ಪಿಜಿಯಲ್ಲಿ ನುಂಗಿ‌ ನೀರು ಕುಡಿದು ಬಿಟ್ಟ, ಕೃಷಿ ತಾಪಂಡ ಜೀವನದ ದು#ರಂತ ಕಥೆ

 | 
Guu
ಕನ್ನಡದ ಕೆಲ ಸಿನಿಮಾಗಳು, ಬಿಗ್‌ ಬಾಸ್‌ ಶೋನಲ್ಲಿ ಭಾಗವಹಿಸಿದ್ದ ಕೃಷಿ ತಾಪಂಡ ಅವರು ಮೈಸೂರಿನಲ್ಲಿ ಹೊಸ ಮನೆಯ ಪ್ರವೇಶ ಮಾಡಿದ್ದಾರೆ. ತಂದೆ-ತಾಯಿ, ಸಹೋದರನ ಜೊತೆ ಅವರು ಹೊಸ ಮನೆಯ ಪೂಜೆಯಲ್ಲಿ ಭಾಗಿಯಾಗಿದ್ದಾರೆ.ಕೃಷಿ ತಾಪಂಡ ಅವರಿಗೆ ನಟಿ ಅನುಪಮಾ ಗೌಡ, ಮಾನ್ವಿತಾ ಕಾಮತ್‌ ಅವರು ಶುಭ ಹಾರೈಸಿದ್ದಾರೆ.
 ಸೋಶಿಯಲ್‌ ಮೀಡಿಯಾದಲ್ಲಿ ಗೃಹ ಪ್ರವೇಶದ ಫೋಟೋಗಳನ್ನು ಕೃಷಿ ಹಂಚಿಕೊಂಡಿದ್ದು, ಹೊಸ ಮನೆ, ಹೊಸ ಆರಂಭ ಎಂಬ ಬರಹ ಬರೆದುಕೊಂಡಿದ್ದಾರೆ.ತಮಿಳಿನ Nae ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅವರು ಅಕಿರ ಎನ್ನುವ ಕನ್ನಡ ಚಿತ್ರದಲ್ಲಿ ನಟಿಸಿದರು. ಆನಂತರ ಕಹಿ, ಎರಡು ಕನಸು, ಇರ, ಕನ್ನಡಕ್ಕಾಗಿ ಒಂದನ್ನು ಒತ್ತಿ, ಭರಾಟೆ, ಲಂಕೆ, ಬ್ಲ್ಯಾಂಕ್‌, ರೂಪಾಯಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಿನಿಮಾ ನಟಿಸಬೇಕು ಎಂದರೆ ಮನೆಯಲ್ಲಿ ಬೈಗುಳ ಹಾಗಾಗಿ ಹೇಳದೆ ಕೇಳದೆ ಬೆಂಗಳೂರು ಬಂದಾಗ ನನಗೆ ತುಂಬಾ ಕಷ್ಟದ ಸಮಯ. ಕಾಲೇಜಿಗೆ ಹೋಗುತ್ತಿದ್ದೆ. ಜೊತೆಗೆ ಕೆಲಸ ಕೂಡ ಹುಡುಕುತ್ತಿದ್ದೆ. ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿ ಇದ್ದೆ. ಫ್ಯಾಮಿಲಿಯಿಂದ ದೂರ ಉಳಿದಿದ್ದೆ ಎಂದು ತಮ್ಮ ಕಷ್ಟದ ದಿನಗಳನ್ನು ಕೃಷಿ ಬಹಿರಂಗ ಪಡಿಸಿದ್ದಾರೆ.
ಅಷ್ಟೇ ಅಲ್ಲದೆ ''ಆ ಟೈಮ್ ನಲ್ಲಿ ನಾನು ಪಿ.ಜಿ (ಪೇಯಿಂಗ್ ಗೆಸ್ಟ್) ಯಲ್ಲಿದ್ದೆ. ಪಿ.ಜಿಗೆ ಬಾಡಿಗೆ ಕಟ್ಟಲು ನನ್ನ ಬಳಿ ಹಣ ಇರಲಿಲ್ಲ. ಆಗ ಬೇರೆ ದಾರಿ ಇಲ್ಲದೆ ಪಿ.ಜಿ ಓನರ್ ಮನೆಯಲ್ಲಿ ಕೆಲಸ ಮಾಡುತ್ತಿದ್ದೆ. ಪಾತ್ರೆ ತೊಳೆಯುವುದರಿಂದ ಹಿಡಿದು ಮನೆಗೆಲಸದವಳಾಗಿ ಎಲ್ಲ ಕೆಲಸ ಮಾಡುತ್ತಿದ್ದರಿಂದ ಅವರು ನನ್ನ ಬಳಿ ಬಾಡಿಗೆ ತೆಗೆದುಕೊಳ್ಳುತ್ತಿರಲಿಲ್ಲ. ಇದರಿಂದ ನನಗೆ ಹಣದ ಚಿಂತೆ ಕಡಿಮೆ ಆಗಿತ್ತು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.