ದೇವಸ್ಥಾನದಲ್ಲಿ ಹೇಗೆ ಸುಳಿಗೆ ನಡೆಯುತ್ತದೆ, ಭಕ್ತರು ಹಾಕಿ ಹರಕೆ ಹಣ ಎಲ್ಲಿಗೆ ಹೋಗುತ್ತದೆ ಗೊ.ತ್ತಾ

 | 
ಗದದ

ಭಕ್ತರ ಹಣ ಸರ್ಕಾರಿ ಖಜಾನೆಗೆ ಸೇರುತ್ತದೆ ಇದು ನಿಮಗೆ ಗೊತ್ತಿರಲಕ್ಕಿಲ್ಲ ಚುನಾವಣೆಯ ಸಂಧರ್ಭದಲ್ಲಿ ಅಧಿಕಾರಕ್ಕೆ ಬರಲು ವಿವಿಧ ಬಿಟ್ಟಿ ಭಾಗ್ಯಗಳನ್ನು ಘೋಷಿಸಿ ತನ್ಮೂಲಕ ಭಾರೀ ಬಹುಮತದಿಂದ ಆಯ್ಕೆಯಾದ ನಂತರ ಹರಸಾಹಸದಿಂದ ಹಂತ ಹಂತರದಲ್ಲಿ ಜನರ ಮೂಗಿಗೆ ತುಪ್ಪ ಸವರುವಂತೆ, ಭಾಗ್ಯಗಳನ್ನು ಜಾರಿಗೆ ಮಾಡಿ ರಾಜ್ಯದ ಯಾವುದೇ ಅಭಿವೃದ್ದಿಕಾರ್ಯಗಳಿಗೆ ಹಣವಿಲ್ಲಾ!! ನಮ್ಮ ಹತ್ರಾ ಏನು ನೋಟ್ ಪ್ರಿಂಟ್ ಮಾಡುವ ವಿಷಿನ್ ಇಟ್ಟುಕೊಂಡಿದ್ದೇವಾ? ಚುನಾವಣಾ ಸಮಯದಲ್ಲಿ ಹೇಳಿರುವುದೆಲ್ಲವನ್ನೂ ಜಾರಿಗೆ ತರಲು ಆಗುತ್ತಾ? 

ಎಂದು ವಿಧಾನಸಭಾ ಅಧಿವೇಷನದಲ್ಲೇ ಹೇಳುವಂತಹ ಉದ್ಧಟನ ತೋರುವ ಇದೇ ಮುಖ್ಯಮಂತ್ರಿಗಳು ಈ ನಾಡಿನ ಬಹುಸಂಖ್ಯಾತರಾದ ಹಿಂದೂಗಳಿಂದ ಸಂಗ್ರಹಿಸಲಾದ ತೆರಿಗೆ ಹಣದಲ್ಲಿ ಅಲ್ಪಸಂಖ್ಯಾತರ ಓಲೈಕಾಗಿ 10 ಸಾವಿರ ಕೋಟಿ ಹಣವನ್ನು ನೀಡುವುದಾಗಿ ಆಶ್ವಾಸನೆ ನೀಡಿದ್ದಲ್ಲದೇ ಮೂರ್ನಾಲ್ಕು ಸಾವಿರ ಕೋಟಿ ಹಣವನ್ನು ಈಗಾಗಲೇ ಬಿಡುಗಡೆ ಮಾಡುವ ಮೂಲಕ ಅಧಿಕಾರಕ್ಕಾಗಿ ಅಹಿಂದ ಎಂಬ ಹೆಸರಿನಲ್ಲಿ ಹಿಂದೂಗಳನ್ನು ಮತ್ತೊಮ್ಮೆ ಒಡೆಯಲು ಮುಂದಾಗಿರುವುದಲ್ಲದೇ, ದೇವಾಲಯಗಳ ಅರ್ಚಕರುಗಳ ವೇತನಕ್ಕೂ ಕೈ ಹಾಕಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ.

ಸರ್ಕಾರೀ ಅಧೀನದ ಮುಜರಾಯಿ ಇಲಾಖೆಗಳ ವ್ಯಾಪ್ತಿಗೆ ಬರುವ ಹಿಂದೂಗಳ ದೇವಾಯಗಳಲ್ಲಿ ಹುಂಡಿಗೆ ಹಾಕಿದ ಕಾಣಿಕೆ ದೇವರಿಗೆ, ಆರತಿ ತಟ್ಟೆಯಲ್ಲಿ ಹಾಕಿದ ಕಾಣಿಕೆ ಅರ್ಚಕರಿಗೆ, ಹಾಗಾಗಿ ಕಾಣಿಕೆ ಹಾಕುವ ಮುನ್ನ ಭಕ್ತಾಧಿಗಳ ಗಮನಕ್ಕೆ ಎಂಬ ಫಲಕವನ್ನು ಅಳವಡಿಸುವ ಮೂಲಕ ದೇವಾಲಯಗಳನ್ನೇ ಸರ್ಕಾರದ ಆದಾಯದ ಕೇಂದ್ರವನ್ನಾಗಿ ಮಾಡಿಕೊಳ್ಳುವಂತಹ ದೈನೇಸಿ ಸ್ಥಿತಿಗೆ ಬಂದಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.

ಸರ್ಕಾರಿ ದೇವಾಲಯಗಳ ಹುಂಡಿಗಳಲ್ಲಿ ಭಕ್ತಾದಿಗಳು ಶ್ರದ್ದೆಯಿಂದ ನೀಡುವ ಆದಾಯದ ಮೂಲಕ ಕೋಟಿ ಕೋಟಿ ಹಣ ಸಂಗ್ರಹಿಸುವ ಸರ್ಕಾರ, ಮುಜರಾಯಿ ಇಲಾಖೆಗೆ ವ್ಯಾಪ್ತಿಗೆ ಬರುವ ರಾಜ್ಯಾದ್ಯಂತ ಇರುವ ಸಾವಿರಾರು ದೇವಾಲಯದ ಅರ್ಚಕರಿಗೆ ತಸ್ತಿಕ್ ಹಣದ ರೂಪದಲ್ಲಿ ಕೊಡುವ ಹಣ ಅರ್ಚಕರ ಜೀವನ ಬಿಡಿ, ದೇವಾಲಯದ ದೈನಂದಿನ ಪೂಜಾ ಕಾರ್ಯಗಳಿಗೆ ಅವಶ್ಯಕವಾದ ಹೂವು ಹಣ್ಣು ದೇವರ ದೀಪಕ್ಕೆ ಎಣ್ಣೆ ಮುಂತಾದವುಗಳಿಗೂ ಸಾಲದಾಗಿದೆ ಎಂದರು ಸುಳ್ಳಲ್ಲಾ. 

ಆದರೆ ಇದೇ ಸರ್ಕಾರ ಹಿಂದೂಗಳ ದೇವಾಲಯದಕ್ಕಿ ಸಂಗ್ರಹಿಸಿದ ಹಣವನ್ನು ಸರ್ಕಾರಕ್ಕೆ ಯಾವುದೇ ರೀತಿಯಲ್ಲೂ ಆದಾಯವನ್ನು ತಾರದಿರುವ ಅಲ್ಪಸಂಖ್ಯಾತರ ಮಸೀದಿ ಮತ್ತು ಚರ್ಚುಗಳ ದುರಸ್ತಿ ಮತ್ತು ನಿರ್ವಹಣೆಗೆ ಅಲ್ಲದೇ ಹಜ್ ಭವನ, ಹಜ್ ಯಾತ್ರೆಗಳಿಗೆ ಖರ್ಚು ಮಾಡಲು ಮಾತ್ರಾ ಎಗ್ಗಿಲ್ಲದೇ ಖರ್ಚುಮಾಡುವ ಪರಿ ನಿಜಕ್ಕೂ ವಿಪರ್ಯಾಸವಾಗಿದೆ. ಭಕ್ತರ ಹಣ ಸರ್ಕಾರದ ಅಧಿಕಾರವಷ್ಟೇ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.