ಮೇಘಾ ಶೆಟ್ಟಿ ಮುಖ ಹೇಗಾಗಿದೆ ಗೊ ತ್ತಾ; ಚಿತ್ರರಂಗ ಕಣ್ಣೀ ರು

 | 
Ha

ಜೊತೆ ಜೊತೆಯಲಿ ಧಾರವಾಹಿ ಮೂಲಕ ಕನ್ನಡ ಪ್ರೇಕ್ಷಕರ ಮನೆ ಮಗಳಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಮೇಘಾ ಶೆಟ್ಟಿ ಈಗ ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿದ್ದಾರೆ. ಇದೀಗ ಅವರು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ ವಿಡಿಯೋ ನೋಡಿ ಇವರಿಗೇನಾಗಿ ಹೋಯ್ತು ಎಂದು ಫ್ಯಾನ್ಸ್ ಆತಂಕಪಡುವಂತಾಗಿದೆ.

ಮೇಘಾ ಶೆಟ್ಟಿ ತಮ್ಮ ಇನ್ ಸ್ಟಾ ಪುಟದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಅವರ ಕಣ್ಣುಗಳು ಊದಿಕೊಂಡು ತೀರಾ ನಿತ್ರಾಣರಾಗಿ ಕಾಣುತ್ತಿದ್ದಾರೆ. ಹಾಗಿದ್ದರೂ ಶೂಟಿಂಗ್ ಸೆಟ್ ನಲ್ಲಿರುವುದಾಗಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಮೇಘಾ ಶೆಟ್ಟಿಗೆ ಆಗಿದ್ದೇನು ಇಲ್ಲಿದೆ ವಿವರ.

ಸದ್ಯಕ್ಕೆ ಪ್ರಜ್ವಲ್ ದೇವರಾಜ್ ಜೊತೆ ಸಿನಿಮಾ ಮಾಡುತ್ತಿರುವ ಮೇಘಾ ಶೆಟ್ಟಿ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡಿದೆಯಂತೆ. 103 ಡಿಗ್ರಿ ಜ್ವರವಿದ್ದರೂ ಮೇಕಪ್ ಹಾಕಿಕೊಂಡು ಶೂಟಿಂಗ್ ಗೆ ರೆಡಿಯಾಗಿದ್ದಾರೆ. 103 ಡಿಗ್ರಿ ಜ್ವರವಿರುವಾಗಲೂ ಮೇಕಪ್ ಹಾಕಿಕೊಂಡರೆ ಹೀಗೇ ಕಾಣಿಸೋದು ಎಂದು ವಿಡಿಯೋ ಹಂಚಿಕೊಂಡಿದ್ದಾರೆ.

ಇಷ್ಟೊಂದು ಜ್ವರವಿದ್ದಾಗಲೂ ನಟಿ ಶೂಟಿಂಗ್ ನಲ್ಲಿ ಭಾಗಿಯಾಗುತ್ತಿರುವುದು ಒಂದು ಕಡೆ ಅಭಿಮಾನಿಗಳಿಗೆ ಆತಂಕವಾದರೆ ಮತ್ತೊಂದು ಕಡೆ ಅವರ ಕರ್ತವ್ಯ ನಿಷ್ಠೆಗೆ ಮೆಚ್ಚುಗೆಯೂ ಇದೆ. ಕೊನೆಯದಾಗಿ ಮೇಘಾ ಶೆಟ್ಟಿ ಅಭಿನಯಿಸಿದ್ದ ಕೈವ ಸಿನಿಮಾ ಬಿಡುಗಡೆಯಾಗಿತ್ತು. ಇದೀಗ ಮತ್ತಷ್ಟು ಸಿನಿಮಾಗಳು ಶೂಟಿಂಗ್ ಹಂತದಲ್ಲಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.