ಜೈ ಲಿನಲ್ಲಿ ಡಿ ಸ್ಟಾರ್ ‌ಜೊತೆ ಪವಿತ್ರ ಮಾತಿಕತೆ? ಇಬ್ಬರ ನಡುವೆ ಏನಾಗುತ್ತಿ ದೆ

 | 
He

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಜೈಲು ಸೇರಿದ್ದಾರೆ. ಇಬ್ಬರನ್ನೂ ನೋಡಲು ನಿತ್ಯ ಒಬ್ಬರಲ್ಲ ಅಲ್ಲ ಒಬ್ಬರು ಬರ್ತಾನೆ ಇದ್ದಾರೆ. ನಟಿ ಪವಿತ್ರಾ ನೋಡಲು ಅವರ ತಾಯಿ ಆಗಮಿಸಿದ್ರು. ತಾಯಿ ಬಳಿ ದರ್ಶನ್​ ಬಗ್ಗೆ ಮಾತಾಡುತ್ತಾ ನಟಿ ಪವಿತ್ರಾ ಗೌಡ ಕಣ್ಣೀರು ಹಾಕಿದ್ದಾರೆ ಎನ್ನಲಾಗ್ತಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ A1 ಆರೋಪಿ ಆಗಿದ್ದಾರೆ. ಪವಿತ್ರಾ ಗೌಡ ಅವರನ್ನು ನೋಡಲು ಅವರ ತಾಯಿ ಇಂದು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ರು. ಬೆಳ್ಳಂ ಬೆಳಗ್ಗೆ ಪವಿತ್ರಾ ಗೌಡ ತಾಯಿ ತನ್ನ ತಂಗಿ ಮಗನ ಜೊತೆ ಜೈಲಿಗೆ ಆಗಮಿಸಿದ್ರು. ಪವಿತ್ರಾ ಗೌಡ ತಮ್ಮ ಮಾಧ್ಯಮಗಳ ಕ್ಯಾಮೆರಾಗೆ ಕೈ ತೋರಿಸಿ ನಿಮಗೆ ಮಾಡಲು ಕೆಲಸ ಇಲ್ವಾ ಎಂದು ಹೇಳಿ ಟ್ರೋಲ್ ಆಗಿದ್ರು. ಹೀಗಾಗಿ ಮಗ ವಿಡಿಯೋ ಟ್ರೋಲ್ ಆಗುವುದನ್ನು ತಪ್ಪಿಸಲು ಪವಿತ್ರಾ ತಾಯಿ, ತನ್ನ ತಂಗಿ ಮಗನನ್ನು ಕರೆದುಕೊಂಡು ಬಂದಿದ್ರು ಎನ್ನಲಾಗ್ತಿದೆ.

ತಾಯಿ ಬಳಿ ಪವಿತ್ರಾ ಗೌಡ ಕೆಲ ಗಂಟೆಗಳ ಕಾಲ ಮಾತಾಡಿದ್ದಾರೆ. ಇದೇ ವೇಳೆ ತಾಯಿ ಬಳಿ ಕಷ್ಟ ಹೇಳಿಕೊಂಡು ಪವಿತ್ರಾ ಗೌಡ ಕಣ್ಣೀರು ಹಾಕಿದ್ದಾರೆ ಎನ್ನಲಾಗ್ತಿದೆ. ನಟ ದರ್ಶನ್ ಕೂಡ ಪವಿತ್ರಾ ಜೊತೆ ಮಾತಾಡಿಲ್ವಂತೆ. ಇದೇ ನೋವಲ್ಲಿ ಪವಿತ್ರಾ ಕೂಡ ಇದ್ದಾರೆ ಎನ್ನಲಾಗ್ತಿದೆ. ನಟ ದರ್ಶನ್ ಅಂತರ ಕಾಯ್ದುಕೊಳ್ಳುತ್ತಿರುವ ಬಗ್ಗೆ ತಾಯಿ ಬಳಿ ಹೇಳಿಕೊಂಡು ಪವಿತ್ರಾ ಗೌಡ ಕಣ್ಣೀರು ಹಾಕಿದ್ದಾರೆ ಎನ್ನಲಾಗ್ತಿದೆ. ನಾನು ಏನು ಮಾಡಿದ್ದೇನು? ಯಾವ ತಪ್ಪು ಮಾಡಿದೆ ಎಂದು ನನಗೆ ಈ ಶಿಕ್ಷೆ ರೇಣುಕಾಸ್ವಾಮಿ ಕೆಟ್ಟದಾಗಿ ಮ್ಯಾಸೇಜ್ ಮಾಡಿದ್ದನ್ನು ನಾನು ತಿಳಿಸಿದ್ದು ನನ್ನ ತಪ್ಪಯ್ತಾ? ಎಂದು ಪವಿತ್ರಾ ಗೌಡ ಕಣ್ಣೀರು ಹಾಕಿದ್ದಾರಂತೆ.

ನನ್ನಿಂದಲೇ ತಪ್ಪಾಯಿತು ಎಂಬಂತೆ ದರ್ಶನ್ ವರ್ತಿಸುತ್ತಿದ್ದಾರೆ. ನನ್ನ ಬಾಳಿನ ಜೊತೆ ಆಟವಾಡುತ್ತಿದ್ದಾರೆ ಎಂದು ಹೇಳುತ್ತಾ ಮಗಳ ಬಗ್ಗೆ ನೆನೆದು ಪವಿತ್ರಾ ಗೌಡ ಕಣ್ಣೀರು ಹಾಕ್ತಿದ್ದಾರಂತೆ. ಜೊತೆಗೆ ಜೈಲುವಾಸದಿಂದ ಬೇಸತ್ತ ಪವಿತ್ರಾ ಗೌಡ, ಜೈಲಿನ ಊಟ ಸೇರಿದಂತೆ ಅಲ್ಲಿನ ಪರಿಸ್ಥಿತಿ ಬಗ್ಗೆ ಬೇಸರ ಹೊರ ಹಾಕಿದ್ದಾರಂತೆ. 

ಅಷ್ಟೇ ಅಲ್ಲದೇ ಮನೆಯ ಊಟ, ಮನೆಯ ವಸ್ತುಗಳ ಬಳಕೆಗೆ ಕೋರ್ಟ್ ಅನುಮತಿ ಕೇಳುವಂತೆ ರಿಟ್ ಅರ್ಜಿ ಸಲ್ಲಿಸಲು ತಾಯಿಗೆ ಪವಿತ್ರಾ ಗೌಡ ಹೇಳಿದ್ದಾರಂತೆ. ಹಾಗಾಗಿಯೇ ನಟ ದರ್ಶನ್ ಇಂದ ಅಂತರ ಕಾಯ್ದು ಕೊಂಡಿರುವೆ ಎಂದಿದ್ದಾರಂತೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.