QR Code ಮೂಲಕ ಭಿಕ್ಷೆ ಬೇಡುತ್ತಿರುವ ಭಿಕ್ಷುಕ, ಒಂದೇ ದಿನದಲ್ಲಿ ಎಷ್ಟು ಲಕ್ಷ ಸಂಪಾದನೆ ಗೊ.ತ್ತಾ

 | 
Jjj

ಅಪಡೆಟ್ ಆಗಿದ್ದಾರೆ ಈಗಿನ ಭಿಕ್ಷುಕರು.ಸಾಮಾನ್ಯವಾಗಿ ಈ ದೇವಸ್ಥಾನಗಳ ಬಳಿ, ರೈಲ್ವೇ ಸ್ಟೇಷನ್, ಬಸ್ ನಿಲ್ದಾಣಗಳ ಬಳಿ ಅದೇ ಕೊಳೆಯಾದ ಹರಕಲು ಬಟ್ಟೆಗಳನ್ನು ಧರಿಸಿ ಒಂದಷ್ಟು ಭಿಕ್ಷುಕರು ಬಿಕ್ಷೆ ಬೇಡುತ್ತಿರುತ್ತಾರೆ. ಅದರಲ್ಲಿ ಬಹುತೇಕರು ಒಂದು ಸ್ಥಳದಲ್ಲಿ ಸುಮ್ಮನೆ ಕುಳಿತು ಭಿಕ್ಷೆ ಬೇಡುತ್ತಿದ್ದರೆ, ಇನ್ನೂ ಕೆಲವು ಭಿಕ್ಷುಕರು ತಮ್ಮ ಅಸಹಾಯಕತೆಯನ್ನು ಹೇಳಿಕೊಂಡು ಊಟಕ್ಕೆ ದುಡ್ಡುಕೊಡಿ ಅಂತ ಬೀದಿ ಬೀದಿ ಅಲೆಯುತ್ತಾ ಭಿಕ್ಷೆ ಬೇಡುತ್ತಿರುತ್ತಾರೆ. 

ಮತ್ತೆ ಕೆಲವು ಭಿಕ್ಷುಕರು ಮಗುವನ್ನು ಕಂಕುಳ ಜೋಳಿಗೆಯಲ್ಲಿ ಹಾಕಿಕೊಂಡು ಹಾಡುಗಳನ್ನು ಹಾಡುತ್ತಾ ಭಿಕ್ಷೆ ಬೇಡುತ್ತಿರುತ್ತಾರೆ. ಇವರ ಅಸಹಾಯಕತೆಯನ್ನು ನೋಡಲಾರದೆ ಕೆಲವೊಬ್ಬರು ಚಿಲ್ಲರೆ ಹಣವನ್ನು ಭಿಕ್ಷುಕರಿಗೆ ನೀಡುತ್ತಾರೆ. ಇನ್ನೂ ಕೆಲವರು ನನ್ನ ಬಳಿ ಚಿಲ್ಲರೆ ಹಣವಿಲ್ಲ ಅಂತ ಹೇಳಿ ಹಣ ಕೊಡದೆಯೇ ಹೊರಟು ಹೋಗುತ್ತಾರೆ. ಈ ಚಿಲ್ಲರೆ ಹಣದ ಸಮಸ್ಯೆಯೇ ಬೇಡವೆಂದು ಇಲ್ಲೊಬ್ಬ ಭಿಕ್ಷುಕ ಫೋನ್ ಪೇ ಸ್ಕ್ಯಾನರ್  ಹಿಡಿದು ಭಿಕ್ಷೆ ಬೇಡಲು ನಿಂತಿದ್ದಾನೆ.

ಈ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಭಾರತ ನಿಜವಾಗಿಯೂ ಡಿಜಿಟಲ್ ಆಗುತ್ತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಹಲವು ವಿಷಯಗಳು ವೈರಲ್ ಆಗುತ್ತಿರುತ್ತವೆ, ಅದೇ ರೀತಿ ಇದೀಗ ಡಿಜಿಲಟ್ ಭಿಕ್ಷುಕನ ಫೋಟೊ ವೈರಲ್ ಆಗಿದೆ. ಈ ವೈರಲ್ ಪೋಸ್ಟ್ ಅನ್ನು ಸರ್ದಾರ್ ಲಕ್ಕಿ ಸಿಂಗ್ (@luckyschawla)  ಎಂಬವರು ತಮ್ಮ X  ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ವೈರಲ್ ಫೋಟೋದಲ್ಲಿ ಯಾವುದೋ ನಗರದ ಜನ ನಿಬಿಡ ಪ್ರದೇಶದಲ್ಲಿ ಭಿಕ್ಷುಕನೊಬ್ಬ ಭಿಕ್ಷೆ ಬೇಡುತ್ತಾ ನಿಂತಿರುವುದನ್ನು ಕಾಣಬಹುದು. ಆತ ಒಂದು ಕೈಯನ್ನು ಚಾಚಿ  ಭಿಕ್ಷೆ ಹಾಕಿ ಅಂತ ಕೇಳುತ್ತಿದ್ದರೆ, ಇನ್ನೊಂದು ಕೈಯಲ್ಲಿ ಫೋನ್ ಪೇ ಸ್ಕ್ಯಾನರ್ ಹಿಡಿದು ನಿಂತಿರುವುದನ್ನು ಕಾಣಬಹುದು. ಈ ಪೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನಾವು ಎಂತೆಂತಹ ಭಿಕ್ಷುಕರನ್ನು ನೋಡಿದ್ದೇವೆ ಆದ್ರೆ ಈ ಡಿಜಿಟಲ್ ಭಿಕ್ಷುಕನನ್ನು ಹಿಂದೆಂದೂ ನೋಡಿರಲಿಲ್ಲ ಎಂದು ಹಲವರು  ಹೇಳಿದ್ದಾರೆ.