ಜೀವದ ಗೆಳೆಯರಂತಿದ್ದ ದಚ್ಚು ಕಿಚ್ಚ ದೂರ ದೂರವಾಗಲು ಕಾರಣ ಇವರೇ
Sep 27, 2024, 19:35 IST
|
ಒಂದು ಕಾಲದಲ್ಲಿ
ದಾಸ ದರ್ಶನ್ ಮತ್ತು ಕಿಚ್ಚ ಸುದೀಪ್ ಗೆಳೆತನಕ್ಕೆ ಸಾಟಿನೇ ಇರಲಿಲ್ಲ. ಈ ಗೆಳೆಯರನ್ನ ಕುಚಿಕು ಗೆಳೆಯರು ಅಂತಾನೂ ಕರೆಯುತ್ತಿದ್ದರು. ಇನ್ನು ಇವರ ಸ್ನೇಹದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಯಾವುದೇ ಕಾರ್ಯಕ್ರಮಗಳಿರಲಿ, ಕ್ರಿಕೆಟ್ ಇರಲಿ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು.ಆದರೆ, ಅದ್ಯಾರ ಕಣ್ಣು ಬಿತ್ತೋ ಏನೋ? ಜೊತೆಯಾಗಿದ್ದವರ ಸ್ನೇಹ ಬಿರುಕು ಬಿಟ್ಟು ಹಲವು ವರ್ಷಗಳೇ ಕಳೆದಿವೆ.
ಇದಕ್ಕೆ ಕಾರಣ ಏನು ಅನ್ನೋದು ಹೆಚ್ಚಿನವರಿಗೆ ಗೊತ್ತೊರಲಿಲ್ಲ. ಸಂಗೊಳ್ಳಿ ರಾಯಣ್ಣ ಸಿನಿಮಾ ಆದ್ಮೇಲೆ ಇವರ ದೋಸ್ತಿ ಮುಗಿದೆ ಹೋಯಿತು. ಅಂದಿನಿಂದ ಇಂದಿನವರೆಗೂ ಇಬ್ಬರ ನಡುವೆ ಮಾತುಕತೆಯೇ ಇರಲಿಲ್ಲ.ಆದರೆ ಇತ್ತೀಚೆಗೆ ನಡೆದ ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಕಿಚ್ಚ ಸುದೀಪ್ ಅವರು ದರ್ಶನ್ ಜೊತೆಗಿನ ಮನಸ್ತಾಪದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ದರ್ಶನ್ ಮತ್ತು ಸುದೀಪ್ ಅವರ ಆತ್ಮೀಯತೆ ಬಗ್ಗೆ ಕೇಳಿದಾಗ, ಆ ವೇಳೆ ‘ಹೌದು, ಚೆನ್ನಾಗಿಯೇ ಇದ್ದೆವು.
ಒಬ್ಬ ಫ್ರೆಂಡ್ ಅಂದಾಗ ಎಲ್ಲವೂ ನಿಶ್ಕಳಂಕವಾಗಿರಬೇಕಾಗುತ್ತದೆ. ನಾನು ದೊಡ್ಡವನು, ನೀನು ದೊಡ್ಡವನು ಅನ್ನೋ ಮಾತು ಬರಲ್ಲ.ನಮ್ಮ ಸ್ನೇಹಿತರು ಮಾಡೋ ತಪ್ಪಿಗೆ ನಾವು ತಲೆ ಬಾಗಬೇಕಾಗುತ್ತದೆ. ಸಾಕಷ್ಟು ಮಾಡಿದ್ದೇವೆ. ಅನಾವಶ್ಯಕವಾಗಿ ಏನೆನೋ ನಡೆದಾಗ, ದೂರ ಇರೋದೇ ಬೆಟರ್ ಅನಿಸುತ್ತೆ. ನಾನು ಒಳ್ಳೆಯದನ್ನೇ ಮಾಡಿದ್ದೇನೋ ಹೊರತು, ಬೇರೇನು ಮಾತಾಡಿಲ್ಲ. ಈವರೆಗೂ ನಾನು ಯಾವುದೇ ಇಂಟರ್ವ್ಯೂನಲ್ಲಿ ಕೂತು ಕೆಟ್ಟದಾಗಿ ಮಾತನಾಡಿರೋದನ್ನು ನೀವು ಕೇಳಿರಲಿಕ್ಕಿಲ್ಲ. ನನಗೂ ನೋವಿದೆ ಎಂದು ಹೇಳಿದ್ದಾರೆ.
ಹಾಗಂತ ನನಗೆ ನೋವುಗಳು ಇಲ್ಲ ಅನ್ಕೋಬೇಡಿ. ಎಲ್ಲವೂ ಒಳ್ಳೆಯದೇ ನಡೆಯುತ್ತಿದ್ರೆ ದೂರ ಯಾಕಾಗ್ತೀವಿ ನಾವು? ಯಾರದೋ ಭುಜದ ಮೇಲೆ ಗನ್ ಇಟ್ಟು ಫೈರ್ ಮಾಡೋ ವ್ಯಕ್ತಿ ನಾನಲ್ಲ. ಅಂಥ ಆಪಾದನೆಗಳೂ ಸಹ ನನ್ನ ಮೇಲೆ ಬಂತು. ಏನೇನೋ ಹೇಳಿದ್ದಾರೆ. ಆದರೆ, ನಾನು ಎಲ್ಲೂ ಯಾವುದೇ ಸ್ಟೇಟ್‌ಮೆಂಟ್ ಮಾಡಲಿಲ್ಲ. ಫ್ರೆಂಡ್ಶಿಪ್ ಅಂದಾಗ ಕೆಲವೊಂದನ್ನ ಮೈಂಟೇನ್ ಮಾಡಬೇಕಾಗುತ್ತದೆ ಎಂದಿದ್ದಾರೆ. ಇನ್ನು ಇನ್ನು ಫ್ರೆಂಡ್ಶಿಪ್ ಬಗ್ಗೆ ಮಾತನಾಡಿದ ಕಿಚ್ಚ, ಯಾರಿಗೂ ನಾವು ಕೊಡೋ ಸ್ಥಾನನಾ ನಾವು ಯಾವತ್ತೂ ಕಿತ್ಕೊಳಲ್ಲ. ಕಿತ್ರೆ ನಾವು ನಾವಾಗಿರಲ್ಲ. ಹಾಗಂತ ಎಕ್ಸ್ಪೆಕ್ಟ್ ಮಾಡಲ್ಲ ನಾವು. ನಾನೇನು ಬಯಸಿಲ್ಲ, ಅದಕ್ಕೆ ಅದರಿಂದ ಮೂವ್ ಆನ್ ಆದೆ ಎಂದು ಹೇಳಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.