'ನಿಮ್ಮ ನಿರ್ಗತಿಕ ಜೀವನ ಹೇಗಿದೆ ಎಂದ ಆಂಕರ್; ಓಮ್ಮೆಲೆ ಸಿಡಿದೆದ್ದ ಪ್ರಕಾಶ್ ರಾಜ್;

 | 
ಗಗ

ಕಳೆದ ನಾಲ್ಕಾರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಹು ಬೇಡಿಕೆಯಲ್ಲಿರುವ ಎರಡು ಪದಗಳು, ವರದಿಗಾರರೊಬ್ಬರು ಬಹುಭಾಷಾ ನಟ, ನಿರ್ದೇಶಕ ಪ್ರಕಾಶ್ ರಾಜ್‌ಗೆ ನಿಮ್ಮ ನಿರ್ಗತಿಕ ಜೀವನ ಹೇಗೆ ನಡೆಯುತ್ತಿದೆ? ಎಂದು ಕರೆಯುವುದಕ್ಕೂ, ಪ್ರಕಾಶ್ ರಾಜ್, ಅದು ನಿರ್ಗತಿಕ ಅಲ್ಲ, ನಿರ್ದಿಗಂತ ಎಂದು ತಿದ್ದಿ ಮಾತು ಮುಂದುವರೆಸುತ್ತಾರೆ.

ಇತ್ತೀಚಿಗೆ ಪ್ರಕಾಶ್ ರಾಜ್ ಅವರ ನಿರ್ದಿಗಂತ ಸಂಸ್ಥೆಯ ವಿರುದ್ಧ ಮಹತ್ವದ ಆರೋಪವೊಂದು ಕೇಳಿಬಂದಿತ್ತು.  ಮೊರಾರ್ಜಿ ವಸತಿ ಶಾಲೆಗಳಷ್ಟೇ ಅಲ್ಲ, ಸರಕಾರಿ ವಸತಿ ನಿಲಯಗಳಿಗೆ ಹಣ ಕೊಡಲು ಕಾಂಗ್ರೆಸ್‌ ಸರಕಾರಕ್ಕೆ ಕೈ ಬರುತ್ತಿಲ್ಲ. ಅಲ್ಲಿನ ಮಕ್ಕಳಿಗೆ ಒಳ್ಳೇ ಆಹಾರವಿಲ್ಲ, ನೀರೂ ಇಲ್ಲ. ಸರಕಾರಿ ರಂಗಾಯಣಗಳಿಗೆ ಬಿಡಿಗಾಸೂ ಇಲ್ಲ. 

ಆದರೆ ಈಚೆಗಷ್ಟೇ ಪ್ರಕಾಶ್ ರಾಜ್ ಸ್ಥಾಪಿಸಿದ ನಿರ್ದಿಗಂತಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಸರಕಾರ ಹಣದ ಹೊಳೆ ಹರಿಸುತ್ತಿದೆ ಎಂದು ಜೆಡಿಎಸ್ ಆರೋಪಿಸಿ ಟ್ವೀಟ್ ಮಾಡಿತ್ತು. ಅಷ್ಟಕ್ಕೂ ಬಹುಭಾಷಾ ನಟ ಪ್ರಕಾಶ್ ರೈ ಸಿನಿಮಾಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಸಿನಿಮಾಗಲ್ಲಿ ನಟಿಸುತ್ತಿರುವ ಜೊತೆಗೆ ತಮ್ಮ ಮೂಲವಾದ  ರಂಗಭೂಮಿಗೆ ಪ್ರಕಾಶ್ ರೈ ಮರಳಿದ್ದಾರೆ.

ಹಾಗೆಂದು ಅವರು ನಾಟಕದಲ್ಲಿ ನಟಿಸುತ್ತಿಲ್ಲ ಬದಲಿಗೆ ನಾಟಕಕರ್ಮಿಗಳಿಗಾಗಿ ಸುಂದರವಾದ, ಸಕಲ ಸೌಕರ್ಯ ಸಜ್ಜಿತ ವೇದಿಕೆಯನ್ನು ಒದಗಿಸಿದ್ದಾರೆ. ಶ್ರೀರಂಗಪಟ್ಟಣದ ಸಮೀಪ ಪ್ರಶಾಂತ ಸ್ಥಳವೊಂದರಲ್ಲಿ ನಿರ್ದಿಗಂತ ಹೆಸರಿನ ನಾಟಕ ಇನ್​ಕ್ಯುಬೇಟರ್ ರಂಗ ಚಟುವಟಿಕೆ ನೆಲೆಯನ್ನು ನಿರ್ಮಿಸಿದ್ದಾರೆ. ಬಡವರಿಗೆ ಅಸಹಾಯಕರಿಗೆ ಇದು ಉತ್ತಮ ನೆಲೆ ಆಗಲಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.