ಬಾಲಿವುಡ್ ಸುಂದರಿ ಊರ್ವಶಿ ರೌಟೇಲಾಗೆ ಬಂಗಾರದ ಕೇಕ್ ತಿನ್ನಿಸಿದ ಹನಿಸಿಂಗ್; ಇದರ ಉದ್ದೇಶ ಏನೆಂದ ನೆಟ್ಟಿಗರು

 | 
ಪಗದ

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ನಟಿ ಬಾಲಿವುಡ್ ಬ್ಯೂಟಿ ಕ್ವೀನ್ ಊರ್ವಶಿ ರೌಟೇಲಾ ಅವರು ಈ ಬಾರಿ ಯೊಯೊ ಹನಿಸಿಂಗ್ ಜೊತೆ ಬರ್ತ್​ಡೇ ಆಚರಿಸಿ ಚಂದದ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಲವ್​ ಡೋಸ್ 2 ಸೆಟ್​ನಲ್ಲಿ ಬರ್ತ್​ಡೇ ಸೆಲೆಬ್ರೇಷನ್. 24 ಕ್ಯಾರೆಟ್ ಗೋಲ್ಡ್ ಕೇಕ್. ಥಾಂಕ್ಯೂ ಹನಿಸಿಂಗ್ ಎಂದು ನಟಿ ಬರೆದುಕೊಂಡಿದ್ದಾರೆ. ರೆಡ್ ರೋಸ್ ಹಾಗೂ ರೆಡ್ ಹಾರ್ಟ್ ಎಮೋಜಿಯನ್ನು ಕೂಡಾ ನಟಿ ಕ್ಯಾಪ್ಶನ್​ನಲ್ಲಿ ಸೇರಿಸಿಕೊಂಡಿದ್ದಾರೆ. ನನ್ನ ಪ್ರಯಾಣದ ಉಡುಪು ನಿಮ್ಮ ಉಪಸ್ಥಿತಿಯು ಕೃತಜ್ಞತೆಯ ಎಳೆಗಳಿಂದ ನೇಯಲ್ಪಟ್ಟಿದೆ.

ನಿಮ್ಮ ದಣಿವರಿಯದ ಪ್ರಯತ್ನಗಳು ಮತ್ತು ನನ್ನ ಬಗ್ಗೆ ನಿಜವಾದ ಕಾಳಜಿ ನನ್ನ ವೃತ್ತಿಜೀವನದಲ್ಲಿ ಅದ್ಭುತ ಅಧ್ಯಾಯವನ್ನು ರಚಿಸಿದೆ. ನನ್ನ ಭಾವನೆಗಳ ಆಳವನ್ನು ನಿನಗಾಗಿ ಹಿಡಿದಿಡುವಲ್ಲಿ ಪದಗಳು ತತ್ತರಿಸುತ್ತವೆ ಎಂದು ನಟಿ ಬರೆದುಕೊಂಡಿದ್ದಾರೆ.ನಟಿ ಬ್ರಾಡ್ ನೆಕ್​​ಸ್ಟೈಲ್​ನ ರೆಡ್ ಗೌನ್ ಧರಿಸಿದ್ದರು. ಅವರು ಖುಷಿಯಲ್ಲಿ ಕೇಕ್ ಕಟ್ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಇದರಲ್ಲಿ ಹನಿ ಸಿಂಗ್ ಮತ್ತು ಊರ್ವಶಿ ಮಾತ್ರ ಕಾಣಿಸಿದ್ದಾರೆ. ಫೋಟೋಗೆ 4 ಲಕ್ಷಕ್ಕೂ ಹೆಚ್ಚು ಲೈಕ್ಸ್ ಕೂಡಾ ಬಂದಿವೆ. ಹನಿಸಿಂಗ್ ನಟಿಗೆ ಕೇಕ್ ತಿನ್ನಿಸಿದ್ದಾರೆ. ಅವರ ಫೋಟೋಸ್ ವೈರಲ್ ಆಗಿದ್ದು ವಾವ್ ಸೂಪರ್ ಕೇಕ್ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಕೇಕ್ ಗಾತ್ರ ದೊಡ್ಡದಾಗಿದ್ದು ಕಂಪ್ಲೀಟ್​ ಕೇಕ್ ಗೋಲ್ಡ್ ಪ್ಲೇಟೆಡ್ ಆಗಿತ್ತು.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.