ಕನ್ನಡ ನ ಟಿ ಅಂಬಿಕಾ ಅವರು ಎಷ್ಟು ಮದುವೆ ಆಗಿದ್ದಾ ರೆ ಗೊ ತ್ತಾ

 | 
H Uu
ಅತೀ ಕಡಿಮೆ ಸಮಯದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಪ್ರತಿ ಇಂಡಸ್ಟ್ರಿಯಲ್ಲೂ ಬೇಡಿಗೆ ಗಳಿಸಿಕೊಂಡಿದ್ದ ಖ್ಯಾತ ನಟಿ ಅಂಬಿಕಾ. ಆದರೆ ಇವರು ವೃತ್ತಿ ಬದುಕಿನಲ್ಲಿ ಕಂಡಂತ ಯಶಸ್ಸು ಇವರ ವೈಯಕ್ತಿ ಜೀವನಕ್ಕೆ ಲಭ್ಯವಾಗಲಿಲ್ಲ. ಬಾಳ ಸಂಗಾತಿಯ ಆಯ್ಕೆಯಲ್ಲಿ ತಪ್ಪು ಹೆಜ್ಜೆ ಇಟ್ಟ ನಟಿ ಅಂಬಿಕಾ ತಮ್ಮ ವೈಯಕ್ತಿಕ ಜೀವನವನ್ನೇ ಹಾಳು ಮಾಡಿಕೊಂಡರು.
ಅಂಬಿಕಾ ತಮಿಳು, ಮಲಯಾಳಂ, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇವುಗಳಲ್ಲಿ ಸಾಕಷ್ಟು ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ.. ಡಾ. ರಾಜ್‌ಕುಮಾರ್‌ ಅವರ ಜೊತೆ ಅಂಬಿಕಾ ನಟಿಸಿರುವ ಬಹುತೇಕ ಚಿತ್ರಗಳು ಸೂಪರ್‌ ಹಿಟ್‌ ಆಗಿವೆ.ಅಷ್ಟೇ ಅಲ್ಲ ಅಂಬರೀಷ್‌, ಕಮಲ್ ಹಾಸನ್, ರಜನಿಕಾಂತ್, ವಿಜಯಕಾಂತ್, ಸತ್ಯರಾಜ್, ಮಮ್ಮುಟ್ಟಿ, ಮೋಹನ್ ಲಾಲ್, ದಿಲೀಪ್, ಶಂಕರ್, ಎನ್ ಟಿ ರಾಮರಾವ್, ಕೃಷ್ಣ, ಕೃಷ್ಣಂ ರಾಜು, ಚಿರಂಜೀವಿ ಅವರಂತಹ ದಕ್ಷಿಣ ಭಾರತದ ಅನೇಕ ಪ್ರಮುಖ ನಟರೊಂದಿಗೆ ನಟಿಸಿದ್ದಾರೆ.  
1967 ರಲ್ಲಿ ಜನಿಸಿದ ನಟಿ ಅಂಬಿಕಾ ಚಿಕ್ಕ ವಯಸ್ಸಿನಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟರು.ಚಕ್ಕಲಾತಿ ಎಂಬ ತಮಿಳು ಸಿನಿಮಾ ಮೂಲಕ ಸಿನಿರಂಗಕ್ಕೆ ಪ್ರವೇಶ ಮಾಡಿದರು.. ಹೀಗೆ ಹಲವು ಬಾಷೆಗಳಲ್ಲಿ ನಟಿಸಿ ಬೇಡಿಕೆ ಸೃಷ್ಟಿಸಿಕೊಳ್ಳುತ್ತಿದ್ದ ನಟಿ ಅದೇ ಸಮಯದಲ್ಲೇ ಎಂದರೇ 1988ರಲ್ಲಿ ಶೀನು ಜಾನ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.. ನಂತರ ಸಿನಿರಂಗದಿಂದ ದೂರ ಉಳಿದು ಎರಡು ಗಂಡು ಮಕ್ಕಳಿಗೆ ಜನ್ಮ ನೀಡಿದರು.
ಆದರೆ ನಂತರ ಇಬ್ಬರ ದಾಂಪತ್ಯದಲ್ಲಿ ಬಿರುಕು ಉಂಟಾಗಿ ವಿಚ್ಛೇದನ ಪಡೆದು ದೂರವಾಗುತ್ತಾರೆ... ನಂತರ ನಟಿ ಅಂಬಿಕಾ ರವಿಕಾಂತ್ ಎಂಬುವರನ್ನು ಪ್ರೀತಿಸಿ 2000ರಲ್ಲಿ ಎರಡನೇ ಮದುವೆಯಾಗುತ್ತಾರೆ.. ಆದರೆ ಈ ಸಂಬಂಧವೂ ಹೆಚ್ಚು ಕಾಲ ಉಳಿಯದೇ 2002ರಲ್ಲಿ ಡಿವೋರ್ಸ್‌ ಪಡೆದುಕೊಂಡರು.ಎರಡೆರಡು ಮದುವೆಯಾದರೂ ನೆಮ್ಮದಿ ಸಿಗಲಿಲ್ಲ ನಟಿ ಅಂಬಿಕಾ ಅವರಿಗೆ.ಈ ವೈಯಕ್ತಿಕ ಜೀವನದ ವಿಚಾರಕ್ಕಾಗಿ ಅಂಬಿಕಾ ಸಾಕಷ್ಟು ಬಾರಿ ಖಿನ್ನತೆಗೆ ಜಾರಿದ್ದರು ಎಂದು ಹೇಳಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ