'ಆತ ನಮ್ರತಾ ಹಿಂದೆ ಬಿದ್ದಿದ್ದಾನೆ; ನಾನು ಮದುವೆ ಆಗಲ್ಲ ಎಂದ ಸಂಗೀತಾ

 | 
Us
ನಟಿ ಸಂಗೀತಾ ಶೃಂಗೇರಿ ಸಿನಿಮಾಗಳಿಗಿಂತ ಹೆಚ್ಚಾಗಿ ಬಿಗ್‌ ಬಾಸ್‌ ಶೋನಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು. ಚಾರ್ಲಿ ಸಿನಿಮಾದ ಮೂಲಕ ಮಿಂಚಿದ್ದ ಈ ಚೆಲುವೆ ಸದ್ಯ ಮಾರಿಗೋಲ್ಡ್‌ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್‌ ಬಾಸ್‌ ಶೋನಲ್ಲಿ ಭಾಗವಹಿಸಿ ಟಾಪ್‌ 3 ಕಂಟೆಸ್ಟಂಟ್‌ ಆಗಿದ್ದರು.ಆ ದೊಡ್ಮನೆಯಲ್ಲಿ ಸಿಂಹಿಣಿ ಅಂತಾನೇ ಫೇಮ್‌ ಪಡೆದುಕೊಂಡು ಎಷ್ಟೋ ಹೆಣ್ಣು ಮಕ್ಕಳಿಗೆ ಮಾದರಿಯಾಗಿ ನಿಂತಿದ್ದರು.
ಬಿಗ್‌ ಬಾಸ್‌ ಮನೆಯಲ್ಲಿ ವಿನ್ನರ್‌ ಕಾರ್ತಿಕ್‌ ಹಾಗೂ ಸಂಗೀತಾ ಆರಂಭದಲ್ಲಿ ಒಳ್ಳೆಯ ಸ್ನೇಹಿತರಾಗಿದ್ದರು. ಇವರಿಬ್ಬರೂ ಮನೆಯಿಂದ ಹೊರಬರುವಷ್ಟರಲ್ಲಿ ಜೋಡಿಗಳಾಗಿರುತ್ತಾರೆ ಎಂದು ಅಭಿಮಾನಿಗಳು ಊಹಿಸಿದ್ದರು.ಆದರೆ ಆಗಿದ್ದೆ ಬೇರೆ. ಇಬ್ಬರ ಮದ್ಯ ಮನಸ್ಥಾಪಗಳು ಹೆಚ್ಚಾಗಿ ಮಾತೇ ಬಿಟ್ಟಿದ್ದರು. ಹಾವು ಮುಂಗುಸಿ ಎನ್ನುವಂತೆ ಕಚ್ಚಾಡಿಕೊಂಡಿದ್ದರು. ಹೊರಗೆ ಬಂದಮೇಲೆ ಜಸ್ಟ್ ಫ್ರೆಂಡ್ಸ್ ಅಂದಿದ್ದರು.
ಇನ್ನು ಇತ್ತೀಚೆಗೆ ನಟಿ ಸಂಗೀತಾ ಮಾರಿ ಗೋಲ್ಡ್‌ ಚಿತ್ರದ ಪ್ರಮೋಷನ್‌ಗೆ ಹೋದಾಗ ತಮ್ಮ ಬಾಯ್‌ಫ್ರೆಂಡ್‌ ಯಾರು ಎಂದು ಹೇಳಿಕೊಂಡಿದ್ದಾರೆ. ಆ ವಿಡಿಯೋ ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.ಹೌದು ನಟಿ ಸಂಗೀತಾ ಶೃಂಗೇರಿ ವೇದಿಕೆ ಮೇಲೆ ತಮ್ಮೊಂದಿಗೆ ಪೋಟೋ ತೆಗೆಸಿಕೊಳ್ಳಲು ಬಂದಿದ್ದ ಪುಟ್ಟ ಬಾಲಕನ್ನು ತೋರಿಸಿ ನೀವು ನಾನು ಯಾರನ್ನ ಮದುವೆ ಆಗ್ತೀನಿ ಕೇಳುತ್ತಾ ಇದ್ರಿ ಕಾರ್ತೀಕ್ ನ ಅಂತೂ ಈಗ ನೋಡಿ ಇವರನ್ನೇ ನಾನು ಮದುವೆ ಆಗೋದು ಎಂದು ಹೇಳಿ ಕಾಮಿಡಿ ಮಾಡಿದ್ದಾರೆ.
ಇನ್ನು ಸಂಗೀತಾ ಶೃಂಗೇರಿ ಅವರ ಖ್ಯಾತಿ ಸಾಕಷ್ಟು ಹೆಚ್ಚಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಎರಡನೇ ರನ್ನರ್​ ಅಪ್ ಆದರು ಅವರು. ಸಂಗೀತಾ ಅಭಿಮಾನಿ ಬಳಗ ದೊಡ್ಡದಾಗಿದೆ. ಇನ್​​ಸ್ಟಾಗ್ರಾಮ್​ನಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಅವರ ಮದುವೆ ಯಾವಾಗ ಎನ್ನುವ ಪ್ರಶ್ನೆ ಅನೇಕರಲ್ಲಿ ಇದೆ. ಕಾರ್ತೀಕ್ ನನ್ನು ಮದುವೆ ಆಗದಿರುವ ಕುರಿತು ಬೇಸರವೂ ಇದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.