'ಪುಟ್ಟಕ್ಕನ ಮಗಳು' ಸೀರಿಯಲ್ ನ ಟಿ ಎಷ್ಟು ಮುದ್ದಾಗಿದ್ದಾ ರೆ; ಇವ್ರು ಕರ್ನಾಟಕದ ಎಂಜಿನಿಯರ್ ಕೂಡ ಆಗಿದ್ದಾರೆ
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಪ್ರಮುಖ ನಟಿ ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ, ತಮ್ಮ ಸೋಶಿಯಲ್ ಮೀಡಿಯಾದಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಸಂಜನಾ , ಹೆಚ್ಚಾಗಿ ರಿಲ್ಸ್, ಡ್ಯಾನ್ಸ್, ಫೊಟೋಶೂಟ್ ಮಾಡಿಸಿಕೊಂಡು ವಿಡಿಯೋ, ಫೋಟೋಗಳನ್ನು ಶೇರ್ ಮಾಡುವ ಮೂಲಕ ಸದಾ ಜನರ ಜೊತೆ ಕನೆಕ್ಟ್ ಆಗುತ್ತಿರುತ್ತಾರೆ.
ಕೆಲದಿನಗಳ ಹಿಂದಷ್ಟೇ ನಟಿ ಕಾಶ್ಮೀರಕ್ಕೆ ತೆರಳಿ ಅಲ್ಲಿ ಮಂಜಿನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದರು. ಇದೀಗ ಸಂಜನಾ ಬುರ್ಲಿ ರೇಷ್ಮೆ ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿಕೊಂಡಿದ್ದು, ತುಂಬಾನೆ ಮುದ್ದು ಮುದ್ದಾಗಿ ಕಾಣಿಸುತ್ತಿದ್ದಾರೆ. ತಿಳಿ ಹಸಿರು ಬಣ್ಣದ ಸಿಲ್ಕ್ ಸೀರೆಗೆ, ನೀಲಿ ಬಣ್ಣದ ಹೆವಿ ಹ್ಯಾಂಡ್ ವರ್ಕ್ ಇರುವ ಬ್ಲೌಸ್ ಧರಿಸಿರುವ ಸಂಜನಾ, ಅದಕ್ಕೊಪ್ಪುವ ಹಸಿರು ಬಣ್ಣದ ಸ್ಟೋನ್ ನೆಕ್ಲೇಸ್, ಈಯರಿಂಗ್ಸ್ ಧರಿಸಿದ್ದು, ಅಭಿಮಾನಿಗಳು ಅಮ್ಮಂಗೆ ಹೇಳಿ ಬೇಗನೆ ದೃಷ್ಟಿ ತೆಗೆಸಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನು ಈ ಚಲುವೆ ಈ ಹಿಂದೆ ಲಗ್ನಪತ್ರಿಕೆ ಧಾರವಾಹಿಯಲ್ಲಿ ನಟಿಸಿದ್ದರು.ಕಾರಾಣಾಂತರಗಳಿಂದ ಧಾರಾವಾಹಿ ಮತ್ತು ಪಾತ್ರಗಳು ಪ್ರೇಕ್ಷಕರನ್ನು ತಲುಪುವ ಮುನ್ನವೇ ಬಹಳ ಬೇಗ ಪ್ರಸಾರ ನಿಲ್ಲಿಸಿತು. ನಂತರ ಧಾರಾವಾಹಿಯಲ್ಲಿ ನಟಿಸುವುದು ಬೇಡ, ವಿದ್ಯಾಭ್ಯಾಸದ ಕಡೆ ಗಮನ ಕೊಡೋಣ ಎಂದು ಸುಮ್ಮನಿದ್ದೆ. ಮೂರು ತಿಂಗಳ ನಂತರ ನಿರ್ದೇಶಕರಾದ ಆರೂರು ಜಗದೀಶ್ ಅವರು ನನಗೆ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಟಿಸುವಂತೆ ಕೇಳಿದರು.
ಪ್ಯಾಂಡೆಮಿಕ್ ಮುಗಿದ ಬಳಿಕ ಆಗಷ್ಟೇ ಕಾಲೇಜು ಓಪನ್ ಆಗಿದ್ದರಿಂದ ನನ್ನಿಂದ ಧಾರಾವಾಹಿಗೆ ತೊಂದರೆಯಾಗಬಹುದು ಮತ್ತು ನನ್ನ ವಿದ್ಯಾಭ್ಯಾಸಕ್ಕೂ ಕಷ್ಟವಾಗಬಹುದು ಎಂದು ನನ್ನರಸಿ ಬಂದ ಉತ್ತಮ ಅವಕಾಶವನ್ನು ಮೊದಲು ನಿರಾಕರಿಸಿದ್ದೆ. ಕೊರೊನಾ ಮೂರನೇ ಅಲೆಯಿಂದಾಗಿ ಪುನಃ ಆನ್‌ಲೈನ್ ತರಗತಿ ಶುರುವಾಯಿತು. ಆನ್‌ಲೈನ್ ತರಗತಿಯಾದ್ದರಿಂದ ನಟನೆ ಮತ್ತು ಓದನ್ನು ಬ್ಯಾಲೆನ್ಸ್ ಮಾಡಬಹುದು ಎಂದು ಧೈರ್ಯ ಮಾಡಿ ನಾನೇ ಆರೂರು ಜಗದೀಶ್ ಅವರಿಗೆ ಕರೆ ಮಾಡಿ ನಟಿಸಲು ಒಪ್ಪಿಗೆ ಸೂಚಿಸಿದೆ.
ಇಲ್ಲದಿದ್ದರೆ ಪಾತ್ರದ ಯಶಸ್ಸನ್ನು ನಾನು ಕಳೆದುಕೊಳ್ಳುತ್ತಿದ್ದೆ. ಎಲ್ಲಾ ವಯೋಮಾನದವರಿಗೂ ನನ್ನ ಪಾತ್ರ ಬಹಳ ಖುಷಿ ನೀಡಿದೆ. ಹಳ್ಳಿಯ ಮುಗ್ಧ ಜನರು, ಇದ್ದರೆ ನಿನ್ನಂಥ ಹೆಣ್ಣುಮಗಳು ಇರಬೇಕೆಂದು ಹೆಮ್ಮೆಯಿಂದ ಮಾತನಾಡಿಸುತ್ತಾರೆ. ಬಹಳ ಖುಷಿಯಾಗುತ್ತದೆ. ಹಿರಿಯ ಕಲಾವಿದೆ ಉಮಾಶ್ರೀಯವರೊಂದಿಗೆ ನಟಿಸುವಂಥ ಸೌಭಾಗ್ಯ ನನ್ನದಾಗಿದೆ. ಅವರಿಂದ ಸಾಕಷ್ಟು ಕಲಿಯುತ್ತಿದ್ದೇನೆ.
ಇಂಥ ಒಂದು ಅದ್ಭುತ ಧಾರಾವಾಹಿ ತಂಡದೊಂದಿಗೆ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ಎಂದು ಹೇಳಿದ್ದಾರೆ. ನಾನು ಧಾರವಾಹಿ ನಟಿಸದಿದ್ದರೆ ಇಷ್ಟು ಹೊತ್ತಿಗಾಗಲೇ ಡಾಕ್ಟರ ಇಲ್ಲವೇ ಇಂಜಿನಿಯರ್ ಆಗಿರುತ್ತಿದ್ದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.