ನಟಿ ರಶ್ಮಿಕಾ ಮಂದಣ್ಣ ಅವರ ಸಕ್ಸಸ್ ಹಿಂದಿನ ಸಾಹನ ಹೇಗಿದೆ ಗೊ‌ ತ್ತಾ

 | 
Hjj

ಕನ್ನಡದಲ್ಲಿ ಕಿರಿಕ್‌ ಪಾರ್ಟಿ ಸಿನಿಮಾದ ಯಶಸ್ಸಿನ ಬಳಿಕ ಟಾಲಿವುಡ್‌ಗೆ ನೆಗೆದು ಬಳಿಕ ಬಾಲಿವುಡ್‌ನಲ್ಲೂ ಜನಪ್ರಿಯತೆ ಪಡೆದಿರುವ ರಶ್ಮಿಕಾ ಮಂದಣ್ಣ ಅವರ ಯಶಸ್ಸಿನ ಹಿಂದೆ ಹಾರ್ಡ್‌ ವರ್ಕ್‌ ಇರುವುದು ಸುಳ್ಳಲ್ಲ. ಇದೇ ಸಮಯದಲ್ಲಿ ತಮ್ಮ ಸೌಂದರ್ಯ, ಫಿಟ್ನೆಸ್‌ ಕುರಿತು ಅತೀವ ಕಾಳಜಿ ಹೊಂದಿದ್ದಾರೆ ಅನಿಮಲ್‌ ನಟಿ.

ಆಗಾಗ ತನ್ನ ವರ್ಕೌಟ್‌ ವಿಡಿಯೋಗಳನ್ನು, ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಅನಿಮಲ್‌, ಪುಷ್ಪಾ: ದಿ ರೈಸ್‌, ವಾರಿಸು, ಗೀತಾ ಗೋವಿಂದಮ್‌, ಡಿಯರ್‌ ಕಾಮ್ರೆಡ್‌ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಅವರು ವರ್ಕೌಟ್‌ ಮಾಡುತ್ತಿರುವ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ.

ನನಗೆ ಕೋರ್‌ ಸದೃಢಗೊಳಿಸುವ ವರ್ಕೌಟ್‌ ಮಾಡುತ್ತಿರುವ ಸಂದರ್ಭವು ಅತೀವ ಸಂತೋಷ ನೀಡುತ್ತದೆ ಎಂದು ಆ ವಿಡಿಯೋಗೆ ಕ್ಯಾಪ್ಷನ್‌ ನೀಡಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ ಅವರು ಹೊಸ ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿಯಾಗಿದ್ದಾರೆ.ಕೋರ್‌ ಸದೃಢಗೊಳಿಸಲು ಹಲವು ವ್ಯಾಯಾಮಗಳು ನೆರವಾಗುತ್ತವೆ. 

ಗ್ಲೂಟ್‌ ಬ್ರೀಡ್ಜ್‌, ಪ್ಲ್ಯಾಂಕ್‌, ಸೈಡ್‌ ಪ್ಲ್ಯಾಂಕ್‌, ಕ್ರಂಚಸ್‌, ಬರ್ಡ್‌ ಡಾಗ್‌ ಎಕ್ಸರ್‌ಸೈಸ್‌, ಲೆಗ್‌ ರೈಸ್‌, ಕೇಬಲ್‌ ಕ್ರೌಂಚ್‌, ರಷ್ಯಾನ್‌ ಟ್ವಿಸ್ಟ್‌ ,ಸಿಟ್‌ ಅಪ್ಸ್‌, ಡ್ರ್ಯಾಗನ್‌ ಫ್ಲಾಗ್‌, ಮೆಡಿಸಿನ್‌ ಬಾಲ್‌ ಸಾಮ್‌, ಪ್ಲಾಂಕ್‌ ಲೆಗ್‌ ಲಿಫ್ಟ್‌, ಸೂಪೈನ್‌ ಟಾಯ್‌ ಟಾಪ್‌, ಯೋಗಾ ಕೋರ್‌ನಂತಹ ವ್ಯಾಯಾಮಗಳು ಕೋರ್‌ ಸದೃಢಗೊಳಿಸುವ ವ್ಯಾಯಾಮಗಳಿಗೆ ಕೆಲವು ಉದಾಹರಣೆಗಳಾಗಿವೆ. ಎಂದು ವ್ಯಾಯಾಮ ಪ್ರಿಯರಿಗೆ ಮಾಹಿತಿ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.