ಬಿಗ್ ಬಾಸ್ ನಿಂದ ಬಂದ ಬಳಿಕ‌‌ ನಮ್ರತಾ ಗೌಡ ಎಷ್ಟು ಮುದ್ದಾಗಿದ್ದಾರೆ ಗೊ ತ್ತಾ

 | 
Jd
ಕಿರುತೆರೆ ನಟಿ ನಮ್ರತಾ ಗೌಡ ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡು ಕಿಚ್ಚು ಹಚ್ಚಿದ್ದಾರೆ. ಕಡುಗೆಂಪು ವರ್ಣದ ವಿಶೇಷ ವಿನ್ಯಾದ ದಿರಿಸಿನಲ್ಲಿ ಗ್ಲಾಮರಸ್‌ ಅವತಾರದಲ್ಲಿ ಎದುರಾಗಿದ್ದಾರೆ. ನೋಡಿದೊಡನೆ ತಿಂದು ಬಿಡಬೇಕು ಎನ್ನುವಷ್ಟು ಚಂದದ ಚೆರ್ರಿ ಹಣ್ಣು ರೀತಿಯಲ್ಲಿ ಕಾಣುತ್ತಿದ್ದಾರೆ.
ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಬಳಿಕ ಜನಪ್ರಿಯತೆಯ ಮುನ್ನೆಲೆಗೆ ಬಂದಿದ್ದಾರೆ ಕಿರುತೆರೆ ನಟಿ ನಮ್ರತಾ ಗೌಡ.ಬಿಗ್‌ ಬಾಸ್‌ನಿಂದ ಹೊರ ಬಂದ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿರುವ ನಟಿ ನಮ್ರತಾ, ಬಗೆಬಗೆ ಫೋಟೋಗಳ ಮೂಲಕ ಮಿಂಚುತ್ತಿರುತ್ತಾರೆ. ಅಭಿಮಾನಿಗಳ ಮನಸ್ಸಿಗೆ ಉಲ್ಲಾಸ ತರುತ್ತಿದ್ದಾರೆ.
https://youtube.com/shorts/VCtLQIFFR44?si=rzVuB1a3UoDYrOuA
ಸಾಂಪ್ರದಾಯಿಕ ಉಡುಗೆಯ ಜತೆಗೆ ಮಾಡರ್ನ್‌ ಕಾಸ್ಟ್ಯೂಮ್‌ನಲ್ಲಿಯೂ ಎದುರಾಗಿ ಅಚ್ಚರಿ ಮೂಡಿಸುತ್ತಿರುತ್ತಾರೆ ನಮ್ರತಾ. ಫ್ಯಾಮಿಲಿ ಜತೆ ಸುತ್ತಾಟ, ಪ್ರವಾಸ ಹೀಗೆ ಎಲ್ಲೆಂದರಲ್ಲಿ ಹೋಗುವ ನಮ್ರತಾ, ಅಲ್ಲಿನ ಕ್ಷಣಗಳನ್ನು ಸೋಷಿಯಲ್‌ ಮೀಡಿಯಾ ಪುಟಕ್ಕಿಳಿಸುತ್ತಿರುತ್ತಾರೆ. ಇದೀಗ ಬೀಚ್‌ ಬಳಿ ಕಡುಗೆಂಪು ಉಡುಗೆಯಲ್ಲಿ ಕಣ್ಮನ ಸೆಳೆದಿದ್ದಾರೆ ಈ ಕಣ್ಮಣಿ. 
ವಿಶೇಷ ವಿನ್ಯಾಸವುಳ್ಳ ಕಟ್‌ ಗೌನ್‌ ಧರಿಸಿ ಚೆಂದದ ಫೋಟೋಗಳಿಗೆ ಪೋಸ್‌ ನೀಡಿದ್ದಾರೆ ನಮ್ರತಾ.ನಟಿಯ ಈ ನಾಟಿ ಸ್ಟೈಲ್‌ ಫೋಟೋಗಳಿಗೆ ಅವರ ಫ್ಯಾನ್ಸ್‌ ಬಗೆಬಗೆ ಕಾಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  ಸೂಪರ್‌, ಮೈಂಡ್‌ ಬ್ಲೋಯಿಂಗ್‌, ಮಸ್ತ್‌ ಎಂದೆಲ್ಲ ಕಾಮೆಂಟ್‌ ಹಾಕುತ್ತ, ಹಾರ್ಟ್‌ ಎಮೋಜಿಯನ್ನೂ ರವಾನಿಸುತ್ತಿದ್ದಾರೆ.