50ವಷ೯ ಹಳೆಯ ನಟ ಕಾಶಿನಾಥ್ ಮನೆ ಹೇಗಿದೆ, ಬರೋಬ್ಬರಿ ಇಷ್ಟೊಂದು ಜನ
Sep 15, 2024, 20:53 IST
|
ಒಬ್ಬ ಅತ್ಯುತ್ತಮ ಕಲಾವಿದ, ನಿರ್ದೆಶಕ ಕಾಶಿನಾಥ್ ನಮ್ಮನ್ನಗಲಿ ಕೆಲವು ವರ್ಷಗಳೇ ಕಳೆದಿವೆ.ಕಾಶಿನಾಥ್ ಕುಂದಾಪುರ ಸಮೀಪವಿರುವ ಕೋಟೇಶ್ವರ ಎಂಬಲ್ಲಿ ಒಂದು ಮಧ್ಯಮ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರು. 1982 ರಲ್ಲಿ ಕನ್ನಡ ಚಿತ್ರರಂಗದಲ್ಲಿ ಸುರೇಶ್ ಹೆಬ್ಳಿಕರ್ ಅಭಿನಯದ ಅಮರ ಮಧುರ ಪ್ರೇಮ ಎಂಬ ಚಿತ್ರದಲ್ಲಿ ಕಾಣಿಸಿಕೊಂಡ ಇವರು 1984 ರಲ್ಲಿ ಅನುಭವ ಚಿತ್ರವನ್ನು ನಿರ್ದೇಶಿಸಿ, ನಟಿಸಿದರು. ಈ ಚಿತ್ರದಲ್ಲಿ ಅಭಿನಯ ಇವರಿಗೆ ಜೋಡಿಯಾಗಿ ನಟಿಸಿದ್ದರು.
ಕಾಶಿನಾಥ್ ಅವರ ಸಿನಿಮಾಗಳು ಅಂದ್ರೆ ಚಿತ್ರರಂಗದಲ್ಲಿ ಒಂದು ರೀತಿಯ ಕೆಟ್ಟ ಸಿನಿಮಾ ಎಂದು ನೋಡುವ ಮನೋಭಾವ ಇತ್ತು. ಮಡಿವಂತಿಕೆ, ಸಂಸ್ಕ್ರತಿ, ಆಚಾರ, ವಿಚಾರ, ಸಂಪ್ರದಾಯವನ್ನ ಬಿಂಬಿಸುವ ಸಿನಿಮಾಗಳು ಹೆಚ್ಚಾಗಿದ್ದ ಸಮಯದಲ್ಲಿ, ಅದಕ್ಕೆ ವಿರುದ್ಧವಾಗಿ ಕಾಶಿನಾಥ್ ಚಿತ್ರಗಳು ಬಂದವು. ಚಿತ್ರರಂಗವೆಲ್ಲ ಒಂದು ದಿಕ್ಕಿನಲ್ಲಿ ಹೋಗುತ್ತಿದ್ದರೇ, ಕಾಶಿನಾಥ್ ಅವರೇ ಇನ್ನೊಂದು ದಿಕ್ಕಿನಲ್ಲಿ ಸಾಗಿದರು.
ಅಂದು ಉಪೇಂದ್ರ ಸೇರಿದಂತೆ ಹಲವಾರು ಮಂದಿ ಇವರಿಂದ ಸಿನಿಮಾ ಮಾಡುವ ಕುರಿತು ಕಥೆ ಬರೆದು ನಿರ್ದೇಶನ ಮಾಡುವುದನ್ನು ಕಲಿತಿದ್ದಾರೆ. ಅಂದು ಅವರು ವಾಸವಾಗಿದ್ದ 50 ವರ್ಷದ ಹಳೆಯ ಮನೆಯಲ್ಲಿ ಇಂದಿಗೂ ಜನರಿದ್ದಾರೆ. ತಂದೆಯ ಮಾತನ್ನು ಇಂದಿಗೂ ಅವರ ಮಗ ಅಭಿಮನ್ಯು ಚಾಚು ತಪ್ಪದೇ ಪಾಲಿಸಿಕೊಂಡು ಬಂದಿದ್ದಾರೆ. ಹೂವಿನ ಹಣ್ಣಿನ ಗಿಡಗಳನ್ನು ಬೆಳೆಸಿ ಮನೆಯ ಸುತ್ತಲೂ ಹಸಿರನ್ನು ಹಾಸಿದ್ದಾರೆ.
ನಟಿಸುವ ಆಸೆ ಇದ್ದರೂ ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ಅವಕಾಶ ವಂಚಿತರಾದ ಅಭಿಮನ್ಯು ಎಲ್ಲಿಗೆ ಪಯಣ ಯಾವುದೋ ದಾರಿ' ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ತಣ್ಣಗೆ ಚಿತ್ರೀಕರಣ ಮುಗಿಸಿಕೊಂಡಿರುವ ಈ ಚಿತ್ರದ ಟೀಸರ್ ಇದೀಗ ಬಿಡುಗಡೆಗೊಂಡಿದೆ. ಸೀಮಿತ ದೃಷ್ಯಗಳಲ್ಲಿಯೇ ಕುತೂಹಲದ ಕೆನೆಗಟ್ಟಿಕೊಂಡಿರುವಂತೆ ಭಾಸವಾಗುವ ಈ ಟೀಸರ್ ಪ್ರೇಕ್ಷಕರನ್ನು ಸಲೀಸಾಗಿ ತನ್ನತ್ತ ಸೆಳೆದುಕೊಳ್ಳುವಂತಿದೆ. ಇದರಿಂದ ಅಭಿಮನ್ಯು ಕೂಡ ಮತ್ತಷ್ಟು ಉತ್ಸಾಹ ತುಂಬಿಕೊಂಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.