ಮಹಿಳೆಯರು ಎಷ್ಟು ಹೊತ್ತು ತಮ್ಮ ಮೂತ್ರ ಹಿಡಿದಿಟ್ಟುಕೊಳ್ಳುತ್ತಾರೆ, ಸಂಶೋಧಕರು ಹೊರಹಾಕಿದ ಅಚ್ಚರಿ ಸತ್ಯಾಂಶ

 | 
ಸ್
ಪ್ರತಿಯೊಬ್ಬರೂ ಮೂತ್ರವನ್ನು ಹಿಡಿದಿಟ್ಟುಕೊಳ್ಳುವುದು ಬಹಳ ಕಷ್ಟಕರ. ಕೆಲವೊಮ್ಮೆ ಎಲ್ಲಾದರೂ ದೂರ ಪ್ರಯಾಣ ಮಾಡುತ್ತಿರುವಾಗ ಶೌಚಾಲಯಕ್ಕೆ ಹೋಗಲು ಅವಕಾಶ ಸಿಗುವುದಿಲ್ಲ, ಅಥವಾ ಪಕ್ಕದಲ್ಲೆಲ್ಲೂ ಶೌಚಾಲಯಗಳಿರುವುದಿಲ್ಲ ಅಂತಹ ಸಂದರ್ಭದಲ್ಲಿ ನಾವು ಮೂತ್ರವನ್ನು ಕಟ್ಟಿಟ್ಟುಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಕಚೇರಿಯಲ್ಲಿದ್ದರೆ ಅಥವಾ ಮನೆಯಲ್ಲಿದ್ದರೂ ಕೆಲವೊಂದು ಕಾರಣಗಳಿಂದಾಗಿ ಮೂತ್ರವನ್ನು ಹಿಡಿದಿಡಬೇಕಾಗುತ್ತದೆ. ಒಂದೆರಡು ದಿನ ಹೀಗೆ ಮಾಡಿದರೆ ಸರಿ, ಆದರೆ ಪ್ರತಿದಿನ ನೀವು ಮೂತ್ರವನ್ನು ಕಟ್ಟುವುದರಿಂದ ಮುಂದೆ ಆರೋಗ್ಯದ ಸಮಸ್ಯೆ ಕಾಡಲಾರಂಭಿಸುತ್ತದೆ.
ಸಾಮಾನ್ಯವಾಗಿ ಮಕ್ಕಳ ಮೂತ್ರಕೋಶ ಸಣ್ಣದಿರುತ್ತದೆ. ಹಾಗಾಗಿ ಮೂತ್ರಕೋಶ ಬಹಳ ಬೇಗನೆ ತುಂಬುತ್ತದೆ. ಹಾಗಾಗಿ ಅವರು ಆಗಾಗಾ ಮೂತ್ರ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಮಕ್ಕಳು ದಿನಕ್ಕೆ ಹತ್ತು ಬಾರಿಯಾದರೂ ಮೂತ್ರ ವಿಸರ್ಜಿಸುತ್ತಾರೆ. ಅದೇ ದೊಡ್ಡವರ ವಿಷ್ಯಕ್ಕೆ ಬಂದಾಗ ದಿನಕ್ಕೆ ಆರರಿಂದ ಏಳುಬಾರಿ ಮೂತ್ರವಿಸರ್ಜಿಸುವುದು ನಾರ್ಮಲ್. ಆಗಿದೆ. ಆಅದರೆ ಕೆಲವರು ದಿನಕ್ಕೆ ನಾಲ್ಕು ಬಾರಿ ಮೂತ್ರಮಾಡುವವರೂ ಇದ್ದಾರೆ, ಇನ್ನೂ ಕೆಲವರು ದಿನಕ್ಕೆ ಹತ್ತು ಬಾರಿ ಮೂತ್ರ ಮಾಡುತ್ತಾರೆ.
ಮೂತ್ರ ಹಿಡಿದಿಡುವುದರಿಂದ ಅಥವಾ ಕಟ್ಟುವುದರಿಂದ ಒಂದು ರೀತಿ ನೋವಾಗುವುದು , ಹೊಟ್ಟೆ ಉಬ್ಬಿದಂತಾಗುವುದು, ಹೊಟ್ಟೆ ನೋವಾಗುವುದು ಎಲ್ಲಾ ಸಾಮಾನ್ಯ. ಇದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮೂತ್ರ ವಿಸರ್ಜನೆ ಮಾಡದೆ ಬಹಳ ಸಮಯಗಳ ಕಾಲ ಇರುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವುಗಳು ಯಾವುವು ಅನ್ನೋದನ್ನು ನೋಡೋಣ.
ಮಹಿಳೆಯರು 3 ರಿಂದ 4 ಗಂಟೆಗಳ ಕಾಲ ಮೂತ್ರವನ್ನು ತಡೆಯಬಲ್ಲರು. ನೀವು ದೀರ್ಘಕಾಲದವರೆಗೆ ನಿಮ್ಮ ಮೂತ್ರವನ್ನು ಹಿಡಿದಿಟ್ಟುಕೊಳ್ಳುವುದರಿಂದ, ನೀವು ಮೂತ್ರದ ಸೋಂಕು ಕಾಡುವ ಸಾಧ್ಯತೆಯ ಹೆಚ್ಚು. ಬ್ಯಾಕ್ಟೀರಿಯಾಗಳು ನೈಸರ್ಗಿಕವಾಗಿ ಮೂತ್ರನಾಳದಲ್ಲಿ ಇರುತ್ತವೆ ಮತ್ತು ಮೂತ್ರದೊಂದಿಗೆ ಹೊರಹಾಕಲ್ಪಡುತ್ತವೆ. ಮೂತ್ರಕೋಶದಲ್ಲಿ ಮೂತ್ರವನ್ನು ಹಿಡಿದಿಟ್ಟುಕೊಂಡಾಗ, ಬ್ಯಾಕ್ಟೀರಿಯಾಗಳು ಬೆಳೆದು ಮೂತ್ರನಾಳದ ಯಾವುದೇ ಭಾಗದಲ್ಲಿ ಸೋಂಕನ್ನು ಉಂಟುಮಾಡಬಹುದು.ಯುಟಿಐಗಳು ಅಸಹನೀಯವಾಗಿ ನೋವಿನಿಂದ ಕೂಡಿರುತ್ತವೆ ಮತ್ತು ಒಮ್ಮೆ ಪ್ರಚೋದಿಸಿದರೆ, ಅವು ಮರುಕಳಿಸಬಹುದು. ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿ ಉಂಟಾಗಬಹುದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.