ಮೈಯೆಲ್ಲಾ ಸೌಂದರ್ಯ ಇರೋ ನನ್ನ ಹಿಂದೆ ಆತ ಬಂದೇ ಬರ್ತಾನೆ, ಪವಿತ್ರ ಗೌಡ ಚಾಲೆಂಜ್

 | 
ರಕ
ದೇಶ ವಿದೇಶಗಳ ಗಮನ ಸೆಳೆದಿದ್ದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿ ಮಾಡಿಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ರಿಲೀಫ್ ಸಿಕ್ಕ ಬೆನ್ನಲ್ಲೇ ಪವಿತ್ರಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇದೀಗ ಕಾಣದ ಕೈಗಳಿಂದ ಸಾವಿರಾರು ಕುತಂತ್ರಗಳು ನಡೆದರೇನಂತೆ ನಟಿ ಬರೆದುಕೊಂಡಿರುವ ಪೋಸ್ಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕಾಣದ ಕೈಗಳಿಂದ ಸಾವಿರಾರು ಕುತಂತ್ರಗಳು ನಡೆದರೇನಂತೆ ಮೇಲೊಬ್ಬ ಎಲ್ಲವನ್ನು ನೋಡುತ್ತಿರುವನು. ನಿಮ್ಮ ಕಣ್ಣೀರಿನ ಎಲ್ಲಾ ಹನಿಗಳಿಗೆ ನ್ಯಾಯ ನೀಡುವ ಕೋಟ್ ಅನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಪೋಸ್ಟ್ ಮಾಡಿದ್ದಾರೆ. ಯಾರಿಗೆ ನಟಿ ಟಾಂಗ್ ಕೊಟ್ಟಿದ್ದಾರೆ ಎಂದೆಲ್ಲಾ ಪವಿತ್ರಾ ಪರ ವಿರೋಧದ ಚರ್ಚೆ ನಡೆಯುತ್ತಿದೆ.
https://youtube.com/shorts/lr-dz9hE3YI?si=BEfT5QgVKWB5uLFh
ರೇಣುಕಾಸ್ವಾಮಿ ಕೊಲೆ ಕೇಸ್‌ ಹಾಗೂ ಇತ್ತೀಚಿನ ಬೆಳವಣಿಗೆಗಳಿಗೆ ಈ ಪೋಸ್ಟ್‌ ಪೂರಕವಾಗಿದ್ದು, ಯಾರಿಗೋ ಕೌಂಟರ್‌ ನೀಡುವಂತಿದೆ. ಇನ್ನು ಪವಿತ್ರಾಗೌಡ ಅವರ ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಪವಿತ್ರಾ ಅವರು ಯಾವ ಕಾಣದ ಕೈಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಲೆಕೆಡಿಸಿಕೊಂಡಿದ್ದಾರೆ. ಜೈಲಿನಿಂದ ಹೊರಬಂದ ಮೇಲೆ ಫುಲ್‌ ಟೆಂಪಲ್‌ ರನ್‌ ಮಾಡಿ ಸೈಲೆಂಟ್‌ ಆಗಿದ್ದ ಪವಿತ್ರಾ ಗೌಡ ಅವರು ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಮತ್ತೆ ಸದ್ದು ಮಾಡುತ್ತಿದ್ದಾರೆ.
ಪವಿತ್ರಾ ಗೌಡ ಅವರು ಯಾರನ್ನು ಉಲ್ಲೇಖಿಸಿ ಈ ಸಂದೇಶ ರವಾನಿಸಿದ್ದಾರೆ? ಅವರ ಪ್ರಕಾರ ಕಾಣದ ಕೈಗಳು ಯಾರಿರಬಹುದು? ಅವರ ಮೇಲೆ ಏನು ಕುತಂತ್ರಗಳು ನಡೆದಿವೆ? ಅವರಿಗೆ ಕಣ್ಣೀರು ತರಿಸಿದ ವಿಚಾರವೇನು? ಎನ್ನುವ ಹಲವು ಪ್ರಶ್ನೆಗಳು ಮುಂದೆ ಬಂದಿವೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಅರ್ಜಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿರುವ ಸಂದರ್ಭದಲ್ಲೇ ಪವಿತ್ರಾ ಗೌಡ ಅವರ ಪೋಸ್ಟ್‌ ಪರಿಸ್ಥಿತಿಯನ್ನು ಹೋಲುತ್ತಿದೆ ಎಂದು ಹೇಳುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.