೂರಿನ ಪ್ರಕಾರ, ಮಡೆನೂರು ಮನು ಮತ್ತು ದೂರುದಾರ ಮಹಿಳೆ ಪರಸ್ಪರ ಪರಿಚಿತರಾಗಿದ್ದರು. ಮನು ಅವರು ಮಹಿಳೆಗೆ ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಇಬ್ಬರು ಕೂಡ ಕಾಮಿಡಿ ಕಿಲಾಡಿಗಳು ಶೋನಲ್ಲಿ ಒಟ್ಟಿಗೆ ಭಾಗವಹಿಸಿದ್ದರು.
ಕಾಮಿಡಿ ಕಿಲಾಡಿಗಳು ಶೋನಲ್ಲಿ ಇಬ್ಬರು ಒಟ್ಟಿಗೆ ಸ್ಕಿಟ್ ಕೂಡ ಮಾಡಿದ್ದರು. ಇನ್ನೂ ಆ ಯುವತಿ ತನ್ನ ಐಡೆಂಟಿಟಿಯನ್ನು ಬಹಿರಂಗ ಪಡಿಸಿಲ್ಲ. ನಾಳೆ ಮಡೆನೂರು ಮನು ಅಭಿನಯಿಸಿರೋ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ರಿಲೀಸ್ ಆಗಲಿದೆ. ಈಗಾಗಲೇ ಟ್ರೈಲರ್‌ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಸಿನಿಮಾ ಮೇಲೆ ನಿರೀಕ್ಷೆ ಇದೆ. ಇಂಥ ಸಮಯದಲ್ಲಿ ಇಂಥ ಕೇಸ್ ಮನು ಮೇಲೆ ದಾಖಲಾಗಿ. ಜೈಲು ಸೇರಿ ಇದೀಗ ಜಾಮೀನಿನ ಮೇಲೆ ಬಿಡುಗಡೆ ಹೊಂದಿ ಹೊರಗೆ ಬಂದಿದ್ದಾರೆ.
ಮದುವೆ, ಮಕ್ಕಳು ಆಗಿರುವ ನಟ ಮಡೆನೂರು ಮನು ಈಗ ಅತ್ಯಾಚಾರ ಪ್ರಕರಣದ ಆರೋಪಿ. ಸ್ನೇಹಿತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಅವರ ಮೇಲಿದೆ. ಇನ್ನು, ಸಂತ್ರಸ್ತ ಮಹಿಳೆ ವಿರುದ್ಧ ಕೂಡ ಕೆಲವರು ಟೀಕೆ ಮಾಡಿದ್ದಾರೆ. ಅವುಗಳಿಗೆ ಆಕೆ ಉತ್ತರ ನೀಡಿದ್ದಾರೆ. ‘ಹೆಂಡ್ತಿ, ಮಗು ಇರುವವನ ಹಿಂದೆ ನೀನೇಕೆ ಹೋದೆ ಎಂದು ಕೆಲವರು ಕೇಳುತ್ತಾರೆ. ನಾನು ಅವನ ಹಿಂದೆ ಹೋಗಿಲ್ಲ. ಮೊದಲ ಬಾರಿ ಅವನು ಮಾಡಿದ್ದು ಅತ್ಯಾಚಾರ. ಅದನ್ನು ಮುಚ್ಚಿ ಹಾಕಲು ತಾಳಿಕಟ್ಟಿದ. ಇನ್ನೂ ಕೆಲವನ್ನು ನಾನು ಹೇಳಿಕೊಳ್ಳೋಕೆ ಆಗಲ್ಲ. ಅದನ್ನು ನಾನು ನ್ಯಾಯಾಲಯದ ಮುಂದೆ ಹೇಳುತ್ತೇನೆ’ ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.